ವಾಹನ ಮಾಲೀಕರ ಮತ್ತು ಚಾಲಕರ ಸಮಿತಿ ವತಿಯಿಂದ ಆಯುಧ ಪೂಜಾ ಭಕ್ತಿ, ಸೌಹಾರ್ದದ ಸಂಭ್ರಮ*
*KODAGU NEWS*
ಅಮ್ಮತ್ತಿ, ಕೊಡಗು:
ವಾಹನ ಮಾಲೀಕರ ಮತ್ತು ಚಾಲಕರ ಆಯುಧ ಪೂಜಾ ಸಮಿತಿಯ ಆಶ್ರಯದಲ್ಲಿ 31ನೇ ವರ್ಷದ ಆಯುಧ ಪೂಜಾ ಮಹೋತ್ಸವ ಬುಧವಾರ (ಅ. 1) ರಂದು ಅಮ್ಮತ್ತಿಯಲ್ಲಿ ಅದ್ದೂರಿಯಾಗಿ ನೆರವೇರಿತು. ವಾಹನಗಳಿಗೆ ಪೂಜೆ ಹಾಗೂ ಅಲಂಕಾರ ಸಲ್ಲಿಸುವ ಈ ಸಂಭ್ರಮದಲ್ಲಿ ಹಲವು ಮಂದಿ ಚಾಲಕರು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಭಕ್ತಿ–ಭಾವದಿಂದ ಪೂಜಾ ವಿಧಿಗಳನ್ನು ನೆರವೇರಿಸಿದರು.
ಕಾರ್ಯಕ್ರಮಕ್ಕೆ ವಾಹನ ಮಾಲೀಕರ ಮತ್ತು ಚಾಲಕರ ಸಮಿತಿಯ ಅಧ್ಯಕ್ಷರಾದ ಶ್ರೀ ಕುಟ್ಟಂಡ ಸಿ. ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಎಂ. ವಿಶ್ವನಾಥ, (ಕಾಫಿ ಬೆಳೆಗಾರರು ಅಮ್ಮತಿ ) ಶ್ರೀ ಕೆ. ಎಂ. ಕುಶಾಲಪ್ಪ(ಕಾಫಿ ಬೆಳೆಗಾರರು) ಮತ್ತು ಶ್ರೀ ಬಿ. ಬಿ. ರೋಶನ್ ಅಯ್ಯಪ್ಪ (ಕಾಫಿ ಬೆಳೆಗಾರರು, ಅಮ್ಮತ್ತಿ) ಉಪಸ್ಥಿತರಿದ್ದರು.
ಪೂಜೆ ಬಳಿಕ ಅತಿಥಿಗಳು ಮಾತನಾಡಿ — “ಚಾಲಕರು ಮತ್ತು ವಾಹನ ಮಾಲೀಕರು ಸಮಾಜದ ಆರ್ಥಿಕ ಚಕ್ರದ ಪ್ರಮುಖ ಅಂಗಗಳು. ಅವರ ಏಕತೆ ಮತ್ತು ಶ್ರದ್ಧೆಯಿಂದ ಆಯುಧ ಪೂಜೆಯಂತಹ ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದ ಮತ್ತು ನಂಬಿಕೆಯನ್ನು ಬಲಪಡಿಸುತ್ತವೆ” ಎಂದು ಹೇಳಿದರು.
ಸಂಜೆ ನಡೆದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಮನಮೋಹಕ ಗಾಯನದಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ನಂತರ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಮತ್ತು ಅತಿಥಿಗಳು ಒಟ್ಟಾಗಿ ಭಾಗವಹಿಸಿದರು.
ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಅಮ್ಮತಿಯ ಕಾಫಿ ಬೆಳೆಗಾರರಿಗೂ ಸಾರ್ವಜನಿಕರಿಗೆ, ಹಾಗೂ ಸೇವಾ ಮನೋಭಾವದಿಂದ ದುಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
*ಕೊಡಗುನ್ಯೂಸ್ ನೊಂದಿಗೆ ಶಿವಪ್ಪ ಅಮ್ಮತಿ*

