Close Menu
Kodagu News
    ಹೊಸ ಸುದ್ದಿ

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026

    ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ

    September 20, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ
    • ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.
    • ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ
    • ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ
    • “ವನ್ಯಜೀವಿಗಳಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?” — ರಂಜಿ ಪೂಣಚ್ಚ ಆಕ್ರೋಶ
    • ಕಾವೇರಿ ಉಳಿವಿಗೆ ಮಳೆನೀರು ಕೊಯ್ಲು, ಮರಗಳ ಸಂರಕ್ಷಣೆ ಅಗತ್ಯ: ಬಿದ್ದಂಡ ಮಾದಯ್ಯ.
    • ಸಂಪಿಗೆಕಟ್ಟೆ ಮಹದೇವಪೇಟೆ ಸಂಪರ್ಕ ರಸ್ತೆಗೆ ಕಾಂಕ್ರೀಟ್ ಭಾಗ್ಯ
    • ಕೊಡಗಿನಲ್ಲಿ ರೇವ್ ಪಾರ್ಟಿಗೆ ಖಾಕಿ ಬ್ರೇಕ್! ‘ಕೂರ್ಗ್ ರೇವ್’ ಪ್ರಚಾರ ಬೆನ್ನಲ್ಲೇ ಪೊಲೀಸರ ಎಚ್ಚರಿಕೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಅರಣ್ಯ ಇಲಾಖೆಯ ಬೇಜವಾಬ್ದಾರಿ ತರಾಟೆಗೆ ತೆಗೆದುಕೊಂಡ ಶಾಸಕರಾದ ಮಂತರ್ ಗೌಡ
    ಜಿಲ್ಲೆ

    ಅರಣ್ಯ ಇಲಾಖೆಯ ಬೇಜವಾಬ್ದಾರಿ ತರಾಟೆಗೆ ತೆಗೆದುಕೊಂಡ ಶಾಸಕರಾದ ಮಂತರ್ ಗೌಡ

    ತೀವ್ರ ಮಳೆ,ಗಾಳಿಯಿಂದ ಕೊಡಗು ಜಿಲ್ಲೆಯ ಜನಜೀವನ ಅಸ್ತವ್ಯಸ್ತ ಗೊಂಡಿರುವ ಸನ್ನಿವೇಶದಲ್ಲಿ ಅರಣ್ಯ ಇಲಾಖೆಯವರೇ ಜಿಲ್ಲೆಯ ಜನರ ಜೀವನಕ್ಕೆ ಕಂಟಕಪ್ರಾಯವಾಗಿ ವರ್ತನೆ ಮಾಡಿದ್ದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ರವರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ಮುಂಜಾನೆ ಮಡಿಕೇರಿಯಲ್ಲಿ ನಡೆದಿದೆ.

    1. ಕೆ.ನಿಡುಗಣೆ ಗ್ರಾಮದ ನಿವಾಸಿ ಅರ್ಚಕರಾದ ಕಿಶೋರ್ ಸ್ವಾಮಿ ಯವರ ಮನೆಯ ಸಮೀಪದ ಬೃಹತ್ ಮರದ ಕೊಂಬೆ ಬೆಳಗ್ಗಿನ ಜಾವ ಅತಿಯಾದ ಗಾಳಿ ಮಳೆಗೆ ಮುರಿದು ಬಿದ್ದಿದೆ.ಅದೃಷ್ಟವಶಾತ್ ಮನೆಯ ಮುಂದೆ ನಿಲ್ಲಿಸಿದ ವಾಹನಗಳ ಮೇಲೆ ಬಿದ್ದ ಕಾರಣ,ಕೂದಲೆಳೆಯ ಅಂತರದಲ್ಲಿ ಮನೆ ಬಚಾವಾಗಿದೆ.ಮತ್ತು ಯಾವುದೇ ಪ್ರಾಣ ಹಾನಿ ಸಂಭವಿಸಿಲಿಲ್ಲ.ಸುದ್ದಿ ತಿಳಿದ ತಕ್ಷಣವೇ ಗ್ರಾಮದ ಜನರು ಸೇರಿ ಮರವನ್ನು ತೆರವುಗೊಳಿಸಿ ಮಿಕ್ಕ ಮರದ ಕೊಂಬೆ ಮನೆಯ ಮೇಲೆ ಬೀಳಲು ಕ್ಷಣಗಣನೆ ಆರಂಭಿಸಿದನ್ನು ಗಮನಿಸಿ ಹಗ್ಗ ಬಳಸಿ ಹರಸಾಹಸ ಪಟ್ಟು ಅವುಗಳನ್ನು ತೆರವುಗೊಳಿಸಿ ಮನೆಯವರನ್ನು ನಿಶ್ಚಿಂತರಾಗಿಸಿ ತೆರಳಿದ್ದಾರೆ.

    ನಂತರ ನಡೆಯಿತು ನೋಡಿ ಸಿನಿಮೀಯ ಘಟನೆ. ಮರಗಳ್ಳರ ಒಡನಾಡಿಗಳಾದ ಅಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಜೀಪಿನಲ್ಲಿ ಬಂದು ಮನೆಗೆ ನುಗ್ಗಿ ಕಿಶೋರ್ ಸ್ವಾಮಿಯವರನ್ನು ಬಂಧಿಸಿ ಅಕ್ಷರಶಃ ಭಯೋತ್ಪಾದಕ ರನ್ನು ಕರೆದುಕೊಂಡು ಹೋಗುವ ಹಾಗೆ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.

    ಅವರ ಮೊಬೈಲ್ ಪೋನ್ ಕಸಿದುಕೊಂಡು ಯಾರ ಸಂಪರ್ಕಕ್ಕೂ ಸಿಗದ ಹಾಗೆ ಜಾಗೃತಿ ವಹಿಸಿದ್ದಾರೆ

    ಕಿಶೋರ್ ಸ್ವಾಮಿ( ಪೂಜೆ ಮಾಡುವ ಅರ್ಚಕ) ರವರನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಊರಿನಲ್ಲಿ ಹರಿದಾಡಿದ ಕೂಡಲೇ ಗ್ರಾಮಸ್ಥರು ಮಡಿಕೇರಿ ನಗರದಲ್ಲಿ ವಲಯ ಅರಣ್ಯ ಕಛೇರಿ,ಅರಣ್ಯ ಭವನ ಎಲ್ಲಾ ಕಡೆ ಹುಡುಕಾಡಿದರೂ ಕಿಶೋರ್ ಸ್ವಾಮಿಯವರ ಪತ್ತೆ ಇಲ್ಲ.ನಂತರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ರವರನ್ನು ಸಂಪರ್ಕಿಸಿದ್ದಾರೆ.

    ನಂತರ ಅರಣ್ಯ ಇಲಾಖೆ ಗೆಸ್ಟ್ ಹೌಸಿನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಅಲ್ಲಿಗೆ ಗ್ರಾಮಸ್ಥರು ತೆರಳಿದ್ದಾರೆ.

    ತೆನ್ನಿರ ಮೈನಾ ವಿಚಾರವನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರ ಗಮನಕ್ಕೆ ತಂದಿದ್ದಾರೆ.ಕೂಡಲೇ ಡಾ ಮಂತರ್ ಗೌಡ ರವರು ಅರಣ್ಯ ಇಲಾಖೆಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮಾತಿನ ತಪರಾಕಿ ನೀಡಿದ ಮೇಲೆ ಅರಣ್ಯ ಇಲಾಖೆಯವರು ಕಿಶೋರ್ ಸ್ವಾಮಿಯವರನ್ನು ಬಿಟ್ಟು ಕಳಿಸಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವ ಹಾವಳಿ ವನ್ಯ ಜೀವಿಗಳ ಧಾಳಿಗಿಂತಲೂ ಭಯಾನಕವಾಗಿದೆ.ಮಳೆಗಾಳಿಗೆ ಅಪಾಯಕಾರಿಯಾದ ಪ್ರದೇಶಗಳಲ್ಲಿರುವ ಮರ ತೆರವುಗೊಳಿಸುವಂತೆ ಸಾವಿರಾರು ಅರ್ಜಿ ಸಲ್ಲಿಕೆಯಾಗಿದ್ದರೂ ಅವುಗಳಲ್ಲಿ ಯಾವುದನ್ನೂ ಇತ್ಯರ್ಥ ಪಡಿಸಿರುವುದಿಲ್ಲಿ.ಮರ ಮನೆ ಮೇಲೆ ಬೀಳುತ್ತದೆ ಎಂದರೆ ಅರ್ಜಿ ಸಲ್ಲಿಸಿ.ಸ್ಥಳ ಪರಿಶೀಲನೆ ನಡೆಸುತ್ತೇವೆ ಎಂದು ಸಬೂಬು ಹೇಳುತ್ತಾರೆ.ಜನರೇ ಮರ ತೆರವುಗೊಳಿಸಿದರೆ ಬಂದು ಕೇಸ್ ಹಾಕಿ ಜನರ ಪ್ರಾಣ ತಿನ್ನುತ್ತಾರೆ.ಈ ಇಲಾಖೆಯಿಂದ ಮರಗಳ್ಳರಿಗೆ ಅನುಕೂಲಕರ ವಾತವರಣ ಇದ್ದು ಸಾಮಾನ್ಯ ಜನರು ಮಾತ್ರ ಹಿಡಿ ಶಾಪ ಹಾಕುತ್ತಿದ್ದಾರೆ.

    ಶಾಸಕದ್ವಯರು ಇವರನ್ನು ಹದ್ದುಬಸ್ತಿನಲ್ಲಿ ಇಡಲಿ ಎನ್ನುವುದು ಸಾರ್ವಜನಿಕರ ಕೋರಿಕೆ.

     

    *ಕೊಡಗು ನ್ಯೂಸ್*

    Previous Articleತಾತ್ಕಾಲಿಕ ಗುಂಡಿ ಮುಚ್ಚಿದ ನಗರಸಭೆ
    Next Article ಮನೆಯ ಗೋಡೆ ಕುಸಿದು ಮಹಿಳೆ ದುರ್ಮರಣ

    Related Posts

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಆನೆಕಾಡು ಅಪಘಾತದಲ್ಲಿ ದಾಖಲೆಗಳುಳ್ಳ ಬ್ಯಾಗ್ ಕಳೆದುಹೋಗಿದೆ.

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ವಿರಾಜಪೇಟೆ ಗಣೇಶೋತ್ಸವ: ಸೆ.25ರಿಂದ ವಾಹನ ಸಂಚಾರದಲ್ಲಿ ಬದಲಾವಣೆ

    September 21, 2026

    ಮಾಜಿ ಸಚಿವ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ

    September 20, 2026

    ಬುಡಕಟ್ಟು ಕಲಾವಿದರ ಪ್ರತಿಭೆಗೆ ಜಾಗತಿಕ ವೇದಿಕೆ ಸಿಗಲಿ: ಸಂಕೇತ್ ಪೂವಯ್ಯ

    September 20, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.