Close Menu
Kodagu News
    ಹೊಸ ಸುದ್ದಿ

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ
    • ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ
    • ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ
    • ಕುಶಾಲನಗರದಲ್ಲಿ 84ನೇ ಇಎಂಇ ಕಾರ್ಪ್ಸ್ ಡೇ ಸಂಭ್ರಮ
    • ಭಾಗಮಂಡಲ, ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾನಂಡ ಪ್ರಥ್ಯು ಆಯ್ಕೆ
    • ₹48 ಲಕ್ಷದ ರಸ್ತೆ ನಿರ್ಮಾಣ, ಮಳೆ ನೀರಿಗೆ ಮಾತ್ರ ದಾರಿಯಿಲ್ಲ!
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»Uncategorized»ಮಡಿಕೇರಿಯಲ್ಲಿ ತಂಬಾಕು ರಹಿತ ದಿನಾಚರಣೆ
    Uncategorized

    ಮಡಿಕೇರಿಯಲ್ಲಿ ತಂಬಾಕು ರಹಿತ ದಿನಾಚರಣೆ

    *********************
    ಮಡಿಕೇರಿ :-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೊಡಗು ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ತಂಬಾಕು ರಹಿತ ದಿನಾಚರಣೆ”ಯು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
    ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಯುವ ಜನತೆ ತಂಬಾಕು ಎನ್ನುವ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದು, ಅವರನ್ನು ಈ ವ್ಯಸನದಿಂದ ಮುಕ್ತರಾಗಲು ಸಮಾಜ ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳ ಬಗ್ಗೆ ಸಲಹೆ ನೀಡಿದರು.
    ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಬಿ.ಎಲ್. ಅವರು ವಿಶ್ವ ತಂಬಾಕು ರಹಿತ ದಿನಾಚರಣೆಯ ವಿಶೇಷತೆಯ ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಉದ್ದೇಶ ಮತ್ತು ಕಾರ್ಯವೈಖರಿಗಳ ಹಾಗೂ ಕೋಟ್ಪಾ ಕಾಯಿದೆ 2003ರ ಬಗ್ಗೆ ತಿಳಿಸಿ, ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕುವಿನ ಸೇವನೆಗೆ ಮಾರುಹೋಗುತ್ತಿದ್ದು ಇದರಿಂದ ಅನೇಕ ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ಯುವ ಜನತೆ ದೂರ ಉಳಿದು, ಉತ್ತಮ ಸಮಾಜ ನಿರ್ಮಿಸಿ ಎಂದು ಪ್ರಾಸ್ತವಿಕ ನುಡಿಗಳನ್ನಾಡಿದರು.
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ತಂಬಾಕು ಸೇವನೆಯಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳ ಬಗ್ಗೆ ತಿಳಿಸಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆ 2003 ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿರುವ ಬಗ್ಗೆ ತಿಳಿಸಿದರು.
    ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ದಂತ ವೈದ್ಯಧಿಕಾರಿ ಡಾ.ಅಮೂಲ್ಯ ಅವರು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀüಶರು, ಡೀನ್ ಹಾಗೂ ನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ದಂತ ವೈದ್ಯಧಿಕಾರಿಗಳು, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿಗಳು, ಎಎನ್‍ಎಂಟಿಸಿ ನರ್ಸಿಂಗ್ ವಿದ್ಯಾರ್ಥಿಗಳು, ಪ್ರಯೋಗಶಾಲಾ ತಂತ್ರಾಜ್ಞರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
    ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ಮಂಜುನಾಥ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

    Previous Articleಶಾಸಕರ ಮನೆಯಲ್ಲಿ ಪೌರಾತಿಥ್ಯ
    Next Article ಅತಿವೃಷ್ಟಿಯಿಂದ ಮನೆ ಹಾನಿ ಉದಾರತೆಯಿಂದ ವರದಿ ನೀಡಿ, ಪರಿಹಾರ ವಿತರಿಸಿ: ಎ.ಎಸ್.ಪೊನ್ನಣ್ಣ

    Related Posts

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Demo
    Demo
    ಪ್ರಮುಖ ಸುದ್ದಿ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Big News

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.