ಪೊಲೀಸರ ಕೈ ಕಟ್ಟಿದವರು ಯಾರು? ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು
ವಿರಾಜಪೇಟೆ: ಗೌರಿ-ಗಣೇಶ ವಿಸರ್ಜನಾ ಶೋಭಾಯಾತ್ರೆ ವೇಳೆ ಅಲಂಕೃತ ಮಂಟಪಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಸಂಭವಿಸಿದ ದುರಂತದ ಬೆನ್ನಲ್ಲೇ ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಮೆರವಣಿಗೆ ಆಯೋಜಕರ ಜವಾಬ್ದಾರಿಯ ಕುರಿತು ಹಾಗು ರಾಜಕೀಯವಾಗಿ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ.
ವಿಸರ್ಜನಾ ಮೆರವಣಿಗೆಗೂ ಮುನ್ನ ಕಳೆದ 10 ದಿನಗಳಿಂದ ಪೊಲೀಸ್ ಇಲಾಖೆ ಗಣೇಶೋತ್ಸವ ಸಮಿತಿಗಳಿಗೆ ಹಲವು ಬಾರಿ ಕಾನೂನು ಮತ್ತು ಸುರಕ್ಷತಾ ಅರಿವು ಮೂಡಿಸಿತ್ತು. ಎಲ್ಲಾ ಸಮಿತಿಗಳನ್ನು ಒಟ್ಟುಗೂಡಿಸಿ ಸುರಕ್ಷತಾ ಕ್ರಮಗಳ ಕುರಿತು ಡೆಮೋ ನೀಡಲಾಗಿತ್ತು. ಶಾಸಕರ ಸಮ್ಮುಖದಲ್ಲೂ ಸಭೆ ನಡೆಸಲಾಗಿತ್ತು. ಅಲಂಕಾರಿಕ ಮಂಟಪಗಳ ಗರಿಷ್ಠ ಎತ್ತರವನ್ನು 18 ಅಡಿಗೆ ಮಿತಿಗೊಳಿಸುವಂತೆ ಸೂಚಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿತ್ತು. ಇದರ ಜೊತೆಗೆ ಗಣೇಶ ಮಂಟಪಗಳ ಚಲನವಲನವನ್ನು ಡ್ರೋನ್ ಮೂಲಕ ಚಿತ್ರೀಕರಿಸಿ ಪರಿಶೀಲನೆ ನಡೆಸಲಾಗಿತ್ತು.
ವಿಶೇಷವಾಗಿ ಶಿವಕೇರಿ ಗಣೇಶ ಸಮಿತಿಗೆ 18 ಅಡಿ ಮೀರದಂತೆ ಮಂಟಪ ನಿರ್ಮಿಸುವಂತೆ ಸ್ಥಳೀಯ ಅಧಿಕಾರಿಗಳು ನೋಟಿಸ್ ನೀಡಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಆದರೂ ನಿಯಮ ಉಲ್ಲಂಘನೆಯಾಗಿದ್ದರೆ, ಮೆರವಣಿಗೆ ಆರಂಭಕ್ಕೂ ಮುನ್ನವೇ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಇದೀಗ ಕೇಳಿಬರುತ್ತಿದೆ.
ಕಾನೂನು ಪಾಲಿಸುವಂತೆ ಸೂಚನೆ ನೀಡಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಕೆಲವು ಸಮಿತಿಗಳ ಸದಸ್ಯರು ವಾಗ್ವಾದ ನಡೆಸಿದ್ದರು ಅಲ್ಲದೆ ಶುಕ್ರವಾರ ರಾತ್ರಿ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ್ದರು ಎಂಬ ಆರೋಪಗಳೂ ಕೇಳಿಬರುತ್ತಿವೆ. ಡಿಜೆಗಾಗಿ ಎರಡು ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ, ಆ ಹಣವನ್ನು ಯಾರು ನೀಡುತ್ತಾರೆ? ನೀವು ಕೊಡುವಿರೇ ಎಂದು ಕೆಲವರು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದ್ದರು ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.
ಇದರ ನಡುವೆ ಪ್ರಕರಣ ದಾಖಲಿಸುವ ವಿಚಾರವೂ ಚರ್ಚೆಗೆ ಕಾರಣವಾಗಿದೆ. ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿ ಮೂಲದ ಬಸವರಾಜು ಇದ್ದ ವಾಹನವನ್ನು ಚಲಾಯಿಸಿದ್ದ ಚಾಲಕ ಅಪರೇತರಗಳನ್ನು ಪ್ರಕರಣದಲ್ಲಿ ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆಯೋಜಕರನ್ನು ಮೊದಲ ಆರೋಪಿಗಳನ್ನಾಗಿ ಮಾಡಲಾಗಿದ್ದು, ಅನ್ವಯಿಸಿರುವ ಸೆಕ್ಷನ್‌ಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿಬರುತ್ತಿವೆ.
ಗಂಭೀರ ಗಾಯಗಳಿಗೆ ಕಾರಣವಾದ ಘಟನೆಯಲ್ಲಿ ಜಾಮೀನು ಪಡೆಯಬಹುದಾದ ಹಾಗೂ ಕಡಿಮೆ ದಂಡದ ಸೆಕ್ಷನ್‌ಗಳನ್ನೇ ಏಕೆ ಅಳವಡಿಸಲಾಗಿದೆ ಎಂಬುದಕ್ಕೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ. ಬಸವರಾಜು ಎಂಬಾತ ಬದುಕುವುದೇ ಕಷ್ಟ ಎಂಬ ವೈದ್ಯರ ಹೇಳಿಕೆಯಿದ್ದರೂ ಕಠಿಣ ಕ್ರಮ ಜರುಗಿಸಿಲ್ಲ.
ಘಟನೆ ರಾತ್ರಿ ನಡೆದಿದ್ದರೂ ಬೆಳಿಗ್ಗೆ 11 ಗಂಟೆಯವರೆಗೂ ಪ್ರಕರಣ ದಾಖಲಾಗಿರಲಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ. ಪ್ರಕರಣ ದಾಖಲಿಸುವಲ್ಲಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ. ಪೊಲೀಸ್ ಇಲಾಕೆಯ ಕೈ ಕಟ್ಟಿದವರು ಯಾರೆಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. ಇಂಥ ಘಟನೆಗಳು ನಡೆದಾಗ ಪೊಲೀಸ್ ಇಲಾಖೆಯನ್ನೂ ಅವರ ಪಾಡಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕೆಂಬ ಆಕ್ರೋಶ ಈಗ್ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಇದರ ಜೊತೆಗೆ ಈ ಪ್ರಕರಣಕ್ಕೆ ರಾಜಕೀಯ ಒತ್ತಡವಿದೆಯೇ? ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮತಬ್ಯಾಂಕ್ ರಾಜಕಾರಣದ ಪರಿಣಾಮದಿಂದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆಯೇ? ಎಂಬ ಅನುಮಾನಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಪೊಲೀಸ್ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸುವ ಅಗತ್ಯವಿದೆ.
ಕಳೆದ ಕೆಲವು ದಿನಗಳಿಂದ ಪೊಲೀಸರು ಗಣೇಶ ಮಂಟಪಗಳಿಗೆ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿದ್ದರೂ ಅವು ಪಾಲನೆಯಾಗದಿದ್ದರೆ, ನಿಯಮ ಉಲ್ಲಂಘನೆ ನಡೆದ ಹಂತ ಯಾವುದು, ಅಧಿಕಾರಿಗಳಿಂದ ಲೋಪವಾಗಿದೆಯೇ, ಆಯೋಜಕರಿಂದ ನಿರ್ಲಕ್ಷ್ಯವಾಗಿದೆಯೇ ಅಥವಾ ವಿದ್ಯುತ್ ಸುರಕ್ಷತೆಯಲ್ಲಿ ವೈಫಲ್ಯವಾಗಿದೆಯೇ ಎಂಬುದನ್ನು ತನಿಖೆಯಿಂದ ಸ್ಪಷ್ಟಪಡಿಸಬೇಕಾಗಿದೆ.
ಪೊಲೀಸ್ ಇಲಾಖೆ ಕಾನೂನ್ ಪಾಲಿಸುವಂತೆ ಹಲವು ಬಾರಿ ಕೊಡಗಿನ ಮಾಧ್ಯಮಗಳ ಮೂಲಕ ಮನವಿ ಮಾಡಿದರೂ 15 ಮಂಟಪಗಳು ಪಾಲನೆ ಮಾಡಿಲ್ಲ. ಅಧಿಕಾರಿಗಳಿಂದ ಮೃದು ದೋರನೆಯಿತ್ತೆ? ಅಥವಾ ಜನಪ್ರತಿನಿಧಿಗಳೇ ಡಿಜೆ ಮಾಡಿ ಅಂತ ಗ್ರೀನ್ ಸಿಗ್ನಲ್ ಕೊಟ್ಟರೆ? ಎಂಬ ಪ್ರಶ್ನೆ ಈಗ ಎದ್ದಿದೆ.
ಈಗ ದಾಖಲಾಗಿರುವ ಪ್ರಕರಣದ ಸಾರಾಂಶ ಇಲ್ಲಿದೆ
BNS 285, 292, 293, 125, 3(5) ಹಾಗೂ Karnataka Police Act, 1963 – Sections 37 ಮತ್ತು 109.
BNS 285 ಭಾರತೀಯ ನ್ಯಾಯ ಸಂಹಿತೆ ಸಾರ್ವಜನಿಕ ರಸ್ತೆ/ಸಾರ್ವಜನಿಕ ಮಾರ್ಗದಲ್ಲಿ ವ್ಯಕ್ತಿ ಅಥವಾ ಆಸ್ತಿಗೆ ಅಪಾಯ, ಅಡ್ಡಿ ಅಥವಾ ತೊಂದರೆ ಉಂಟುಮಾಡುವ ರೀತಿಯ ಕೃತ್ಯ.
BNS 292 ಭಾರತೀಯ ನ್ಯಾಯ ಸಂಹಿತೆ ಬೇರೆ ನಿರ್ದಿಷ್ಟ ಸೆಕ್ಷನ್‌ನಲ್ಲಿ ಶಿಕ್ಷೆ ನಿಗದಿಯಾಗದ **Public Nuisance (ಸಾರ್ವಜನಿಕ ತೊಂದರೆ/ಉಪದ್ರವ)**ಕ್ಕೆ ಅನ್ವಯಿಸುವ ಸೆಕ್ಷನ್. ಗರಿಷ್ಠ ₹1,000 ದಂಡ.
BNS 293 ಭಾರತೀಯ ನ್ಯಾಯ ಸಂಹಿತೆ ಕಾನೂನುಬದ್ಧ ಅಧಿಕಾರ ಹೊಂದಿರುವ ಸಾರ್ವಜನಿಕ ಅಧಿಕಾರಿ nuisance ನಿಲ್ಲಿಸಲು ಆದೇಶ ನೀಡಿದ ನಂತರವೂ ಅದನ್ನು ಮುಂದುವರಿಸುವುದು/ಮತ್ತೆ ಮಾಡುವುದು. ಗರಿಷ್ಠ 6 ತಿಂಗಳ ಸರಳ ಜೈಲು ಅಥವಾ ₹5,000 ದಂಡ ಅಥವಾ ಎರಡೂ.
BNS 125 ಭಾರತೀಯ ನ್ಯಾಯ ಸಂಹಿತೆ ಅಜಾಗರೂಕತೆ ಅಥವಾ rash/negligent ಕೃತ್ಯದಿಂದ ಮತ್ತೊಬ್ಬರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವುದು. ಸಾಮಾನ್ಯವಾಗಿ 3 ತಿಂಗಳವರೆಗೆ ಜೈಲು ಅಥವಾ ₹2,500 ದಂಡ ಅಥವಾ ಎರಡೂ; ಗಾಯವಾದರೆ ಹೆಚ್ಚಿನ ಶಿಕ್ಷೆ ಅನ್ವಯಿಸುತ್ತದೆ.
BNS 3(5) ಭಾರತೀಯ ನ್ಯಾಯ ಸಂಹಿತೆ Common Intention / ಸಾಮಾನ್ಯ ಉದ್ದೇಶ. ಹಲವರು ಒಂದೇ ಸಾಮಾನ್ಯ ಉದ್ದೇಶದಿಂದ ಅಪರಾಧ ಕೃತ್ಯ ಮಾಡಿದರೆ, ಪ್ರತಿಯೊಬ್ಬರ ಮೇಲೂ ಆ ಕೃತ್ಯಕ್ಕೆ ಜವಾಬ್ದಾರಿ ವಿಧಿಸುವ ತತ್ವ. ಇದು ಸ್ವತಂತ್ರ ಶಿಕ್ಷಾ ಸೆಕ್ಷನ್ ಅಲ್ಲ; ಮುಖ್ಯ ಅಪರಾಧದ ಸೆಕ್ಷನ್ ಜೊತೆಗೆ ಅನ್ವಯಿಸುತ್ತದೆ.
Karnataka Police Act 37 ಕರ್ನಾಟಕ ಪೊಲೀಸ್ ಕಾಯ್ದೆ ಲೌಡ್‌ಸ್ಪೀಕರ್/ಧ್ವನಿ ವರ್ಧಕ ಸಾಧನಗಳನ್ನು ನಿಗದಿತ ಮಿತಿಗಿಂತ ಹೆಚ್ಚು ಶಬ್ದದಲ್ಲಿ ಬಳಸಲು ಪರವಾನಗಿ ಅಗತ್ಯವಿರುವ ನಿಯಮ.
Karnataka Police Act 109 ಕರ್ನಾಟಕ ಪೊಲೀಸ್ ಕಾಯ್ದೆ Section 36, 36A ಅಥವಾ 37 ಅಡಿಯಲ್ಲಿ ಮಾಡಲಾದ ಆದೇಶ/ನಿರ್ದೇಶನ ಅಥವಾ licenceನ ಷರತ್ತುಗಳನ್ನು ಉಲ್ಲಂಘಿಸಿದರೆ ಶಿಕ್ಷೆ. ಗರಿಷ್ಠ 3 ತಿಂಗಳ ಜೈಲು ಅಥವಾ ₹500 ದಂಡ ಅಥವಾ ಎರಡೂ.
ಸರಳವಾಗಿ ಹೇಳುವುದಾದರೆ, FIRನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಡ್ಡಿ/ತೊಂದರೆ, ಸಾರ್ವಜನಿಕ nuisance, ಅದನ್ನು ನಿಲ್ಲಿಸುವ ಆದೇಶದ ನಂತರವೂ ಮುಂದುವರಿಸುವುದು, ಇತರರ ಸುರಕ್ಷತೆಗೆ ಅಪಾಯ ಉಂಟುಮಾಡುವ rash/negligent ಕೃತ್ಯ, ಹಾಗೂ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಸಾಮಾನ್ಯ ಉದ್ದೇಶದಿಂದ ಕೃತ್ಯದಲ್ಲಿ ಭಾಗವಹಿಸಿರುವುದು ಎಂಬ ಕಾನೂನು ಅಂಶಗಳನ್ನು ಒಳಗೊಂಡ ಸೆಕ್ಷನ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಅದರ ಜೊತೆಗೆ ಲೌಡ್‌ಸ್ಪೀಕರ್ ಬಳಕೆಗೆ ಸಂಬಂಧಿಸಿದ Karnataka Police Act Section 37 ಮತ್ತು ಅದರ ಆದೇಶ/ನಿಯಮ ಉಲ್ಲಂಘನೆಗೆ Section 109 ಸೇರಿಸಲಾಗಿದೆ.
ಮುಖ್ಯವಾಗಿ: FIRನಲ್ಲಿ ಸೆಕ್ಷನ್ ಹಾಕಿರುವುದು ಆರೋಪದ ನೋಂದಣಿ ಮಾತ್ರ; ಆ ವ್ಯಕ್ತಿ/ವ್ಯಕ್ತಿಗಳು ಆ ಅಪರಾಧಗಳನ್ನು ನಿಜವಾಗಿಯೂ ಮಾಡಿದ್ದಾರೆ ಎಂದು ಅದು ಅಂತಿಮವಾಗಿ ಸಾಬೀತುಪಡಿಸುವುದಿಲ್ಲ. ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಯ ನಂತರವೇ ಅಂತಿಮ ಹೊಣೆಗಾರಿಕೆ ನಿರ್ಧಾರವಾಗುತ್ತದೆ.

