
ಸೈಬರ್ ಕ್ರೈಂ ಆರೋಪಿ ಬಂಧನ
ಕೊಡಗು ಜಿಲ್ಲಾ ಪೊಲೀಸ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿ ವೇತನ, ಮನೆ ಸಾಲ ಹಾಗೂ ಇತರೆ ಕಾರಣಕ್ಕಾಗಿ ಹಲವು ಜನರಿಂದ ಬ್ಯಾಂಕ್ ಖಾತೆಗಳನ್ನು ತೆರೆದು ಸದರಿ ಖಾತೆಗಳನ್ನು ಖಾತೆದಾರ ಪರವಾಗಿ ನಿರ್ವಹಣೆ ನಡೆಸಿ ಸೈಬರ್ ವಂಚನೆಗೆ ಬಳಸುತ್ತಿರುವ ಕುರಿತು ದಿನಾಂಕ: 13-07-2026 ರಂದು ಮ್ಯೂಲ್ ಅಕೌಂಟ್‌ಗೆ ಸಂಬಂಧಪಟ್ಟಂತೆ ಕರಣ್, ಈಚಲುಬೀಡು ಗ್ರಾಮ, ಯಸಳೂರು ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ.
ಶ್ರೀ ಐ.ಪಿ.ಮೇದಪ್ಪ, ಡಿವೈಎಸ್‌ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ ಹಾಗೂ ಠಾಣಾ ಸಿಬ್ಬಂದಿಯವರುಗಳು ಸದರಿ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಖಾತೆಗಳಲ್ಲಿ ಸುಮಾರು ರೂ. 35 ಲಕ್ಷಕ್ಕೂ ಹಚ್ಚಿನ ವಹಿವಾಟು ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.
ವಿಶೇಷ ಸೂಚನೆ:- ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಯನ್ನು ಬೇರೆ ಯಾರಿಗೂ ಬಳಸಲು ನೀಡಬಾರದು. ಹಾಗೇ ನೀಡಿದಲ್ಲಿ ಸದರಿ ಖಾತೆಗಳನ್ನು ಕಾನೂನು ಬಾಹಿರ ಕೃತ್ಯಗಳಿಗೆ ಉಪಯೋಗಿಸಿರುವುದು ಕಂಡುಬಂದಲ್ಲಿ ಸದರಿ ಬ್ಯಾಂಕ್ ಖಾತೆದಾರರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

