
ಮೂರು ದಿನವಾದರು ಮರದ ದಿಮ್ಮಿ ತೆರವುಗೊಳಿಸದ ಅರಣ್ಯ ಇಲಾಖೆ
ಅಪಾಯದ ಅರಿವಿಲ್ಲದೆ ಸಂಚರಿಸುತ್ತಿದೆ ನಿತ್ಯ ಸಾವಿರಾರು ವಾಹನಗಳು
ಕಳೆದ ಎರಡು ದಿನಗಳ ಹಿಂದೆ ಮಡಿಕೇರಿ ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಬೋಯಿಕೇರಿ ಬಳಿ ಬಾರಿ ಗಾಳಿ ಮಳೆಗೆ ಬೃಹದಾಕಾರದ ಮರವೊಂದು ಹೆದ್ದಾರಿಗೆ ಮುರಿದು ಬಿದ್ದಿತ್ತು. ಬಳಿಕ ಅರಣ್ಯ ಇಲಾಖೆ ಮರವನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿತ್ತು..
ಆದರೆ ಈಗೇನಾಗಿದೆ?
ಮರವನ್ನು ಕತ್ತರಿಸಿ ದೊಡ್ಡ ದೊಡ್ಡ ದಿಮ್ಮಿಗಳನ್ನು ರಸ್ತೆ ಬಂಡಿಯಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತೆ ಅತ್ತ ಕಡೆ ಬರಲೇ ಇಲ್ಲ. ಪರಿಣಾಮ ದಿಮ್ಮಿಗಳು ರಸ್ತೆಗೆ ಅಂಟಿಕೊಂಡಿದ್ದು ತಿರುವಿನಿಂದ ಬರುವ ವಾಹನಗಳಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆಯಿದೆ. ಮಳೆ ಹೆಚ್ಚಾಗಿರುವುದರಿಂದ ರಾತ್ರಿ ಸಂಚರಿಸುವ ವಾಹನಗಳಿಗೆ ಈ ದೊಡ್ಡ ದೊಡ್ಡ ಮರದ ದಿಮ್ಮಿಗಳು ಅಪಾಯದ ಸೂಚನೆಯನ್ನು ನೀಡಿದ್ದು ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

