ಕುಶಾಲನಗರದಲ್ಲಿ ‘ವಿಶ್ವ ಪರಿಸರ ದಿನ’ ಆಚರಣೆ
ವರದಿ – ಶ್ರೀಧರ್ ನಾರಾಯಣ್ ಕುಶಾಲನಗರ.
ಕುಶಾಲನಗರ : ಕುಶಾಲನಗರ ತಾಲೂಕು ಕಾನೂನು ಸೇವಾ ಸಮಿತಿಯಿಂದ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ಸಿವಿಲ್ ನ್ಯಾಯಾಧೀಶೆ ಚೈತ್ರ ಎಲ್. ರಿಂದ ಅರಣ್ಯ ಇಲಾಖೆಯ ನಾಟ ಸಂಗ್ರಹಾಲಯದಲ್ಲಿ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭ ಕುಶಾಲನಗರ ವಕೀಲರ ಸಂಘದ ಉಪಾಧ್ಯಕ್ಷ ಕೆ. ಎಸ್. ವೆಂಕಟರಮಣ ರಾವ್, ಕಾರ್ಯದರ್ಶಿ ಕೆ.ಬಿ. ಮೋಹನ್, ಮೋಹನ್ ಕುಮಾರ್, ಅರಣ್ಯ ವಲಯಾಧಿಕಾರಿ ರಕ್ಷಿತ್ ಆರ್., ಮಂಜುನಾಥ್ ಚಿನ್ನಣ್ಣನವರ್, ಡಿ ಆರ್ ಎಫ್ ಒ ಜಗದೀಶ್, ವೆಂಕಟೇಶ್ ಸೇರಿದಂತೆ ನ್ಯಾಯಾಲಯದ, ಅರಣ್ಯ ಇಲಾಖೆ ಸಿಬ್ಬಂದಿಗಳು , ವಕೀಲರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಸಿವಿಲ್ ನ್ಯಾಯಾಧೀಶೆ ಚೈತ್ರ ಎಲ್., ವಕೀಲರ ಸಂಘದ ಉಪಾಧ್ಯಕ್ಷ ಕೆ. ಎಸ್. ವೆಂಕಟರಮಣ ರಾವ್, ಕಾರ್ಯದರ್ಶಿ ಕೆ.ಬಿ. ಮೋಹನ್, ಅರಣ್ಯ ವಲಯಾಧಿಕಾರಿ ರಕ್ಷಿತ್ ಆರ್., ಮಂಜುನಾಥ್ ಚಿನ್ನಣ್ಣನವರ್, ಡಿ ಆರ್ ಎಫ್ ಒ ಜಗದೀಶ್, ವೆಂಕಟೇಶ್ ಮತ್ತಿತರರಿದ್ದರು.

