Close Menu
Kodagu News
    ಹೊಸ ಸುದ್ದಿ

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ
    • ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ
    • ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ
    • ಮಡಿಕೇರಿಯಲ್ಲಿ ಕಾರ್ಗಿಲ್ ವೀರರಿಗೆ ಬಿಜೆಪಿ–ಕಾಂಗ್ರೆಸ್ ನಾಯಕರ ಜಂಟಿ ನಮನ
    • ಮಡಿಕೇರಿ ರೋಟರಿ ವುಡ್ಸ್ ನಿಂದ ಯೋಧನಮನ – ಸೈನಿಕ ದಂಪತಿಗೆ ಸನ್ಮಾನ
    • ಕಾವೇರಿ ತಟದಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯೋತ್ಸವ ಆಚರಣೆ; ವೀರ ಯೋಧರಿಗೆ ನಮನ
    • ಯುವ ಪೀಳಿಗೆಗೆ ಕೊಡವ ಪರಂಪರೆ ಪರಿಚಯಿಸುವ ಅಗತ್ಯವಿದೆ: ಶಾಸಕ ಪೊನ್ನಣ್ಣ
    • ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಅರ್ವತೋಕ್ಲು.
    ಜಿಲ್ಲೆ

    ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಅರ್ವತೋಕ್ಲು.

    ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನ ಅರ್ವತೋಕ್ಲು.

    ✍️ ರಜಿತ ಕಾರ್ಯಪ್ಪ(9481771851)

     

    ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಾಲಯ. ಇದರ ಹೆಸರು ಬಹುಶಃ ಕೇಳಿದವರು ಕಡಿಮೆ ಇರಬಹುದು. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹೊರತುಪಡಿಸಿದರೆ ನಮ್ಮ ಕೊಡಗು ಜಿಲ್ಲೆಯಲ್ಲಿ ಮಾತ್ರ ಈ ದೇವಿಯ ಕ್ಷೇತ್ರ ಕಾಣಲು ಸಾಧ್ಯ. ಇಂತಹ ಒಂದು ಅನ್ನಪೂರ್ಣೇಶ್ವರಿ ದೇವಾಲಯ ಗೋಣಿಕೊಪ್ಪದ ಅರ್ವತೋಕ್ಲುವಿನಲ್ಲಿದೆ.

    ಇದೀಗ ಗೋಣಿಕೊಪ್ಪದ ಅರ್ವತೋಕ್ಲುವಿನಲ್ಲಿ ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.

     

    *** ೮೦೦ ವರ್ಷಗಳ ಇತಿಹಾಸ**

    ಶ್ರೀಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸುಮಾರು ೮೦೦ ವರ್ಷಗಳ ಹಿತಿಹಾಸವಿದ್ದು, ದೇವಸ್ಥಾನ ಪೂರ್ಣ ಶಿಥಿಲಾವಸ್ಥೆಗೊಂಡಿದ್ದು, ಪ್ರಸ್ತುತ ಈ ದೇವಸ್ಥಾನದ ಪುನರ್ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಈ ದೇವಿ ಸನ್ನಿಧಿ ಮನೆಯಪಂಡ ಕುಟುಂಬದ ಜಾಗದಲ್ಲಿ ನೆಲೆನಿಂತಿದೆ.

     

    *****ದೇವಾಲಯದ ನಿರ್ಮಾಣದ ಬಗ್ಗೆ ಸೂಚನೆ ನೀಡಿದ ತಂತ್ರಿಗಳು****

    ಮೂರು ವರ್ಷದ ಹಿಂದೆ ಮನೆಯಪಂಡ ಕುಟುಂಬದ ನಾಗಪ್ರತಿಷ್ಠಾಪನ ಸಂದರ್ಭದಲ್ಲಿ ಇಲ್ಲಿಯ ಬಗ್ಗೆ ಯಾವ ಮಾಹಿತಿಯೂ ಇಲ್ಲದ ಮೂಡಬಿದ್ರೆಯಿಂದ ಆಗಮಿಸಿದ ಖ್ಯಾತ ತಂತ್ರಿಗಳು ಈ ದೇವಿನೆಲೆಯ ಬಗ್ಗೆ ಪ್ರಸ್ತಾಪಿಸಿ, ದೇವಿ ನೆಲೆಯ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಈ ದೇವಿನೆಲೆ ಈ ಕುಟುಂಬಕ್ಕೆ, ಈ ಊರಿಗೆ ಸಂಬAಧಪಟ್ಟದಲ್ಲ, ಇಡೀ ನಾಡಿಗೆ ಸಂಬಧಪಟ್ಟo ಕ್ಷೇತ್ರ. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಬಿಟ್ಟರೆ ಬೇರೆ ಎಲ್ಲೂ ಇಲ್ಲದ ದೇವಿ ನೆಲೆ ಇದಾಗಿದ್ದು, ಇಲ್ಲಿಯ ವಿಶೇಷತೆ ಎಂದರೆ ದೇವಿ ಮಹಾಲಕ್ಷಿ÷್ಮ, ಮಹಾಕಾಳಿ, ಮಹಾ ಸರಸ್ವತಿಯಾಗಿ ನೆಲೆ ನಿಂತಿರುತ್ತದೆ. ಹಾಗೂ ಇದರ ಪುನರ್ ನಿರ್ಮಾಣ ಮಾಡಿದರೆ ಇಡೀ ನಾಡಿಗೆ ಸುಭೀಕ್ಷೆ ಉಂಟಾಗುತ್ತದೆ. ಈ ಕ್ಷೇತ್ರ ಬಹುದೊಡ್ಡ ವಿಶೇಷ ಕ್ಷೇತ್ರವಾಗಿ ಮಾರ್ಪಡುತ್ತದೆ. ದಿನನಿತ್ಯ ಅಸಂಖ್ಯಾತ ಭಕ್ತರು ಆಗಮಿಸಲಿದ್ದು, ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನಿರಂತರ ಅನ್ನದಾನ ಕೂಡ ನಡೆಯಲಿದೆ. ಈ ದೇವಸ್ಥಾನ ನಿರ್ಮಾಣಕ್ಕೆ ಕೇವಲ ಮನೆಯಪಂಡ ಕುಟುಂಬಸ್ಥರ, ಊರಿನವರ ದೇಣಿಗೆ ಮಾತ್ರವಲ್ಲ, ಇಡೀ ನಾಡಿನ ಸರ್ವ ಭಕ್ತರ ದೇಣಿಗೆಯೊಂದಿಗೆ ಸರ್ವರ ಕಷ್ಟವನ್ನು ಪರಿಹರಿಸುವ ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವಾಲಯದ ನಿರ್ಮಾಣ ಆಗಬೇಕಾಗಿದೆ ಎಂಬುದಾಗಿ ಸೂಚನೆ ನೀಡಿದ್ದರು.

    ***ದೀಪ ಬೆಳಗುವ ಸಂಪ್ರದಾಯ****

    ಹಾಗೆಯೇ ಈ ಊರಿನ ಹೆಸರುವಾಸಿ ದೇವಾಲಯವಾದ ಕಾಡ್ಲಯ್ಯಪ್ಪನಿಗೂ, ಬೋಜಮ್ಮೆ ಅನ್ನಪೂರ್ಣೇಶ್ವರಿಗೂ ವಿಶೇಷವಾದ ಸಂಬAಧವಿದ್ದು ಕಾಡ್ಲಯ್ಯಪ್ಪನ ಉತ್ಸವದಂದು ಬೆಳಿಗ್ಗಿನ ಜಾವ ಮನೆಯಪಂಡ ಮುತ್ತೆöÊದೆಯರು ಬೋಜಮ್ಮೆ ಅನ್ನಪೂರ್ಣೇಶ್ವರಿಗೆ ದೀಪ ಬೆಳಗಿಸುವ ಸಂಪ್ರದಾಯವಿದೆ.

    ಹಾಗೂ ಕಾಡ್ಲಯ್ಯಪ್ಪ ಉತ್ಸವದಂದು ಮೇಲೇರಿ ಬೆಂಕಿಗೆ ಹಾರುವ ಸಂದರ್ಭದಲ್ಲಿ ಬೋಜಮ್ಮೆ ಪೂಜೋ ಎನ್ನುತ್ತಾ ಮೇಲೇರಿ ಹಾರುತ್ತಾರೆ.

     

    *****ನೀಲಿ ನಕಾಶೆ *****

    ಕಳೆದ ಮೂರು ವರ್ಷದಿಂದ ಮನೆಯಪಂಡ ಕುಟುಂಬಸ್ಥರು, ಊರಿನವರ ಸಹಕಾರದೊಂದಿಗೆ ದೇವಾಲಯದ ನಿರ್ಮಾಣವನ್ನು ಪ್ರಾರಂಭ ಮಾಡಿದ್ದಾರೆ.

    ದೇವಾಲಯದ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿ ಮಾಡಿದ್ದು ಸುಮಾರು ಮೂರು ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಆಗಬೇಕಾಗಿದೆ. ಈಗಾಗಲೇ ಮನೆಯಪಂಡ ಕುಟುಂಬಸ್ಥರ ದೇಣಿಗೆಯ ಹಣದಲ್ಲಿ ಸುಮಾರು ಸುಮಾರು ೫೦ ಲಕ್ಷ ವೆಚ್ಚದಲ್ಲಿ ಗರ್ಭಗುಡಿಯ ಕಾಮಗಾರಿ ನಡೆಯುತ್ತಿದೆ. ಮುಂದಿನ ಒಂದು ವರ್ಷದೊಳಗೆ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕೆಂಬ ಸಂಕಲ್ಪ ಇರುತ್ತದೆ.

     

    **** ಕೆರೆ ನಿರ್ಮಾಣ****

     

    ಪಾಳುಬಿದ್ದ ದೇವಸ್ಥಾನವನ್ನು ಕೆಡವಿ, ದೇವಿಯ ಮೂರ್ತಿಯನ್ನು ಚಿಕ್ಕ ಬಾಲಾಲಯದಲ್ಲಿ ಸ್ಥಾಪಿಸಿ ನಿರ್ಮಾಣ ಕಾರ್ಯ ಪ್ರಾರಂಭ ಆಗುತ್ತಿರುವ ಸಂದರ್ಭದಲ್ಲಿ ಪವಾಡವೆಂಬAತೆ ಎದುರಿಗೆ ಇರುವ ಒಂದು ಚಿಕ್ಕ ಪಾಳುಬಿದ್ದ ಕೆರೆ ಕೇಂದ್ರ ಸರಕಾರದ ಅನುದಾನದಲ್ಲಿ ಅನಿರೀಕ್ಷಿತವಾಗಿ ದುರಸ್ಥಿಗೊಂಡು ದೇವಿ ಸ್ಥಾನಕ್ಕೆ ಮೆರುಗನ್ನು ನೀಡಿದೆ.

    *****ಜವಬ್ದಾರಿ ಹೊತ್ತ ಮನೆಯಪಂಡ ಕುಟುಂಬಸ್ಥರು****

    ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಮನೆಯಪಂಡ ಕುಟುಂಬ ಸದಸ್ಯರು ದೇವಸ್ಥಾನ ಆಡಳಿತ ಮಂಡಳಿ ರಚನೆ ಮಾಡಿದ್ದು, ಸದಸ್ಯರು ಇಡೀ ಕೊಡಗಿನಾದ್ಯಂತ ದೇಣಿಗೆ ಸಂಗ್ರಹದ ಕಾರ್ಯ ಕೂಡ ಮಾಡುತ್ತಿದ್ದಾರೆ. ಸರಕಾರದ ಅನುದಾನದ ನಿರೀಕ್ಷೆ ಕೂಡ ಇರುತ್ತದೆ.

     

    ****ಬಿಶು ಹಬ್ಬಕ್ಕೆ ಪೂಜೆ*****

    ವರ್ಷಂಪ್ರತಿ ಏಪ್ರಿಲ್ ತಿಂಗಳ ಬಿಶು ದಿನ ದೇವಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಹಾಗೇ ಇದೇ ಏಪ್ರಿಲ್ ತಿಂಗಳ ೧೫ ರಂದು ಬುಧವಾರ ಬಿಶುಗೆ ವಿಶೇಷ ಪೂಜೆ ನಡೆಯಲಿದ್ದು ಸರ್ವ ಭಕ್ತಾಧಿಗಳು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

     

    ಗರ್ಭ ಗುಡಿ ನಿರ್ಮಾಣ ಹಂತದಲ್ಲಿ,👆

    ಪಕ್ಕದ ಆಂಧ್ರಪ್ರದೇಶದಿಂದ ಸುಮಾರು 22 ಲಕ್ಸದ ಮೂರು ಬಣ್ಣದ ಶಿಲೆ ಕೆಂಪು, ಕಪ್ಪು, ಬಿಳಿ ಬಣ್ಣದ ಶಿಲೆ (ಗ್ರಾನೈಟ್ )ನ್ನು ತರಿಸಿದ್ದು ಗರ್ಭ ಗುಡಿ ನಿರ್ಮಾಣ ಹಂತದಲ್ಲಿ ಇರುತ್ತದೆ.

     

    *****ಮಾಹಿತಿಗಾಗಿ*****

    ಮನೆಯಪಂಡ ಗಣಪತಿ ೯೪೪೮೦೮೨೪೯೧, ಮನೆಯಪಂಡ ಅಯ್ಯಪ್ಪ ೯೮೮೦೮೧೪೯೯೭, ಮನೆಯಪಂಡ ಕಾಂತಿ ಸತೀಶ್ ೯೪೪೯೫೧೫೮೧೭, ಮನೆಯಪಂಡ ಉಷಾ ರಾಜೀವ್ ೯೪೪೮೨೧೭೨೭೦, ಮನೆಯಪಂಡ ವಿವಿನ್ ಅಯ್ಯಣ್ಣ. ೭೩೪೯೦೪೧೯೬೯, ಮನೆಯಪಂಡ ಶೈಲಾ ರವಿ ೯೭೪೧೨೦೩೦೩೨ ಇವರಿಗೆ ಕರೆ ಮಾಡಬಹುದು.

     

    *****ಕೊನೆ ಹನಿ;;;

    ನಮ್ಮ ಧರ್ಮ, ನಮ್ಮ ಆಚಾರ ವಿಚಾರ, ಸಂಸ್ಕೃತಿ ಇವುಗಳ ಉಳಿವಿಕೆಗೆ ದೈವ ದೇವರುಗಳ ಆರ್ಶಿವಾದ ಇರಲೇಬೇಕು. ಅಂತೆಯೇ ದೇವರುಗಳ ಸೇವೆ ಮಾಡಲು ನಮಗೆ ಮೊದಲು ಮನಸ್ಸಿರಬೇಕು, ಆರೋಗ್ಯ ಭಾಗ್ಯವಿರಬೇಕು. ಈ ನಿಟ್ಟಿನಲ್ಲಿ ದೇವರ ಸ್ಥಾನವನ್ನು ಮನುಜರಾದ ನಾವು ನಿರ್ಮಾಣ ಮಾಡುವ ಕನಸ್ಸು ಹೊತ್ತು ಈಗಾಗಲೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹನಿಹನಿಗೂಡಿದರೆ ಹಳ್ಳ ಎಂಬAತೆ ಎಲ್ಲರೂ ಕೈಜೋಡಿಸಿ ದೇವಾಲಯದ ಪುನರ್ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಬೇಕು. ಪ್ರತಿಯೊಬ್ಬ ಹಿಂದೂ ನಾವೆಲ್ಲ ಒಂದು ಎಂಬAತೆ ನಮ್ಮ ಕೊಡಗಿನ ಅನ್ನಪೂರ್ಣೇಶ್ವರಿ ತಾಯಿಯ ಸೇವೆ ಮಾಡಲು ಕೈಜೋಡಿಸಬೇಕಿದೆ.

    ಈ ಕ್ಷೇತ್ರ ಹೊರನಾಡು ಅನ್ನಪೂರ್ಣೆಶ್ವರಿ ಕ್ಷೇತ್ರಕ್ಕೆ ಸಮನಾಂತರವಾಗಿದ್ದು ಇಲ್ಲಿ ನಿತ್ಯಪೂಜೆಯೊಂದಿಗೆ ಅನ್ನದಾನ ನಿರಂತರ ನಡೆಯಲಿದೆ. ನಮ್ಮ ಕೊಡಗು ಜಿಲ್ಲೆಯ ಈ ತಾಯಿಯ ಕ್ಷೇತ್ರ ಭಗವದ್ ಭಕ್ತರ ನೆಚ್ಚಿನ ಕ್ಷೇತ್ರವಾಗಿ ಹೊರಹೊಮ್ಮಬೇಕಿದೆ. ಜಾತಿ, ಮತವನ್ನು ಮರೆತು ಹಿಂದೂಗಳಾಗಿ ಪ್ರತಿ ಮನೆಯ ಸದಸ್ಯರು ದೇವಾಲಯದ ಅಭಿವೃದ್ದಿಗೆ ತಮ್ಮಿಂದ ಆದ ಸಹಕಾರವನ್ನು ನೀಡಿ ನಮ್ಮ ಶ್ರದ್ದಾಕೇಂದ್ರವನ್ನು ಪುನರ್‌ನಿರ್ಮಿಸಲು ಸಹಕಾರ ನೀಡಬೇಕು. ನಮ್ಮ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುವ ಸತ್ಕಾರ್ಯವನ್ನು ಮಾಡಬೇಕು ಎಂಬುವುದೇ ಆಶಯ.

    ನಾವೇಲ್ಲರೂ ಈ ನಿಟ್ಟಿನಲ್ಲಿ ದೇವಾಲಯದ ಪುನರ್ ನಿರ್ಮಾಣಕ್ಕೆ ಸಹಕರಿಸೋಣ… ಶ್ರೀ ಬೋಜಮ್ಮೆ ಅನ್ನಪೂರ್ಣೇಶ್ವರಿ ದೇವರ ಅನುಗ್ರಹ ಸದಾ ಇರಲಿ. ದೇವರಲ್ಲಿ ನಂಬಿಕೆ ಇಡೋಣ. ಸರ್ವವು ಒಳಿತಾಗಲಿದೆ.

    Previous Articleದ್ವಿತೀಯ ಪಿಯುಸಿ ಫಲಿತಾಂಶ ಝಿಯಾ ಝೖನಬಾಗೆ ವಾಣಿಜ್ಯ ವಿಭಾಗಲ್ಲಿ ಡಿಸ್ಟಿಂಕ್ಷನ್
    Next Article ಸಿದ್ದಾಪುರ ಗ್ರಾಮದಲ್ಲಿ ಆಯೋಜನೆಗೊಂಡ, ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅತಿಥಿಯಾಗಿ ಎ. ಎಸ್ ಪೊನ್ನಣ್ಣ

    Related Posts

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಾಲ್ದಾರೆ ಸಿದ್ದೇಶ್ವರ ದೇವಸ್ಥಾನ ಪ್ರಕರಣ: ಎಫ್‌ಐಆರ್ ವಿಳಂಬ ಖಂಡಿಸಿ ಪ್ರತಿಭಟನೆ ಮುಂದುವರಿಕೆ

    July 27, 2026

    ಸೋಮವಾರಪೇಟೆಯಲ್ಲಿ ಬಿಜೆಪಿ ಪ್ರತಿಭಟನೆ: ಕಾಂಗ್ರೆಸ್‌ ವಿರುದ್ಧ ಆಕ್ರೋಶ

    July 27, 2026

    ದೇವಾಲಯ ಆವರಣದಲ್ಲಿ ಅನಧಿಕೃತ ಸಮಾಧಿ ನಿರ್ಮಾಣ ಆರೋಪ: ಪ್ರತಿಭಟನೆಗೆ ಹಿಂದೂ ಸುರಕ್ಷಾ ಸಮಿತಿಯ ಕರೆ

    July 26, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.