ವಿರಾಜಪೇಟೆ ಆರ್ಜಿ ಗ್ರಾಮದ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಸರಬರಾಜು:-ನಾಲ್ವಾರು ಆರೋಪಿಗಳು ಅಂದರ್

ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ-ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಚೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು ನಿಷೇಧಿತ ಮಾದಕ ವಸ್ತುಗಳ ಮಾರಾಟ ಸರಬರಾಜು ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣ ವ್ಯಾಪ್ತಿಯ ಅರ್ಜಿ ಗ್ರಾಮದ ಹೆಗ್ಗಡ ಜಂಕ್ಷನ್ ಸಮೀಪ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಸರಬರಾಜು ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ 7-4-2026ರಂದು ದಾಳಿ ನಡೆಸಿ ಆರೋಪಿಗಳನ್ನು ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಸದರಿ ಆರೋಪಿಗಳ ವಿರುದ್ಧ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ 20(b) NDPS
ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ
1.ಹರ್ಷದ್ ಖಾನ್ ೨೫ ವರ್ಷ ಶಾಂತಿನಗರ ಮೈಸೂರು
2. ಮುಜಾಮಿಲ್ ಅಹಮದ್ 40 ವರ್ಷ ಅಜಿತ್ ಸೇಟ್ ನಗರ ಬಿಡಿ ಕಾಲೋನಿ ಮೈಸೂರು
3. ಅಪ್ಸಲ್ ಪಾಷ 28 ವರ್ಷ ಅಜಿತ್ ಸೇಟ್ ನಗರ ಬಿಡಿ ಕಾಲೋನಿ ಮೈಸೂರು
4. ಸಾಕ್ಯೂಬ್ 32 ವರ್ಷ ಕಲ್ಯಾಣಗಿರಿ ಮೈಸೂರು
ವಶಪಡಿಸಿಕೊಂಡ ಸತ್ತುಗಳ ವಿವರ
1. 576 ಗ್ರಾಂ ಗಾಂಜಾ
2. ಒಂದು ಕಾರು (ಕೆ.ಎ-09-ಸಿ-2898 ಟೊಯೋಟಾ ಇಟಿಯೋಸ್)

