Close Menu
Kodagu News
    ಹೊಸ ಸುದ್ದಿ

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ
    • ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
    • ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ
    • ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
    • ಲಾರಿ ಡಿಕ್ಕಿ: ಟ್ಯಾಕ್ಸಿ ಚಾಲಕ ಸಾಹಿಲ್ ಸಾವು
    • ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
    • ರಾಜ್ಯಪಾಲರನ್ನು ಭೇಟಿ ಮಾಡಿದ ಶಾಸಕ ಪೊನ್ನಣ್ಣ: KPSC ಆರೋಪಗಳ ಕುರಿತು ವಿಸ್ತೃತ ಚರ್ಚೆ
    • ಮೌಲ್ಯಾಧಾರಿತ ಛಾಯಾಚಿತ್ರದ ಕಡೆ ಗಮನ ಹರಿಸಿ: ಡಾ. ನರಸಿಂಹನ್
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಗ್ರಹಣ ಸಭೆಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ಚರ್ಚೆ
    ಜಿಲ್ಲೆ

    ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಗ್ರಹಣ ಸಭೆಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ಚರ್ಚೆ

    ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಗ್ರಹಣ ಸಭೆಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳ ಕುರಿತು ಚರ್ಚೆ

    ದಿನಾಂಕ 07-03-2026 ರಂದು ಶನಿವಾರ ವಿರಾಜಪೇಟೆಯ ಪ್ರವಾಸಿಮಂದಿರದಲ್ಲಿ ಕರ್ನಾಟಕರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಪದಾಧಿಕಾರಿಗಳ ಪದಗ್ರಹಣ ಸಭೆ ಯಲ್ಲಿ ಜಿಲ್ಲೆಯ ಮೂಲಭೂತ ಸಮಸ್ಯೆಗಳು ಮತ್ತು ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಯಿತು.

     

    ಚರ್ಚೆಯ ಭಾಗವಾಗಿ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರೊಂದಿಗೆ ಜಿಲ್ಲಾ ಉಸ್ತುವಾರಿಗಳಾದ ಬೆಲ್ಲು ಕಾರ್ಯಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕಲಾ ಪ್ರಕಾಶ್, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಮತಿ ವಾಣಿ ಮಾಚಿಮಾಡ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಶ್ , ಜಿಲ್ಲಾ ಸಲಹಗಾರರಾದ ಸಜಿಲ್ ಕುಮಾರ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪವಿತ್ರ ರೈ, ಜಿಲ್ಲಾ ವಕ್ತಾರ ಜೀವನ್, ಜಿಲ್ಲಾ ಮಹಿಳಾ ಘಟಕದ ಉಸ್ತುವಾರಿ ತನುಕಿಶೋರ್, ಕುಶಾಲನಗರ ತಾಲೂಕು ಅಧ್ಯಕ್ಷೆ ಮಂಜುಳಾ, ವಿರಾಜಪೇಟೆ ತಾಲೂಕು ಉಸ್ತುವಾರಿ ರಂಜನ್ ಹಾಜರಿದ್ದರು.

     

    ಸಿದ್ದಾಪುರದ ಸರ್ಕಾರಿ ಆಸ್ಪತ್ರೆಯ ಕುಂದುಕೊರತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಘಟನೆಯು ಜಿಲ್ಲಾ ವೈದ್ಯಾಧಿಕಾರಿಗೆ ಹೋರಾಟದ ಮುಖೇನ ಒತ್ತಡ ಹೇರಿ ಜಾಗೃತಿಗೊಳಿಸಲು ತೀರ್ಮಾನಿಸಲಾಯಿತು.

     

    ಕನ್ನಡನಾಡಿನ ಜೀವನದಿ ಕಾವೇರಿ ಯು ಉಗಮಸ್ಥಾನವಾದ ಕೊಡಗಿನಲ್ಲಿಯೇ ನಾನಾ ಕಾರಣಗಳಿಂದ ಮಲಿನಗೊಂಡು ವಿಷಕಾರಿಯಾಗುತ್ತಿದ್ದು ನೇರವಾಗಿ ಕುಡಿಯಲು ಬಳಸಲಾರದ ಸ್ಥಿತಿಯನ್ನು ತಲುಪುತ್ತಿರುವುದು ಕಳವಳವೆಂದು ಆತಂಕ ವ್ಯಕ್ತವಾಯಿತು. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಯೊಂದಿಗೆ ಜಿಲ್ಲಾಡಳಿತವನ್ನು ಜಾಗೃತಿಗೊಳಿಸಲಾಗುತ್ತದೆ.

     

     

    ಕೊಡಗಿನಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುವ ಕಾರಣ ಸರಿಯಾದ ಮಾಹಿತಿಗಳ ಕೊರತೆಯಿಂದ ಬಳಲುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಸ್ತೆ ಫಲಕ ಗಳನ್ನು ಅಳವಡಿಸುವಂತೆ ಮತ್ತು ಜಿಲ್ಲೆಯ ಪರಿಸರ ವ್ಯವಸ್ಥೆ ಮತ್ತು ಪ್ರಾಕೃತಿಕ ಸೌಂದರ್ಯ ಹಾಳಾಗದಂತೆ ಪರಿಸರ ಕಾಳಜಿ ಎಚ್ಚರಿಕೆ ಫಲಕಗಳನ್ನು ಹಾಕಲು ಮನವಿ ಪತ್ರಗಳ ಮೂಲಕ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ನಿರ್ಧರಿಸಲಾಯಿತು.

     

    ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡ ಗಳ ಜನ ಸಮುದಾಯಕ್ಕೆ ವಸತಿ ಯೋಜನೆ, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ, ಅವರಿಗೆ ಇರುವ ಸರಕಾರಿ ಯೋಜನೆಗಳ ಪೂರ್ಣ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಮತ್ತು ಜಿಲ್ಲಾಡಳಿತ ಈ ಸಮುದಾಯಗಳನ್ನು ಪರಿಣಾಮಕಾರಿಯಾಗಿ ತಲುಪುವ ಕ್ರಮಗಳಿಗೆ ಮುಂದಾಗಬೇಕೆಂಬ ಹಿನ್ನೆಲೆಯಲ್ಲಿ ಮನವಿ ಪತ್ರಗಳ ಸಹಿತ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಒಮ್ಮತಕ್ಕೆ ಬರಲಾಯಿತು.

    Previous Articleಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಭಾಗದ ಜನಸಂಪರ್ಕ ಸಭೆಯಲ್ಲಿ ಪೊನ್ನಣ್ಣ ಭಾಗಿ
    Next Article ಮಾಜಿ ಶಾಸಕ ಎಂ ಪಿ ಅಪ್ಪಚ್ಚುರಂಜನ್ ರವರಿಂದ ಮಾಹಿತಿ ಕಾರ್ಯಗಾರ

    Related Posts

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026

    ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ

    August 22, 2026

    ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ

    August 22, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.