
ಬೆಂಗಳೂರು: ಜಪಾನಿನ ಟೋಕಿಯ ನಗರದಲ್ಲಿ ನಡೆದ 2026 ರ ಇಂಡೋ ಜಪಾನ್ ಹೂಡಿಕೆದಾರರ ಸಮಾವೇಶದಲ್ಲಿ ಉದ್ಯಮಿ ಹಾಗೂ ಎಂ ಅಂಡ್ ಎಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನಾಪಂಡ ಮುದ್ದಪ್ಪ ತಮ್ಮ ಸಂಸ್ಥೆಯ ಪರವಾಗಿ ಪಾಲ್ಗೊಂಡರು.
ಭಾರತ ಮತ್ತು ಜಪಾನ್ ದೇಶದ ವಿವಿಧ ಕ್ಷೇತ್ರಗಳ 60 ಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ಪಾಲ್ಗೊಂಡಿದ್ದ ಈ ಹೂಡಿಕೆದಾರರ ಸಭೆಯಲ್ಲಿ ಭಾರತದ ಉದ್ಯಮಿಗಳು ಜಪಾನಿನಲ್ಲಿ ಹಾಗೂ ಜಪಾನ್ ಉದ್ಯಮಿಗಳು ಭಾರತದಲ್ಲಿ ಹೂಡುವಿಕೆಯ ಬಗ್ಗೆ ಮೂರು ದಿನಗಳ ಕಾಲ ಸಮಾವೇಶ ನಡೆಯಿತು.
ಫೆಬ್ರವರಿ 26,27 ಹಾಗೂ 28ರ ವರೆಗೆ ನಡೆದ ಈ ಇಂಡೋ ಜಪಾನ್ ಹೂಡಿಕೆದಾರರ ಸಮಾವೇಶದಲ್ಲಿ ಹಲವಾರು ವಿಜ್ಞಾನಿಗಳು ಸೇರಿದಂತೆ ವಿವಿಧ ಪ್ರತಿಷ್ಟಿತ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

