Close Menu
Kodagu News
    ಹೊಸ ಸುದ್ದಿ

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ
    • ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ
    • ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ
    • ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
    • ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ
    • ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
    • ಲಾರಿ ಡಿಕ್ಕಿ: ಟ್ಯಾಕ್ಸಿ ಚಾಲಕ ಸಾಹಿಲ್ ಸಾವು
    • ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಕ್ರೀಡೆ»ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ
    ಕ್ರೀಡೆ

    ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ

    ಮಡಿಕೇರಿಯಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ

    ಏಪ್ರಿಲ್ 18–19 ರಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜನೆ

    ASHOK MADIKERI

    ಮಡಿಕೇರಿ:-

    ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜ(ರಿ) ಹಾಗೂ ಮಡಿಕೇರಿ ತಾಲ್ಲೂಕು ಮೊಗೇರ ಸೇವಾ ಸಮಾಜದ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟವನ್ನು ಮಡಿಕೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಸಮುದಾಯದ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಕ್ರೀಡಾಕೂಟವು ಏಪ್ರಿಲ್ 18 ಮತ್ತು 19, 2026ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.

    ರಾಜ್ಯದ ಅನೇಕ ಭಾಗಗಳಿಂದ ಮೊಗೇರ ಸಮುದಾಯದ ನೂರಾರು ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ನಡೆಯಲಿರುವ ಈ ರಾಜ್ಯಮಟ್ಟದ ಕ್ರೀಡೋತ್ಸವದಲ್ಲಿ ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಹಾಗೂ ಮಹಿಳೆಯರಿಗೆ ಥ್ರೋ ಬಾಲ್,ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ.

    ಈ ವರ್ಷದ ಕ್ರೀಡಾಕೂಟಕ್ಕೆ “ಮಹಾ ನಾಯಕ ಟ್ರೊಫಿ” ಎಂಬ ಘೋಷವಾಕ್ಯವನ್ನು ಅಳವಡಿಸಿಕೊಂಡಿದ್ದು, ಸಮುದಾಯದಲ್ಲಿ ನಾಯಕತ್ವ, ಶಿಸ್ತು, ಏಕತೆ ಹಾಗೂ ಕ್ರೀಡಾ ಮನೋಭಾವನೆ ಬೆಳೆಸುವುದು ಇದರ ಪ್ರಧಾನ ಉದ್ದೇಶವಾಗಿದೆ. ಕ್ರೀಡೆಯ ಮೂಲಕ ಯುವಜನತೆಯನ್ನು ಆರೋಗ್ಯಕರ ಜೀವನಶೈಲಿಯತ್ತ ಪ್ರೇರೇಪಿಸಿ, ಮಾದಕ ವಸ್ತುಗಳು ಹಾಗೂ ಅಸಾಮಾಜಿಕ ಚಟುವಟಿಕೆಗಳಿಂದ ದೂರವಿಡುವ ಸಾಮಾಜಿಕ ಸಂದೇಶವನ್ನೂ ಈ ಕ್ರೀಡಾಕೂಟ ನೀಡಲಿದೆ.

    ಕಾರ್ಯಕ್ರಮದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಲ್ಲಿ ಸಮಾಜದ ಹಿರಿಯರು, ಗಣ್ಯರು,ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಯೊಂದು ಕ್ರೀಡಾ ಸ್ಪರ್ಧೆಯ ವಿಜೇತ ಹಾಗೂ ರನ್ನರ್‌ಅಪ್ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳು, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

    ಕ್ರೀಡಾಕೂಟದ ಯಶಸ್ಸಿಗಾಗಿ ಈಗಾಗಲೇ ವಿವಿಧ ಸಮಿತಿಗಳನ್ನು ರಚಿಸಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಕ್ರೀಡಾಂಗಣದ ಸಜ್ಜಿಕೆ, ಆಟಗಾರರಿಗೆ ಊಟೋಪಚಾರ, ಆರೋಗ್ಯ ಸೇವೆ ವಿಶೇಷ ಗಮನ ನೀಡಲಾಗಿದೆ. ಸಮುದಾಯದ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

    ಚಂದ್ರ – 98457 32488

    ಪ್ರಕಾಶ್ – 79751 03368

    ಸುರೇಶ್ – 99028 34198

    ರಮೇಶ್ – 94834 87528

    ಕ್ರೀಡೆಯ ಮೂಲಕ ಸಮುದಾಯದ ಏಕತೆ ಮತ್ತು ಶಕ್ತಿಯನ್ನು ಪ್ರದರ್ಶಿಸುವ ಉದ್ದೇಶದಿಂದ ನಡೆಯಲಿರುವ ಈ 10ನೇ ವರ್ಷದ ರಾಜ್ಯಮಟ್ಟದ ಮೊಗೇರ ಕ್ರೀಡಾಕೂಟ ಮಡಿಕೇರಿಯಲ್ಲಿ ವಿಶೇಷ ಗಮನ ಸೆಳೆಯಲಿದೆ.

    *✍🏻ಅಶೋಕ್_ಮಡಿಕೇರಿ*

    Previous Articleಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಫೆಬ್ರವರಿ 12ರ ಮುಷ್ಕರ ನಿಮಿತ್ತ ಕರಪತ್ರ ಬಿಡುಗಡೆ
    Next Article ಕೊಡಗು ಜಾನಪದ ಪರಿಷತ್ ಆಯೋಜಿಸಿದ ಗ್ರಾಮೀಣ ಕ್ರೀಡಾ ಕೂಟದ ಮುಖ್ಯ ಅಥಿತಿಯಾಗಿ ಎ. ಎಸ್ ಪೊನ್ನಣ್ಣ

    Related Posts

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಎಸ್ ಐ ಆರ್ ಕೊಡಗಿನಲ್ಲಿ 51,932 ಮತದಾರರ ಇಳಿಕೆ

    August 24, 2026

    ಕೊಫಿಯಾ ಹೋಟೆಲ್‌ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ

    August 24, 2026

    ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ

    August 23, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.