
ವಿರಾಜಪೇಟೆ, ಆ.30: ಕೊಡಗಿನ ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ದಂತಕಥೆ, ಮಾಲೇಟಿರ ಜಗತ್ ನಂಜಪ್ಪ (68) ಅವರು ಶನಿವಾರ ಸಂಜೆ ನಿಧನರಾದರು.
ನಾಲ್ವತ್ತೊಕ್ಲು ಗ್ರಾಮದ ನಿವಾಸಿಯಾಗಿದ್ದ ಜಗತ್ ನಂಜಪ್ಪ ಅವರು ಅನಿತಾ ನಂಜಪ್ಪ ಅವರ ಪತಿಯಾಗಿದ್ದು, ದಿವಂಗತ ಮಾಲೇಟಿರ ಚೋಟು ಅವರ ಪುತ್ರರಾಗಿದ್ದರು. ಮೋಟಾರ್ ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಅವರು ಕೊಡಗಿನ ಕ್ರೀಡಾ ವಲಯದಲ್ಲಿ ಚಿರಪರಿಚಿತರಾಗಿದ್ದರು.
ಅವರು ಪತ್ನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆಯು ಆಗಸ್ಟ್ 31ರಂದು ಸೋಮವಾರ ಸಂಜೆ 4 ಗಂಟೆಗೆ ನಾಲ್ವತ್ತೊಕ್ಲು ಗ್ರಾಮದ ಸ್ವಗೃಹದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

