
ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ಜರುಗಿತು. ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಸಂಘಟನೆಯ ಸೇವೆಗೆ ಪ್ರೇರಿತರಾಗಿ ಇಸರ್ ಅಹ್ಮದ್, ಮಹಮದ್ ಹನೀಫ್, ಜಗದೀಶ್, ನಿತಿನ್ ಕುಮಾರ್, ಜೈರುದ್ದೀನ್, ಶ್ರೀನಿವಾಸ್, ಆಶಾ, ರವೀಂದ್ರ ಕುಮಾರ್, ಪ್ರಶಾಂತ್, ಮಮದ್ ಶರೀಫ್ ಹಾಗೂ ಕ್ಲಿಫರ್ಡ್ ರಾಡ್ರಿಗಸ್ ಅವರು ಅಧಿಕೃತವಾಗಿ ಸಂಘಟನೆಯನ್ನು ಸೇರಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು, ತಾವಾಗಿಯೇ ಮುಂದೆ ಬಂದು ಸಂಘಟನೆಗೆ ಸೇರ್ಪಡೆಗೊಂಡ ಎಲ್ಲರಿಗೂ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸಿದರು. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ನಾಡು-ನುಡಿಯ ಸೇವೆ ಮಾಡೋಣ ಎಂದು ಕರೆ ನೀಡಿದರು.
ಹೊಸ ಸದಸ್ಯರ ಸೇರ್ಪಡೆಯಿಂದ ಕೊಡಗು ಜಿಲ್ಲೆಯಲ್ಲಿ ಕರವೇ ಸ್ವಾಭಿಮಾನಿ ಸೇನೆಯು ಮತ್ತಷ್ಟು ಬಲಗೊಂಡಂತಾಗಿದೆ.
KODAGUNEWS


