ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
ಮಡಿಕೇರಿ: ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಬೆಂಗಳೂರು ಗೌಡ ಸಮಾಜದ ವತಿಯಿಂದ ಸಮಾಜದ ಪ್ರಮುಖರು ವಿಧಾನಸೌಧದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಪ್ರಮುಖರು, ಶಾಸಕರಾಗಿ ಆಯ್ಕೆಯಾದ ಬಳಿಕ ಸಮಾಜದ ಎಲ್ಲಾ ವರ್ಗದವರ ಏಳಿಗೆಗಾಗಿ ಪೊನ್ನಣ್ಣ ಅವರು ಶ್ರಮಿಸುತ್ತಿದ್ದಾರೆ. ಇದೀಗ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಮಹತ್ವದ ಜವಾಬ್ದಾರಿ ದೊರೆತಿರುವುದು ಸಮಾಜದ ಜನರಿಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುವ ಮೂಲಕ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಪೊನ್ನಣ್ಣ ಅವರ ಸೇವಾ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿ. ಹೊಸ ಜವಾಬ್ದಾರಿಯೊಂದಿಗೆ ಮತ್ತಷ್ಟು ಯಶಸ್ಸು ಸಾಧಿಸಿ ಉನ್ನತ ಸ್ಥಾನಕ್ಕೇರಲಿ ಎಂದು ಸಮಾಜದ ಪ್ರಮುಖರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಉಪಾಧ್ಯಕ್ಷ ಡಾ. ರಾಜೇಶ್ ತೇನನ, ನಂಗಾರು ನಿಂಗರಾಜು, ಗಣಿಪ್ರಸಾದ್ ಚಿಲ್ಲಣ, ಶಿವಪ್ರಕಾಶ್ ನಡುಬೆಟ್ಟಿರ, ಕುಶಾಲನಗರ ಗೌಡ ಸಮಾಜದ ಕುಳ್ಳಚನ ಹೆಮಂತ್, ಕೊಡಗು ಗೌಡ ಸಮಾಜ ಬೆಂಗಳೂರು ಅಧ್ಯಕ್ಷ ವಿಂಗ್ ಕಮಾಂಡರ್ (ನಿವೃತ್ತ) ಐಯಟಿ ಮನೋಜ್, ಉಪಾಧ್ಯಕ್ಷ ಮೋಹನ್ ಕುದ್ಪಾಜೆ, ಕಾರ್ಯದರ್ಶಿ ಬಿಪಿನ್ ಬೆಕಲ್, ಕೊಡಗು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಅಧ್ಯಕ್ಷ ಪಣತಾಳೆ ಪಾಲಂಗಪ್ಪ, ಕಾರ್ಯದರ್ಶಿ ಕುಂಬಗೌಡನ ಸೋಮಣ್ಣ, ಯಲಹಂಕ ಗೌಡ ಸಮಾಜದ ಅಜಿತ್ ಕುಂಚಾಲಿ ಸೇರಿದಂತೆ ವಿವಿಧ ಗೌಡ ಸಮಾಜಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


