ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಪೊನ್ನಣ್ಣ ನೇಮಕ: ವೀಣಾ ಅಚ್ಚಯ್ಯ ಅಭಿನಂದನೆ
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ, ಅವರನ್ನು ಮಾಜಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮೊದಲ ಬಾರಿಗೆ ಭೇಟಿಯಾದರು.
ಈ ವೇಳೆ ಪೊನ್ನಣ್ಣ ಅವರ ನೂತನ ಜವಾಬ್ದಾರಿಗೆ ಶುಭಾಶಯ ತಿಳಿಸಿದ ವೀಣಾ ಅಚ್ಚಯ್ಯ, ಹೊಸ ಹೊಣೆಗಾರಿಕೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಹಾರೈಸಿದರು.


