ಕೊಡಗು ಪತ್ರಕತ೯ರ ಸಂಘ, ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜನೆ – ಯೋಧರಿಗೆ ಪುಪ್ಪನಮನ, ಗಾನ ನಮನ ಸಲ್ಲಿಕೆ.
ಜುಲೈ 26 ರಂದು ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ – 125 ಸಂಘಟನೆಗಳಿಂದ ಯೋಧರಿಗೆ ಗೌರವ ನಮನ
ಮಡಿಕೇರಿ ಜು 23 – ಕಾಗಿ೯ಲ್ ನಲ್ಲಿ 27 ವಷ೯ಗಳ ಹಿಂದೆ ಭಾರತೀಯ ಯೋಧರು ತೋರಿದ ತ್ಯಾಗ, ಬಲಿದಾನ, ಶೌಯ೯ದ ಸ್ಮರಣೆಯಾಗಿ ಇದೇ ಜುಲೈ 26 ರಂದು ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಾದ್ಯಂತಲಿನ 125 ಸಂಘಸಂಸ್ಥೆಗಳು ಈ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಮಾಹಿತಿ ನೀಡಿದ್ದಾರೆ
ಮಡಿಕೇರಿಯ ಗೌಡ ಸಮಾಜದ ಸಭಾಂಗಣದಲ್ಲಿ ಜುಲೈ 26 ರಂದು ಭಾನುವಾರ ಸಂಜೆ 5 ಗಂಟೆಯಿಂದ ಆಯೋಜಿತ ಕಾಗಿ೯ಲ್ ವಿಜಯ್ ದಿವಸ್ – ಸೈನಿಕರೇ ನಾವೆಂದು ಮರೆಯೋದಿಲ್ಲ ನಿಮ್ಮನ್ನು ಎಂಬ ಸೈನಿಕರಿಗೆ ಪುಪ್ಪನಮನ – ಗಾನ ನಮನ ಮತ್ತು ಗೌರವ ನಮನ ಸಲ್ಲಿಕೆಯ ಕಾಯ೯ಕ್ರಮವನ್ನು ಮಡಿಕೇರಿ ಆಮಿ೯ ಕ್ಯಾಂಟೀನ್ ಹಿರಿಯ ವ್ಯವಸ್ಥಾಪಕ ಎನ್.ಎಸ್. ಕಾವೇರಿಯಪ್ಪ ಉದ್ಘಾಟಿಸಲಿದ್ದಾರೆ. ನಾಡಿನ ಹೆಸರಾಂತ ಗಾಯಕ ಮೈಸೂರಿನ ರಾಜೇಶ್ ಪಡಿಯಾರ್ ಮತ್ತು ತಂಡದಿಂದ ಗೀತನಮನ ಅಂಗವಾಗಿ ದೇಶಭಕ್ತಿಗೀತೆಗಳ ಕಾಯ೯ಕ್ರಮ ಆಯೋಜಿತವಾಗಿದೆ.
ಕಾಗಿ೯ಲ್ ವಿಜಯ್ ದಿನಸ್ ಕಾಯ೯ಕ್ರಮಕ್ಕೆ ಕನ್ನಡ ಮತ್ತು ಸಂಸ್ಕೖತಿ ಇಲಾಖೆ, ಶಕ್ತಿ ಪ್ರತಿಷ್ಟಾನ, ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕು, ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ವೈದ್ಯಕೀಯ ಒಕ್ಕೂಟದ ಕೊಡಗು ಜಿಲ್ಲಾ ಘಟಕ, , ಹಾರಂಗಿ ಅತ್ತೂರಿನ ಜ್ಞಾನಗಂಗ ವಸತಿ ಶಾಲೆ, ಕೊಡಗು ಗೌಡ ಸಮಾಜ, ಮಡಿಕೇರಿಯ ಚೇಂಬರ್ ಆಫ್ ಕಾಮಸ್೯, ಮೂನಾ೯ಡಿನ ಸಂಸ್ಕೖತಿ ಸಿರಿ ಬಳಗ ಟ್ರಸ್ಟ್, ಮಡಿಕೇರಿ ಇನ್ನರ್ ವೀಲ್, ಕೊಡಗು ಜಿಲ್ಲಾ ಸೌಂಡ್ಸ್, ಲೈಟ್ಸ್, ಶಾಮಿಯಾನ ಡೆಕೋರೇಷನ್ ಮಾಲೀಕರ ಸಂಘ, ಮಡಿಕೇರಿಯ ಸ್ಲಾಮಿ ಅಯ್ಯಪ್ಪ ಫ್ಲವರ್ ಸ್ಟಾಲ್ ನವರು ಸಹಯೋಗ ನೀಡಿದ್ದಾರೆ.
ಸೈನಿಕರ ನಾಡಾಗಿ ಹೆಸರಾಗಿರುವ ಕೊಡಗು ಜಿಲ್ಲೆಯಲ್ಲಿ ಅಥ೯ಪೂಣ೯ವಾಗಿ ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮ ಆಯೋಜಿಸಲಾಗುತ್ತಿದ್ದು, ಮಾಜಿ ಸೈನಿಕರಿಗೂ ನಾಡಿನ ಜನತೆ ಗೌರವ ಸಲ್ಲಿಸಲಿದ್ದಾರೆ.. ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮದ ಮೂಲಕ ಬಾರತೀಯ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸುವುದಲ್ಲದೇ, ಪ್ರಸ್ತುತ ಸೈನಿಕರಾಗಿ ದೇಶಸೇವೆ ಮಾಡುತ್ತಿರುವ ಯೋಧರು , ಕುಟುಂಬ ವಗ೯ದವರಿಗೂ ಪ್ರೋತ್ಸಾಹ ತುಂಬುವ ಕಾಯ೯ ಈ ಸಮಾರಂಭದ ಮೂಲಕ ಆಗಲಿದೆ ಎಂದೂ ಅನಿಲ್ ಹೆಚ್.ಟಿ, ತಿಳಿಸಿದ್ದಾರೆ.
ಕಾಯ೯ಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ಕೊಡಗು ಪತ್ರಕತ೯ರ ಸಂಘದ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್., ಪಾಲ್ಗೊಳ್ಳಲಿದ್ದಾರೆ.

