
ಕರ್ನಾಟಕ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ಡಿಐಜಿಪಿಯಾಗಿರುವ ಹಿರಿಯ ಐಪಿಎಸ್ ವರ್ತಿಕಾ ಕಟಿಯಾರ್ ಕೊಡಗು ಜಿಲ್ಲೆಗೆ ಭೇಟಿ ನೀಡಿದರು.
ಶುಕ್ರವಾರ ಮಡಿಕೇರಿಯ DCRE ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಜನರ ನಾಗರಿಕ ಹಕ್ಕುಗಳ ರಕ್ಷಣೆ ಹಾಗೂ ಅವರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಮಾಹಿತಿ ಪಡೆದುಕೊಂಡರು. ಇದೆ ವೇಳೆ ಡಿಸಿಆರ್ಇ ಡಿಎಸ್ಪಿ ಮೇದಪ್ಪ ಹಾಗೂ ಪಿಎಸ್ಐ ನವೀನ್ ಅವರು ಇದ್ದರು.

