Close Menu
Kodagu News
    ಹೊಸ ಸುದ್ದಿ

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ
    • ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ
    • ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ
    • ಕುಶಾಲನಗರದಲ್ಲಿ 84ನೇ ಇಎಂಇ ಕಾರ್ಪ್ಸ್ ಡೇ ಸಂಭ್ರಮ
    • ಭಾಗಮಂಡಲ, ತಲಕಾವೇರಿ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಬಾನಂಡ ಪ್ರಥ್ಯು ಆಯ್ಕೆ
    • ₹48 ಲಕ್ಷದ ರಸ್ತೆ ನಿರ್ಮಾಣ, ಮಳೆ ನೀರಿಗೆ ಮಾತ್ರ ದಾರಿಯಿಲ್ಲ!
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    • ತುಲಾ ಸಂಕ್ರಮಣ, ವಿಜಯದಶಮಿಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಸಾರ್ವಜನಿಕರ ಮನವಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»Uncategorized»ಮಡಿಕೇರಿ ತಾಲ್ಲೂಕು ಮೊಗೇರ ಸೇವಾ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ*.
    Uncategorized

    ಮಡಿಕೇರಿ ತಾಲ್ಲೂಕು ಮೊಗೇರ ಸೇವಾ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ*.

    Updated:June 13, 2026

    Ashok,_Madikeri

    ಮಡಿಕೇರಿ, -ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಡಿಕೇರಿ ತಾಲ್ಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಶುಕ್ರವಾರ ನಗರದ ಕೋಟೆ ಮಹಿಳಾ ಸಮಾಜ ಆವರಣದಲ್ಲಿ ನಡೆಯಿತು. ಸಭೆಯಲ್ಲಿ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಯುವಜನರನ್ನು ಸಮಾಜದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಹಾಗೂ ಸಮಾಜದ ಅಭಿವೃದ್ಧಿಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

    ಸಭೆಯಲ್ಲಿ ಮಡಿಕೇರಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾಗಿ ರಘು ಹೆಬ್ಬಟ್ಟಗೇರಿ, ಉಪಾಧ್ಯಕ್ಷರಾಗಿ ದಿನೇಶ್ ಟಿ., ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಮಡಿಕೇರಿ, ಸಹ ಕಾರ್ಯದರ್ಶಿಯಾಗಿ ದರ್ಶಿತ್, ಖಜಾಂಚಿಯಾಗಿ ಪ್ರಕಾಶ್ ಮೊಗೇರ ಹಾಗೂ ಪ್ರಚಾರಕರಾಗಿ ವಿವೇಕ್ ಮೊಗೇರ ಅವರು ಆಯ್ಕೆಯಾದರು.

     

    ಇದೇ ವೇಳೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್, ಶ್ರೀನಿವಾಸ್, ಸುರೇಶ್ ಎಂ.ಕೆ., ರಾಜೇಶ್, ಶಶಿ ಮರ್ಗೋಡು, ವಿಶ್ವನಾಥ್ ಹಾಗೂ ಹರೀಶ್ ಬೆಟ್ಟಗೇರಿ ಅವರನ್ನು ಆಯ್ಕೆ ಮಾಡಲಾಯಿತು.

     

    ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಸಮಾಜದ ಅಭಿವೃದ್ಧಿಗೆ ಹೊಸ ತಂಡವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಸಮಾಜದ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಸಮಾಜದ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.

     

    ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ ಮಾತನಾಡಿ, ಸಮಾಜದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಮಾಜದ ಬೆಳವಣಿಗೆಗೆ ಹೊಸ ತಂಡ ಉತ್ತಮ ನಾಯಕತ್ವ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

     

    ಹಿರಿಯ ಮುಖಂಡ ಪಿ.ಎಂ. ರವಿ ಮಾತನಾಡಿ, ಸಮಾಜದ ಏಕತೆ ಮತ್ತು ಸಹಕಾರವೇ ಸಂಘಟನೆಯ ಶಕ್ತಿಯಾಗಿದ್ದು, ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಸಮಾಜದ ಮುಂದಿನ ಪೀಳಿಗೆಯನ್ನು ಸಂಘಟನೆಯೊಂದಿಗೆ ಜೋಡಿಸುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

     

    ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ದಾಮೋದರ ಮಾತನಾಡಿ, ಸಮಾಜದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸಮಾಜದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಬೆಳೆಸಿ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷ ಜನಾರ್ಧನ್, ಕ್ರೀಡಾ ಅಧ್ಯಕ್ಷ ಎಂ.ಜಿ. ಚಂದ್ರ, ಗೌರವ ಸಲಹೆಗಾರ ಪಿ.ಎಂ. ರವಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ದಾಮೋದರ, ಸಮಿತಿಯ ಹಿರಿಯ ಸದಸ್ಯ ಸೋಮಣ್ಣ, ಹಾಗೂ ಸಮಾಜದ ಕಾರ್ಯಸಮಿತಿ ಸದಸ್ಯರಾದ ರಘು ಹೆಬ್ಬಟ್ಟಗೇರಿ, ಪ್ರಕಾಶ್, ಸುರೇಶ್, ರಮೇಶ್, ಶ್ರೀನಿವಾಸ್, ಅಶೋಕ್, ದಿನೇಶ್, ದರ್ಶಿತ್, ರಾಕೇಶ್, ವಿಶ್ವನಾಥ್, ವಿವೇಕ್ ಮೊಗೇರ, ಹರೀಶ್ ಬೆಟ್ಟಗೇರಿ, ರಾಜೇಶ್, ಶಶಿ ಮರಗೋಡು ಸೇರಿದಂತೆ ಸಮಾಜದ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

    ಸಭೆಯ ಬಳಿಕ ಭಾಗವಹಿಸಿದ್ದ ಎಲ್ಲ ಸಮಾಜ ಬಾಂಧವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ ಸಮಾಜದ ಹಿರಿಯರು, ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

    ಕೊನೆಯಲ್ಲಿ ರಮೇಶ್ ವಂದನಾರ್ಪಣೆ ಸಲ್ಲಿಸಿದರು. ನೂತನ ತಂಡಕ್ಕೆ ಶುಭ ಹಾರೈಸುವ ಮೂಲಕ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.

     

    *ಅಶೋಕ್_ಮಡಿಕೇರಿ*

    Previous Articleರಸ್ತೆ ಮದ್ಯೆಯೇ ನಾಮಫಲಕ, ವಾಹನಗಳ ಸಂಚಾರಕ್ಕೆ ಅಡಚಣೆ. ಕ್ರಮ ಕೈಗೊಳ್ಳದ ಗ್ರಾಮ ಪಂಚಾಯತಿ
    Next Article ಕಾವೇರಿ ನದಿ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

    Related Posts

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Demo
    Demo
    ಪ್ರಮುಖ ಸುದ್ದಿ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪೊಲೀಸರ ತ್ಯಾಗ ಸ್ಮರಣೆ

    October 21, 2026

    ಮರೆಯಾಗದಿರಲಿ ಮಣ್ಣಿನ ಕಲೆ… ಮಡಿಕೇರಿಯಲ್ಲಿ ಜಾನಪದ ದಸರಾ

    October 18, 2026

    ಮರಗೋಡಿನಲ್ಲಿ ಕಾವೇರಿ ಪ್ರತಿಮೆಗೆ ನಾಲ್ಕನೇ ವರ್ಷದ ಪೂಜೆ

    October 18, 2026
    Big News

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.