ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿಲ್ಲದ ಕಾಡಾನೆಗಳ ಹಾವಳಿ

-ಆನೆ ಕಾರ್ಯಾಚರಣೆಗೆ ಬಂದ ತಂಡವನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ನಾಪೋಕ್ಲು :ಚೆಯ್ಯಂಡಾಣೆ

ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಬೆಳೆಗಾರರು ಕಂಗಲಾಗಿದ್ದು ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿ ಅಪಾರ ನಷ್ಟ ಉಂಟುಮಾಡಿದ್ದು ಕಾಡಾನೆ ಹಾವಳಿಯಿಂದ ಗ್ರಾಮದಲ್ಲಿ ಜನರು ಸಂಚರಿಸಲು ಭಯಪಡುವ ಪರಿಸ್ಥಿತಿ ಉದ್ಭವವಾಗಿದೆ.

ಜೀವ ಬಲಿ ಪಡೆಯುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತು ಕೊಳ್ಳುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆ ಚೆಯ್ಯಂಡಾಣೆಯಲ್ಲಿ ನಡೆದಿದೆ.

 

ಚೆಯ್ಯಂಡಾಣೆಯಲ್ಲಿ ನಿರಂತರ ಕಾಡಾನೆ ಹಾವಳಿ ಮರುಕುಳಿಸಿದ್ದು ಕೊಕೇರಿಗ್ರಾಮದಲ್ಲಿ ಇತ್ತೀಚಿಗೆ ಮಾಜಿ ಸೈನಿಕರೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು,ಘಟನೆ ಮಾಸುವ ಮುನ್ನವೇ ದಿನನಿತ್ಯ ಬೆಳಿಗ್ಗೆ, ಮಧ್ಯಾಹ್ನ,ಸಂಜೆ ಎನ್ನದೆ ರಸ್ತೆಯಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕೃಷಿ ಕಾರ್ಮಿಕರು ರಸ್ತೆಯಲ್ಲಿ ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಾಡಾನೆ ಕಾರ್ಯಾಚರಣೆ ಬೇಡ, ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದರು.

 

ನರಿಯಂದಡ ಗ್ರಾಮದ ನಿವಾಸಿ ಪೊಕ್ಕುಳಂಡ್ರ ಧನೋಜ್ (ದಿವ್ಯ) ಮಾತನಾಡಿ ಈ ವ್ಯಾಪ್ತಿಯಲ್ಲಿ ಕಳೆದ 8 ವರ್ಷಗಳಿಂದ ಕಾಡಾನೆ ಹಾವಳಿ ಮಿತಿಮೀರಿದೆ, ತೋಟಗಳಿಗೆ ತೆರಳಲು, ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ,ಎರಡು ಬಾರಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ಮಾಡಿ ಯಾವುದೇ ಪ್ರಯೋಜನ

ವಾಗಿಲ್ಲ,ನಾಮಕಾವ್ಯವಸ್ತೇಗೆ ಅರಣ್ಯಾಧಿಕಾರಿಗಳು ಬೇಟಿ ನೀಡಿ ತೆರಳುತ್ತಾರೆ. ಇಂದು ಕೂಡ ನಾನು ತೋಟಕ್ಕೆ ಬರುವ ವೇಳೆ ತೋಟದಲ್ಲಿ ಆನೆ ಇದ್ದು ಸ್ನೇಹಿತರನ್ನು ವಿಚಾರಿಸುವಾಗ ಅಲ್ಲು ಕೂಡ ಆನೆ ಇದೆ ಎಂಬ ಮಾಹಿತಿ ಸಿಕ್ತು ಕೂಡಲೇ ಆರ್ ಎಫ್ ಒ ಶಿವರಾಂ ಗೆ ಕರೆ ಮಾಡಿ ಮಾಹಿತಿ ನೀಡಿದೆ ಆದರೆ ಅವರು ಸ್ಥಳಕ್ಕೆ ಬರುತ್ತೆನೆ ಎಂದರು.ಆದರೆ ಬರಲಿಲ್ಲ ಸಿಬ್ಬಂದಿಗಳನ್ನು ಕಳಿಸಿದ್ದಾರೆ. ಸಿಬ್ಬಂದಿಗಳನ್ನು ಕಳಿಸಿ ಪ್ರಯೋಜನವಿಲ್ಲ ಆರ್ ಎಫ್ಒ ಸ್ಥಳಕ್ಕೆ ಬರಬೇಕು, ಕಳೆದ ಬಾರಿ 5 ಆನೆ ಹಿಡಿಯಲು ಅನುಮತಿ ಸಿಕ್ಕಿದರು ಕೂಡ ಅದರಲ್ಲಿ ಒಂದು ಆನೆ ಕಾರ್ಯಾಚರಣೆ ವೇಳೆ ಸಾವನ್ನಪ್ಪಿತ್ತು.ಇನ್ನೊಂದು ಕುಂಟಾನೆಯನ್ನು ಸೆರೆ ಹಿಡಿದಿದ್ದರು ಆದರೆ ಉಳಿದ 3 ಆನೆ ಹಿಡಿಯಲು ಬಾಕಿ ಇದೆ ಎಂದ ಅವರು ಕೂಡಲೇ ಆನೆ ಸೆರೆಹಿಡಿಯಿರಿ ಇಲ್ಲದಿದ್ದರೆ ಯಾರನ್ನಾದರೂ ಬಲಿ ಪಡೆಯುವುದು ಖಂಡಿತ ಎಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.

 

ಕೊಕೇರಿ ಗ್ರಾಮದ ಎಸ್.ಎಸ್. ಸುಮಂತ್ ಮಾತನಾಡಿ ಇದೆ ಆನೆ ಕಳೆದ ಒಂದು ವಾರದ ಹಿಂದೆ ಮಾಜಿ ಸೈನಿಕನ ಮೇಲೆ ದಾಳಿ ನಡೆಸಿತ್ತು. ಆನೆಯನ್ನು ಸೆರೆ ಹಿಡಿಯ ಬೇಕು ಎಂದು ಅರಣ್ಯ ಇಲಾಖೆಗೆ ಒತ್ತಾಯಿಸುತ್ತಿದ್ದೇವೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ಓಡಿಸಲು ತೋಟಕ್ಕೆ ತೆರಳಿದರೆ ಅವರನ್ನೆ ಬೆನ್ನಟ್ಟಿ ಓಡಿಸುತ್ತಿದೆ,ಉನ್ನತ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬನ್ನಿ ಅಂದರೆ ಸಿಬ್ಬಂದಿಗಳನ್ನು ಕಳಿಸುತ್ತಾರೆ,ಕಳೆದ ವರ್ಷ ತೋಟ ಸರ್ವನಾಶವಾಗಿ 11ಲಕ್ಷ ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಸಿಕ್ಕಿದ್ದು 11 ಸಾವಿರ.ಮುಂದಿನ 10 ದಿನಗಳ ಒಳಗೆ ಆನೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ಗ್ರಾಮಸ್ಥರು,ಸಂಘ ಸಂಸ್ಥೆಗಳು ಒಟ್ಟು ಸೇರಿ ವಿರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆ ತಡೆ ಮಾಡಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.

 

ಗ್ರಾಮಸ್ಥರಾದ ವಕೀಲ ಕೊಡಿಮಣಿಯಂಡ ಪೂವಯ್ಯ ಮಾತನಾಡಿ ನನ್ನ ಮನೆಯ ಗೇಟ್ ಸಮೀಪ ಸ್ಥಳೀಯ ಸರಕಾರಿ ಉದ್ಯೋಗಿ ಒಬ್ಬರನ್ನು ಆನೆ ದಾಳಿ ಮಾಡಲು ಮುಂದಾಗಿದೆ. ಅವರು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.ಆನೆ ಹಗಲು ರಾತ್ರಿ ಎನ್ನದೆ ಪೂರ್ತಿ ಇಲ್ಲೇ ಇದ್ದರೆ ನಮ್ಮ ಕೆಲಸ ಕಾರ್ಯಗಳು ಹೇಗೆ ನಡೆಯುತ್ತದೆ,ಇರುವ ಕೆರೆಗಳಲ್ಲ ಆನೆಗಳ ಹಿಂಡು ನಡೆದಾಡಿ ಮುಚ್ಚಿಹೋಗಿದೆ. ಪರಿಹಾರಕ್ಕಾಗಿ ಹತ್ತು ಸಾವಿರ ಖರ್ಚು ಮಾಡಿದರೆ ಮುನ್ನೂರು,ಐನೂರು ಕೊಡ್ತಾರೆ, ಅರಣ್ಯ ಮಂತ್ರಿಗಳು ಗ್ಲಾಸ್ ಹೌಸ್ ನಲ್ಲಿ ಕೂರುತ್ತಾರೆ, ನಮ್ಮ ಪಾಡು ಕೇಳುವವರಿಲ್ಲ, ಈ ತರ ನಡೆದರೆ ಗ್ರಾಮಸ್ಥರು ರೊಚ್ಚಿಗೆಳಲಿದ್ದಾರೆ ಎಂದರು.

 

:ಅರಣ್ಯಧಿಕಾರಿಯನ್ನು ತರಾಟೆಗೆ

ಸ್ಥಳಕ್ಕೆ ಉನ್ನತ ಅರಣ್ಯ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದ ಗ್ರಾಮಸ್ಥರು,ಆರ್ ಎಫ್ ಒ ಶಿವರಾಂ ಸ್ಥಳಕ್ಕೆ ಬರಬೇಕು ಎಂದರು ನಂತರ ಸ್ಥಳಕ್ಕೆ ಬಂದದ್ದು ಆನೆ ಕಾರ್ಯಚರಣೆ ತಂಡ ರೊಚ್ಚಿಗೆದ್ದ ಗ್ರಾಮಸ್ಥರು ಆನೆ ಕಾರ್ಯಾಚರಣೆ ತಂಡದ ಡಿಆರ್ ಎಫ್ ಒ ಪ್ರಶಾಂತ್ ರವರನ್ನು ತರಾಟೆಗೆ ತೆಗೆದುಕೊಂಡರು ಶಿವರಾಂ ಅವರನ್ನು ಸ್ಥಳಕ್ಕೆ ಬರಕ್ಕೆ ಹೇಳಿ ಇಲ್ಲದಿದ್ದರೆ ನಿಮ್ಮನ್ನು ಕಟ್ಟಿ ಹಾಕುತ್ತೇವೆ ಎಂದು ಆಕ್ರೋಷಿತರಾದರು. ನಂತರ ಸಮಾಧಾನ ಪಡಿಸಿದ ಇವರು ನಿಮ್ಮ ಎಲ್ಲಾ ಮನವಿಗಳನ್ನು ಇಂದು ಸಂಜೆ ಉನ್ನತ ಅಧಿಕಾರಿಗಳಿಗೆ ತಿಳಿಸಿ ಇದಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲಾಗುವುದು ಎಂದರು.

 

ಈ ಸಂದರ್ಭ ಗ್ರಾಮಸ್ಥರಾದ ನೆಲ್ಲಮಕ್ಕಡ ವಿವೇಕ್,ಮನೋಜ್, ರಮೇಶ್,ಆನೆ ಕಾರ್ಯಾಚರಣೆ ತಂಡದ ಡಿಆರ್ ಎಫ್ ಒ ಪ್ರಶಾಂತ್,ಗಾರ್ಡ್ ಅಣ್ಣಾಸ್ ಗುಡ್ಡೆ, ಕ್ಯಾಂಪ್ ಸಿಬ್ಬಂದಿಗಳು,ಮತ್ತಿತರರು ಇದ್ದರು.

Exit mobile version