ಕುಶಾಲನಗರ: ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈಶಾನ್ಯ ಭಾರತದ ಇಬ್ಬರು ಯುವಕರು ಕುಶಾಲನಗರ ಗಡಿಭಾಗದ ಕಾವೇರಿ ಸೇತುವೆ ಬಳಿ ಜಲ ಸಮಾಧಿಯಾದ ಘಟನೆ ಬುಧವಾರ ಸಂಜೆ 6 ಗಂಟೆ ವೇಳೆ ನಡೆದಿದೆ.

ನಾಗಾಲ್ಯಾಂಡ್ ರಾಜ್ಯದ ಬಸೊಸೊ ಕುಚಂಗ್ (23) ಮತ್ತು ಯಾಂಕಂಗ್ (27) ಮೃತ ಯುವಕರು ಎಂದು ತಿಳಿದು ಬಂದಿದೆ. ಕತ್ತಲೆಯಾದ ಹಿನ್ನೆಲೆಯಲ್ಲಿ ಮೃತ ದೇಹಗಳ ಪತ್ತೆಕಾರ್ಯ ಸಾಧ್ಯವಾಗಿಲ್ಲ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳ ಕಾರ್ಯಾಚರಣೆ ನಾಳೆಯೂ ಮುಂದುವರೆಯಲಿದೆ.

Exit mobile version