ಕೊಡಗಿನ ಕುವರಿಗೆ ರಾಷ್ಟ್ರಮಟ್ಟದ ಕಲಾರತ್ನ ಪ್ರಶಸ್ತಿ

ಬೆಳಕು ಸಾಹಿತ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಬಳ್ಳಾರಿಯಲ್ಲಿ ನಡೆದ 124ನೇ ಗಡಿನಾಡು ಸಮ್ಮೇಳನ ಕಾರ್ಯಕ್ರಮದಲ್ಲಿ ಕುಶಾಲನಗರದ ಜ್ಞಾನಗಂಗಾ ವಸತಿ ಶಾಲೆಯ 9ನೇ ತರಗತಿ ಆರ್ಯ ಪಿ. ಎಸ್ ಭರತನಾಟ್ಯದಲ್ಲಿ ರಾಷ್ಟ್ರಮಟ್ಟದ ಕಲಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅಲ್ಲದೆ ಕೊಡಗು ಜಿಲ್ಲಾಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ಅಸಾಧಾರಣ ಸಾಧನೆಗೆ ನೀಡುವ ವಾರ್ಷಿಕ ಪ್ರಶಸ್ತಿಗೂ ಇವರು ಬಾಜನರಾಗಿದ್ದು ರೂ 10 ಸಾವಿರ ನಗದು ಕೂಡ ನೀಡಿ ಗೌರವಿಸಲಾಗಿದೆ.

 

ಇವರು ಕೊಡಗು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುವ ಸುನೀಲ್ ಹಾಗೂ ಶ್ರುತಿ ದಂಪತಿಯ ಪುತ್ರಿ..

Exit mobile version