ಮೂರ್ನಾಡುವಿನಲ್ಲಿ ಅರಮನೆಪಾಲೆ ಸಮಾಜದ ಮರಣ ಧನ ಸಹಾಯ ನಿಧಿಯ ಮಹಾಸಭೆ
ಅರಮನೆಪಾಲೆ ಸಮಾಜದ ಪ್ರಧಾನ ಸಂಘಟಕರಾದ ಮಂದಣ್ಣ ಪಿ.ಕೆ.ಸಮುದಾಯ ಭಾoದವರು ಮರಣ ಹೊಂದಿದ ಸಮಯದಲ್ಲಿ ಸಮುದಾಯದ ಪ್ರತೀ ಸದಸ್ಯರಿಂದ ರೂಪಾಯಿ 25/ರಂತೆ ಸಂಗ್ರಹಿಸಿ ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ತಲಾ ಹತ್ತು ಸಾವಿರದಂತೆ 2015 ನೇ ಇಸವಿಯಿಂದ ಇಲ್ಲಿಯವರೆಗೆ ಅರಮನೆಪಾಲೆ ಸಮಾಜದಿಂದ ವಿತರಿಸಲಾಗುತ್ತಿದ್ದು, ಇಲ್ಲಿಯವರೆಗೆ ಸುಮಾರು ಏಳು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳನ್ನು ವಿತರಿಸಲಾಗಿದ್ದು, ಇದು ಅರಮನೆಪಾಲೆ ಸಮಾಜದ ಅತ್ಯುನ್ನತ ಸೇವಾ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಸಮುದಾಯ ಬಾಂಧವರನ್ನು ರಕ್ಷಿಸುತ್ತಿದೆ. ಸಮಾಜದ ಅಧೀನದಲ್ಲಿ ಸುಮಾರು 32 ಗ್ರಾಮಗಳಿಗೆ ಸಂಬಂಧಿಸಿದಂತೆ ಒಂಬತ್ತು ಗ್ರಾಮಸಮಿತಿಗಳನ್ನು ರಚಿಸಿಕೊಂಡಿದ್ದು, ಪ್ರತೀ ಗ್ರಾಮ ಸಮಿತಿಗಳ ಅಭ್ಯುದಯಕ್ಕಾಗಿ ಸಮಾಜದ ಪರವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಮಾಜ ಭಾoದವರನ್ನು ಮುಖ್ಯವಾಹಿನಿಯಲ್ಲಿ ತರುವಲ್ಲಿ ಸತತ ಪ್ರಯತ್ನ ಗಳನ್ನು ಕೈ ಗೊಳ್ಳಲಾಗುತ್ತಿದೆ ಎಂದರು..
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಕಕ್ಕಬ್ಬೆ ಸಮುದಾಯ ಭಾoದವರ ಅಭಿವೃದ್ಧಿಗಾಗಿ ಅರಮನೆಪಾಲೆ ಸಮಾಜದ ಮೂಲಕ ದುಡಿಯುತಿದ್ದು, ಸಮುದಾಯ ಬಾಂಧವರು ಸಮಾಜದ ಎಲ್ಲಾ ಕಾರ್ಯಗಳಲ್ಲಿ ಕೈ ಜೋಡಿಸಬೇಕಾಗಿ ಕರೆನೀಡಿದರು.
ಸಭೆಯಲ್ಲಿ ಸಮಾಜದ ಉಪಾಧ್ಯಕ್ಷರಾದ ಸುಜುದೇವಯ್ಯ ಬಾಳುಗೋಡು, ಸಮಾಜದ ಕಾರ್ಯದರ್ಶಿಗಳಾದ ದೇವಯ್ಯ ಹಾಕತೂರು, ಸಮಾಜದ ಖಜಾಂಜಿ ಮಾಜಿ ಯೋಧರಾದ ಸುಭಾಷ್ ಬಾಳುಗೋಡು, ಮರಣ ಧನ ಸಹಾಯ ನಿಧಿಯ ಅಧ್ಯಕ್ಷರಾದ ಯತೀಶ್ ಬಿದ್ದಪ್ಪ ಬಾಳುಗೋಡು, ಸಮಾಜದ ನಿರ್ದೇಶಕರಾದ ಲೀನಾಶಿವಪ್ಪ ಕಂಡಿಮಕ್ಕಿ, ದಮಯಂತಿ ಬಿಳಿಗೇರಿ, ಸರಿತ ನಾಗಬಾಣೆ, ರವಿ ಗಣೇಶ್ ಪೇರೂರು ಮತ್ತು ವಿವಿಧ ಗ್ರಾಮ ಸಮಿತಿ ಅಧ್ಯಕ್ಷರು,ಕಾರ್ಯದರ್ಶಿಗಳು, ಪದಾಧಿಕಾರಿಗಳು, ಕ್ರಿಕೆಟ್ ಪಂದ್ಯಾಟಗಳ ಸಮಿತಿ ಕಾರ್ಯದರ್ಶಿಗಳಾದ ರಘು ಹಾಕತೂರು, ಮತ್ತು ಸಮಾಜದ ಸದಸ್ಯರು ಭಾಗವಹಿಸಿದರು.ಸಭೆಯಲ್ಲಿ ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ಸಮಾಜದ ವತಿಯಿಂದ ಮರಣ ಧನ ಸಹಾಯ ನಿಧಿಯ ಹಣವನ್ನು ವಿತರಣೆ ಮಾಡಲಾಯಿತು.
(ಮಂದಣ್ಣ ಪಿ. ಕೆ
ಪ್ರಧಾನ ಸಂಘಟಕರು, ಅರಮನೆಪಾಲೆ ಸಮಾಜ, ಮಡಿಕೇರಿ,8971439105)




