ವರದಿ: ಶ್ರೀಧರ್ ನಾರಾಯಣ್, ಕುಶಾಲನಗರ.
ಕುಶಾಲನಗರ ಜೂ.6: ಕೊಡಗು ವೃತ್ತ ಮಡಿಕೇರಿ ವಿಭಾಗ ಕುಶಾಲನಗರ ವಲಯ ವ್ಯಾಪ್ತಿಗೆ ಒಳಪಡುವ ಆನೆಕಾಡು ಶಾಖೆಯ 7ನೇ ಹೊಸಕೋಟೆ ಗ್ರಾಮದ ತೊಂಡೂರು ಭಾಗದಲ್ಲಿ ಕೆ.ಟಿ. ಸಲಿಕುಮಾರ್ ರವರ ತೋಟದ ಕೆಳ ಭಾಗದ ಗೊಸರು ಇರುವ ತೋಡುವಿನಲ್ಲಿ ಗಂಡು ಕಾಡಾನೆಯೊಂದು ಮೃತಪಟ್ಟಿದೆ. ಆನೆಯು ಓಡುವ ಸಂದರ್ಭ ಗೊಸರಿನಿಂದ ಕೂಡಿದ್ದ ತೋಡಿನಲ್ಲಿ ಸಿಲುಕಿ ತೋಟಕ್ಕೆ ಅಳವಡಿಸಿದ್ದ ಸೋಲಾರ್ ತಂತಿ ಬೇಲಿಗೆ ತಗುಲಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮುಂದಿನ ತನಿಖೆಗಾಗಿ ಆನೆಯ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಸ್ಥಳಕ್ಕೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಭಿಷೇಕ್ , ಕೊಡಗು ವೃತ್ತದ ಮುಖ್ಯ ಪಶುವೈದ್ಯಾಧಿಕಾರಿ ಮುಜೀಬುರ್ ರೆಹಮಾನ್ , ಕುಶಾಲನಗರದ ಪಶು ವೈಧ್ಯಾಧಿಕಾರಿಗಳಾದ ಸಂಜೀವ್ ಕುಮಾರ್ ಆರ್. ಶಿಂಧೆ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಎನ್.ಪಿ , ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್ ಆರ್. ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.



