ಜನಪ್ರತಿನಿಧಿಗಳ ವಿರುದ್ಧ ಸುಳ್ಳು ಆರೋಪ: ಪ್ರಸನ್ನ ಭಟ್ ವಿರುದ್ಧ ದೂರು
ಕೊಡಗು ಅಭಿವೃದ್ಧಿ ಸಮಿತಿಯ ಗ್ರೂಪ್ ವೊಂದನ್ನು ರಚಿಸಿ ಕೊಂಡು ಮಡಿಕೇರಿ ನಗರ ಸಭಾ ಸದಸ್ಯರ ಬಗ್ಗೆ ಸಾರ್ವಜನಿಕ ವಲಯ ದಲ್ಲಿ ಅವಹೇಳನ ಕಾರಿ ಸುಳ್ಳು ವರದಿ ಗಳನ್ನು ಸತ್ಯ ಎಂಬಂತೆ ಬಿಂಬಿಸಿ ವಾಟ್ಸಪ್ ಗ್ರೂಪ್ ಗಳಲ್ಲಿ ಹರಡಿಸಿ ಜನತೆ ಯಲ್ಲಿ ತಪ್ಪು ಸಂದೇಶ ವನ್ನು ಹರಡುತ್ರಿರುವ ಮತ್ತು ನಗರ ಸಭಾ ಸದಸ್ಯರು ಗಳ ಅಧ್ಯಯನ ಪ್ರವಾಸ ವನ್ನು ಮೋಜು ಮಸ್ತಿ ಯ ಪ್ರವಾಸ. ಎಂಬಂತೆ ಬಿಂಬಿಸಿ ಸಾರ್ವಜನಿಕ ವಾಗಿ ಜನ ಪ್ರತಿ ನಿಧಿ ಗಳನ್ನು ನಿಂದಿಸಿರುವ ಕೊಡಗು ಅಭಿವೃದ್ಧಿ ಗ್ರೂಪ್ ನ ಅಡ್ಮಿನ್ ಪ್ರಸನ್ನ ಭಟ್ ವಿರುದ್ಧ ಮಡಿಕೇರಿ ನಗರ ಸಭೆಯ ಸರ್ವ ಪಕ್ಷ ಗಳ ಸದಸ್ಯರು ಎಸ್ ಪಿ ಯವರನ್ನು ಭೇಟಿಯಾಗಿ ದೂರು ಸಲ್ಲಿಸಿದರು .
ದೂರಿ ನಲ್ಲಿ ಸ್ವಂತ ಜೀಪ್ ಗೆ ಅಭಿವೃದ್ಧಿ ಸಮಿತಿಯ ಬೋರ್ಡ್ ನ್ನು ಅಳವಡಿಸಿ ಕೊಂಡಿರುದು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಗಳ ಮಧ್ಯೆ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡುವ ಸೋಗಿ ನಲ್ಲಿ ಸ್ಥಳೀಯ ವಾಹನ ಸವಾರರಿಗೆ ತೊಂದರೆ ಕೊಡುವುದು ಮತ್ತು ಅದೆಷ್ಟೋ ಬಾರಿ ತನ್ನ ಜೀಪ್ ನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ. ತಾನೇ ವಾಹನ ನಿಲುಗಡೆ ನಿಷೇದ ವಿರುವ ಜಾಗದಲ್ಲಿ ತನ್ನ ವಾಹನ ನಿಲ್ಲಿಸಿ ಇದನ್ನು ವಿಚಾರಿಸಿದ ಸ್ಥಳೀಯ ಯುವಕರೊಂದಿಗೆ ಅನವಶ್ಯಕ ಜಗಳವಾಡಿ ಸಾರ್ವಜನಿಕ ವಾಗಿ ಶಾಂತಿ ಭಂಗ ಮಾಡುವುದು ಸೇರಿದಂತೆ
ಹಲವು ವಿಚಾರಗಳನ್ನು ಎಸ್ ಪಿ ಮತ್ತು ಡಿ ವೈ ಎಸ್ ಪಿ ಯವರಲ್ಲಿ ವಿವರಿಸಿ ಕಾನೂನು ಕ್ರಮ ವಹಿಸುವಂತೆ ದೂರು ದಾರರು ಒತ್ತಾಯ ಮಾಡಿದರು
ನಗರ ಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಮೂಡ ಅಧ್ಯಕ್ಷ ರಾಜೇಶ್ ಎಲ್ಲಪ್ಪ ಸ್ಥಾಯಿ ಸಮಿತಿಯ ಅಧ್ಯಕ್ಷರು ಗಳಾದ ಸತೀಶ್ ಎಸ್ ಸಿ ಅರುಣ್ ಶೆಟ್ಟಿ ಅಪ್ಪಣ್ಣ ಶಾರದಾ ನಾಗರಾಜ್ ಮಾಜಿ ನಗರ ಸಭಾ ಅಧ್ಯಕ್ಷ ರಾದ ಅನಿತಾ ಪೂವಯ್ಯ ಜೂಲೆಕಾಬಿ. ಸದಸ್ಯರಾದ ಕೆ ಎಸ್ ರಮೇಶ್ ಸದಸ್ಯರು ಗಳಾದ ಶ್ವೇತಾ ಪ್ರಶಾಂತ್ ಸಬಿತಾ ಚಂದ್ರ ಶೇಖರ್ ಮುದ್ದುರಾಜ್ ಸದಾಮುದ್ದಪ್ಪ ಜಗದೀಶ್ ಜಿ ಸಿ ಕಾವೇರಪ್ಪ ಹಾಜರಿದ್ದರು.



