ಕೊಡಗಿನ ಐ ಪಿ ಎಸ್ ಅಧಿಕಾರಿ ಜಿನೇವಾದ ಕೌನ್ಸಲೇಟ್ ಜನರಲ್ ಆಗಿ ಭಾರತ ಸರಕಾರದಿಂದ ಬಡ್ತಿ ನೀಡಿ ನಿಯೋಜನೆ

ಶ್ರೀಮಂಗಲ:ಮೂಲತಃ ಕೊಡಗಿನ ಐ ಪಿ ಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರು ಸಿಟ್ಜರ್ಲೆಂಡ್ ದೇಶದ ಜಿನೇವಾ ಕೌನ್ಸಲೇಟ್ ಜನರಲ್ ಆಗಿ ಬಡ್ತಿ ನೀಡಿ ಭಾರತ ಸರಕಾರ ನಿಯೋಜನೆ ಮಾಡಿದೆ.

ದಕ್ಷಿಣ ಕೊಡಗಿನ ಪರಕಟಕೇರಿ ಗ್ರಾಮದವರಾದ ಸುನಿಲ್ ಅಚ್ಚಯ್ಯ ಅವರು ದೆಹಲಿಯಲ್ಲಿ ಕೇಂದ್ರ ಸರಕಾರದ ಗುಪ್ತದಳದಲ್ಲಿ ಎಡಿಜಿಪಿ ಯಾಗಿ ಸೇವೆ ಸಲ್ಲಿಸುತ್ತಿದ್ದರು.

ಸುನಿಲ್ ಅವರು ಅಚ್ಚಯ್ಯ ಅವರ ಪುತ್ರರಾಗಿದ್ದು ತಾಯಿ ಬೆಲ್ಲ(ತಾಮನೆ ಅಮ್ಮಣಕುಟ್ಟಂಡ),ಪತ್ನಿ ಸಂಧ್ಯಾ(ತಾಮನೆ ಮಂಡೇಪಂಡ),ಇಬ್ಬರು ಮಕ್ಕಳೊಂದಿಗೆ ದೆಹಲಿಯಲ್ಲಿ ನೆಲೆಸಿದ್ದಾರೆ.

Exit mobile version