ಸಕಾಲಕ್ಕೆ ಬಾರದ ಕುಶಾಲನಗರ 108 ಆಂಬ್ಯುಲೆನ್ಸ್

*ಅಪಘಾತಕ್ಕೊಳಗಾದ ವೃದ್ಧೆಯನ್ನು ಅರ್ಧ ಗಂಟೆ ಬಳಿಕ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ ಸಾರ್ವಜನಿಕರು*

ಕುಶಾಲನಗರ: ಗುಡ್ಡೆ ಹೊಸೂರು ಬಸವನಹಳ್ಳಿ ಹಾಡಿ ಪಕ್ಕದ ಜಂಕ್ಷನ್ ನಲ್ಲಿ ರಾತ್ರಿ ಅಂದಾಜು 7 ಗಂಟೆಗೆ ಕುಶಾಲನಗರದ ಕಡೆಯಿಂದ ಕಲ್ಲಂಗಡಿ ಹಣ್ಣು ತುಂಬಿದ ಪಿಕಪ್ ವಾಹನವೊಂದು ಡಿಕ್ಕಿಯಾಗಿ ಚಿಕಿತ್ಸೆಗೆಂದು ಕುಶಾಲನಗರ 108 ಆಂಬ್ಯುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದರು ಬರಲು ಹಿಂದೇಟು ಹಾಕಿದ ಅವಮಾನವೀಯ ಘಟನೆಯೊಂದು ನಡೆದಿದೆ.

ಘಟನೆ ವಿವರ: ಇಂದು ರಾತ್ರಿ 7 ಗಂಟೆ ಸಮಯಕ್ಕೆ ಅನೇಕಾಡು ನಿವಾಸಿಯಾಗಿರುವ ಆದಿವಾಸಿ ವೃದ್ಧೆಯೊಬ್ಬರು ರಸ್ತೆ ದಾಟುವಾಗ ಪಿರಿಯಾಪಟ್ಟಣದಿಂದ ಕಲ್ಲಂಗಡಿ ಹಣ್ಣು ತುಂಬಿಕೊಂಡು ಬರುತಿದ್ದ KA09 D9483 ಸಂಖ್ಯೆಯ ಪಿಕಪ್ ವಾಹನ ಡಿಕ್ಕಿಯಾಗಿ ವೃದ್ಧೆ ತಲೆ ಮತ್ತು ಮುಖಕ್ಕೆ ಗಾಯವಾಗಿತ್ತು. ಚಿಕಿತ್ಸೆಗಾಗಿ ಸ್ಥಳದಲ್ಲಿದ್ದ ಸರಕಾರಿ ಸಿಬ್ಬಂದಿಯೊಬ್ಬರು ತಕ್ಷಣ 108 ಸಂಖ್ಯೆಗೆ ಕರೆ ಮಾಡಿ ಘಟನೆಯ ಬಗ್ಗೆ ವಿವರಿಸಿದ ಬಳಿಕ ಬಸವನಹಳ್ಳಿಗೆ ಆಂಬ್ಯುಲೆನ್ಸ್ ಕಳಿಸುವುದಾಗಿ ಹೇಳಿದ ಕಾಲ್ ಸೆಂಟರ್ ಸಿಬ್ಬಂದಿ 15-20 ನಿಮಿಷವಾದರೂ ಬಾರದೆ ಇದ್ದು ಮತ್ತೆ ಕರೆಯೊಂದು ಬಂದಿದ್ದು ಮೊದಲು ವಿಚಾರಿಸಿದಾಗ ವಾಹನ ಕಳುಹಿಸುತ್ತೇವೆ ಎಂದು ಉತ್ತರ ಕೊಟ್ಟು ಬಳಿಕ ಬೇರೊಂದು ಕೇಸ್ ಅಟೆಂಡ್ ಮಾಡಲು ಹೋಗಿದೆ ಎಂದು ತಿಳಿಸಿದ್ದಾರೆ. ಹಾಗಾದರೆ ಮೊದಲೇ ಯಾಕೆ ಹೇಳಲಿಲ್ಲ ಎಂಬ ಪ್ರಶ್ನೆಗೆ ಆಕೆಯ ಬಳಿ ಉತ್ತರವಿಲ್ಲ. ಚಾಲಕನ ಹೇಳಿದ್ದನ್ನಷ್ಟೇ ಹೇಳಿದೆ ಎಂದು ಕಾಲ್ ಸೆಂಟರ್ ಸಿಬ್ಬಂದಿ ಕರೆ ಮಾಡಿದವರಿಗೆ ಹೇಳುತ್ತಾರೆ..

*ಚಾಲಕ ಹೇಳಿದ್ದೇನು?*
ಸಕಾಲಕ್ಕೆ ಬಾರದ ಆಂಬ್ಯುಲೆನ್ಸ್ ಬಗ್ಗೆ ಅನುಮಾನ ಮೂಡಿ ವೃದ್ಧೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿ ಹಿಂಬಾಲಿಸಿದ ಸರಕಾರಿ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನಿಂತಿರುವುದು ಗಮನಕ್ಕೆ ಬರುತ್ತದೆ. ತಕ್ಷಣ ಅಲ್ಲಿದ್ದ ಆಟೋ ಚಾಲಕರನ್ನು ವಿಚಾರಿಸಿದಾಗ ಕಳೆದ 1 ಗಂಟೆಗೂ ಹೆಚ್ಚು ಸಮಯದಿಂದ ಆಂಬ್ಯುಲೆನ್ಸ್ ಇಲ್ಲೇ ನಿಂತಿರುವುದಾಗಿಯೂ ಆಟೋ ಚಾಲಕರು ಮತ್ತು ಅಲ್ಲಿನ ಕೆಲ ಸ್ಥಳೀಯರು ಮಾಹಿತಿ ನೀಡುತ್ತಾರೆ. ಆದರೆ ಆಂಬ್ಯುಲೆನ್ಸ್ ಚಾಲಕನ ಬಳಿ ಕೇಳಿದಾಗ ವಾಹನ ರಿಪೇರಿ ಆಗಿತ್ತು ಈಗ ತಾನೇ ಸರಿಪಡಿಸಿಕೊಂಡು ಬಂದೆ ಎಂದು ಸುಳ್ಳು ಹೇಳುತ್ತಾನೆ..

ವಾಹನ ರಿಪೇರಿಯಾದರೆ ಮೊದಲು ಕಸ್ಟಮರ್ ಕೇರ್ ಬ್ಲಾಗ್ ನಲ್ಲಿ ಮಾಹಿತಿ ನೀಡಬೇಕು. ತುರ್ತು ಸೇವೆಗೆ ಮೀಸಲಿರುವ ವಾಹನಗಳು ರಿಪೇರಿಯಾಗಿದ್ದಲ್ಲಿ ಯಾಕೆ 108 ಸಿಬ್ಬಂದಿಗಳಿಗೆ ಮಾಹಿತಿ ತಿಳಿದಿಲ್ಲ ಎಂಬ ಪ್ರಶ್ನೆಗೂ ಇಲ್ಲಿ ಉತ್ತರವಿಲ್ಲ..

*ಸುಳ್ಳೆಂಬುವುದು ಇಲ್ಲಿ ಸ್ಪಷ್ಟ*

ಮೊದಲು 108 ಗೆ ಕರೆ ಮಾಡಿದಾಗ ಆಂಬ್ಯುಲೆನ್ಸ್ ಲಭ್ಯವಿದೆ ಎಂದು ಹೇಳಿದ ಸಿಬ್ಬಂದಿ ಬಳಿಕ ಎಂಗೇಜ್ ಇದೆ ಎಂದು ಹೇಳಲು ಕಾರಣವೇನು? ಆಸ್ಪತ್ರೆಯ ಮುಂಭಾಗದಲ್ಲೇ ವಾಹನ ನಿಲ್ಲಿಸಿಕೊಂಡು ವಾಹನ ಕೆಟ್ಟೋಗಿದೆ ಈಗಷ್ಟೇ ಸರಿಪಡಿಸಿಕೊಂಡು ಬಂದೆ ಎಂದು ಚಾಲಕ ಯಾಕೆ ಸುಳ್ಳು ಹೇಳಬೇಕು? ಇದರ ಒಳಮರ್ಮವಾದರೂ ಏನು? ಯಾತಕ್ಕಾಗಿ ನಿರ್ಲಕ್ಷ್ಯ?

*ಮಂತರ್ ಗೌಡರೇ ನೀವೇ ನ್ಯಾಯ ಕೊಡಿಸಿ*

ಆಂಬ್ಯುಲೆನ್ಸ್ ಸರಿಯಾಗಿದ್ದರೂ ಸರಿಯಿಲ್ಲವೆಂದ ಚಾಲಕ, ಆಂಬ್ಯುಲೆನ್ಸ್ ಆಸ್ಪತ್ರೆ ಮುಂದಿದ್ದರೂ ಎಂಗೇಜ್ ಆಗಿದೆಯೆಂದು 108 ಸಿಬ್ಬಂದಿಗಳಿಗೆ ಸುಳ್ಳು ಮಾಹಿತಿ ಕೊಟ್ಟ ಸಿಬ್ಬಂದಿ ಯಾರು? ಹಾಗಾದರೆ ಬಡವನ ಜೀವಕ್ಕೆ ಬೆಲೆ ಇಲ್ಲವೇ? ಆಡಳಿತ ವ್ಯವಸ್ಥೆಗೆ ಆದಿವಾಸಿಗಳ ಮೇಲೆ ಕಾಳಜಿಯೇ ಇಲ್ಲವೇ? ಸಕಾಲಕ್ಕೆ ಆಂಬ್ಯುಲೆನ್ಸ್ ಬಾರದೆ ಇದ್ದಾಗ ಬಡವ ಏನು ಮಾಡಬೇಕು? ಮೊದಲಿಗೆ ಬಂದ ಎರಡು ಆಟೋರಿಕ್ಷಾ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದು ಹೌದು.. ದೂರದ ಆಸ್ಪತ್ರೆಗಳಿಗೆ ಸಾಗಿಸಲು ಉತ್ಸಾಹ ತೋರುವ ಚಾಲಕರು ಸ್ಥಳೀಯ ಕರೆಗಳಿಗೆ ಯಾಕೆ ಪ್ರಾಮುಖ್ಯತೆ ನೀಡುತ್ತಿಲ್ಲ? ಸರಕಾರದ ಸವಲತ್ತು ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವೇ?

*ಆಂಬ್ಯುಲೆನ್ಸ್ ಚಾಲಕನ ಮೇಲೆ ಕ್ರಮ ಆಗುವವರೆಗೂ ಶೇರ್ ಮಾಡಿ*

*ಕೊಡಗು ನ್ಯೂಸ್*

Exit mobile version