
ಹುದಿಕೇರಿ ಭಾಗದ ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾಬಲ ರವರ ಮನೆಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಸೌಹಾರ್ದ ಭೇಟಿ ನೀಡಿದರು.
ಮಹಾಬಲ ರವರ ತಾಯಿಯವರು ವಯೋಹಸಹಜ ತೊಂದರೆಗಳಿಂದ ಬಳಲುತ್ತಿದ್ದು, ಪೊನ್ನಂಪೇಟೆ ಭಾಗದ ಪ್ರವಾಸದಿಂದ ಶಾಸಕರು ಹುದಿಕೇರಿಯ ಇವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಮಿದೇರೀರ ನವೀನ್, ಪಕ್ಷದ ಮುಖಂಡರು ಅಜ್ಜಿಕುಟ್ಟಿರ ಗಿರೀಶ್ ಉಪಸ್ಥಿತರಿದ್ದರು.

