ವಿರಾಜಪೇಟೆ ತಾಲೂಕು ಅಮ್ಮತಿಯ ಚೌಡೇಶ್ವರಿ ಯೂಥ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮೊದಲನೇ ವರ್ಷದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ* ರವರು ಭೇಟಿ ನೀಡಿ ಶುಭ ಕೋರಿದರು.

ಅಮ್ಮತಿಯ ಜಿಎಂಪಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವು ಆಯೋಜನೆಗೊಂಡಿದ್ದು, ತಂಡಗಳಿಗೆ ಶುಭ ಕೋರಿ ಮಾತನಾಡಿದ ಮಾನ್ಯ ಶಾಸಕರು ಕ್ರೀಡೆಯು ಯುವಕರಲ್ಲಿ ಹುಮ್ಮಸ್ಸನ್ನು ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯವಾದ ಕ್ರಿಕೆಟ್ ಪಂದ್ಯಾಟವು ಗ್ರಾಮೀಣ ಮಟ್ಟದ ಪ್ರತಿಭೆಗಳ ಹೊರಹೊಮ್ಮುವಿಕೆಗೂ ಸಹಕಾರಿಯಾಗಲಿದೆ. ಇಲ್ಲಿ ಆಡುವ ಮಕ್ಕಳು ತಮ್ಮ ಕ್ರಿಕೆಟ್ ಭವಿಷ್ಯವನ್ನು ಉಜ್ವಲವಾಗಿ ಬೆಳೆಸಿಕೊಳ್ಳುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲ ಗಣ್ಯ ಮಾನ್ಯರು, ಸಮಾಜ ಸೇವಕರಾದ ಚೊಕ್ಕಂಡ ಸಂಜು ಸುಬ್ಬಯ್ಯ, ಕ್ರೀಡಾ ಪಟ್ಟುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version