ಮಾ.2ರಂದು ಕಕ್ಕಬ್ಬೆ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕುಂಬ್ಯಾರು ಕಲಾಡ್ಚ ಹಬ್ಬ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗು ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಶ್ರದ್ಧಾ ಕೇಂದ್ರವಾದ ನಾಪೋಕ್ಲು ಬಳಿಯ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಹಬ್ಬವಾದ ಕುಂಬ್ಯಾರು ಕಲಾಡ್ಚ ಹಬ್ಬವು ಮಾ.2 ಸೋಮವಾರದಂದು ನಡೆಯಲಿದೆ.

ದೇವಾಲಯದಲ್ಲಿ ಅಂದು ಬೆಳಿಗ್ಗೆ 5.30 ಗಂಟೆಗೆ ಅಭಿಷೇಕ ಪೂಜೆ,6.ಗಂಟೆಗೆ ಪ್ರಾತಕಾಲದ ಪೂಜೆ,10 ಗಂಟೆಗೆ ಎತ್ತು ಪೋರಾಟ, 10.30 ಗಂಟೆಗೆ ತುಲಾ ಭಾರ ಸೇವೆ, 11ಗಂಟೆಗೆ ಭಕ್ತಾದಿಗಳ ಸೇವಾ ಪೂಜೆಗಳು,12.30ಕ್ಕೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ 1ಗಂಟೆಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.

ಮದ್ಯಾಹ್ನ 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಾ ಬೆಟ್ಟಕ್ಕೆ ತೆರಳುವುದು,ಸಂಜೆ 4ಗಂಟೆಗೆ ಕಾಫಿ ಫಲಹಾರ,6ಗಂಟೆಗೆ ಮಲ್ಮಾ ದಿಂದ ದೇವರು ದೇವಾಲಯಕ್ಕೆ ಬಂದು ದೇವರ ಬಲಿ ನೃತ್ಯ ನಡೆಯಲಿದೆ. ರಾತ್ರಿ 8ಗಂಟೆಗೆ ಸಹ ಭೋಜನದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನಗೊಳ್ಳಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version