Close Menu
Kodagu News
    ಹೊಸ ಸುದ್ದಿ

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ
    • ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ
    • ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು
    • 44 ವರ್ಷಗಳ ಕಾಯುವಿಕೆಗೆ ಅಂತ್ಯ: ಚಿನ್ನ ಗೆದ್ದ ಭಾರತದ ಮಹಿಳಾ ಹಾಕಿ ತಂಡ
    • ವಿರಾಜಪೇಟೆಯಲ್ಲಿ ಸ್ಮರಣೀಯ ಹೆಜ್ಜೆ: ಮಾತಂಡ ಮೊಣ್ಣಪ್ಪ ಹೆಸರಿನಲ್ಲಿ ರಸ್ತೆ
    • ನಿರ್ಗತಿಗರ ನೆರವಿಗೆ ನಿಂತ ಕರವೇ.
    • ನಿಗದಿತ ಮಿತಿಮೀರಿಸಿ ಮರದ ದಿಮ್ಮಿ ಸಾಗಾಟ: 5 ಲಾರಿ ವಶ, ₹2.97 ಲಕ್ಷ ದಂಡ
    • ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಲಾರಿ: ವಾಹನ ಸವಾರರಿಗೆ ಕಿರಿಕಿರಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ ಕಾರ್ಯಕ್ರಮ
    ಜಿಲ್ಲೆ

    ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ ಕಾರ್ಯಕ್ರಮ

    ನಾಪೋಕ್ಲುವಿನಲ್ಲಿ ಯಶಸ್ವಿಯಾಗಿ ನಡೆದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನೆ ಹಾಗೂ ದಅವಾ ಸಮ್ಮೇಳನ ಕಾರ್ಯಕ್ರಮ

    ವರದಿ :ಝಕರಿಯ ನಾಪೋಕ್ಲು

     

    ನಾಪೋಕ್ಲು : ನಾಪೋಕ್ಲುವಿನ ಅಲ್ ನೂರ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮಸ್ಜಿದು ತೌಹೀದ್ ನೂತನ ಮಸೀದಿ ಉದ್ಘಾಟನಾ ಸಮಾರಂಭ ಹಾಗೂ ದಅವಾ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.

     

    ನಾಪೋಕ್ಲುವಿನ ಬೇತು ರಸ್ತೆಯಲ್ಲಿ ನಿರ್ಮಿಸಲಾದ ನೂತನ ಮಸೀದಿಯಲ್ಲಿ ಬುಧವಾರ ಆಝಾನ್ ಮೊಳಗಿಸಿ ಅಸರ್ ನಮಾಝ್ ನಿರ್ವಹಿಸುವ ಮೂಲಕ ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಷನ್ ಅಧ್ಯಕ್ಷರಾದ ಪಿ.ಎನ್.ಅಬ್ದುಲ್ ಲತೀಫ್ ಮದನಿ ಅವರು ನೂತನ ಮಸೀದಿಯನ್ನು ಉದ್ಘಾಟಿಸಿದರು.

     

    ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಲತೀಫ್ ಮದನಿ ಅವರು ಮಾತನಾಡಿ ಮಸೀದಿಗಳು ಅಲ್ಲಾಹನ ಆರಾಧನ ಕೇಂದ್ರವಾಗಿದ್ದು ನಮಾಝ್ ನಿರ್ವಹಿಸುವ ಮೂಲಕ ದೈವಾರಾಧನೆಯೊಂದಿಗೆ ಮನುಷ್ಯನನ್ನು ಸಮಾಜದಲ್ಲಿ ಉತ್ತಮವ್ಯಕ್ತಿಯಾಗಿ ಪರಿವರ್ತಿಸುವ ಪವಿತ್ರ ಕೇಂದ್ರವಾಗಿದೆ. ಲೋಕದಲ್ಲಿ ಹಲವಾರು ಧರ್ಮ ಜನಾಂಗದ ಜನರಿದ್ದು ಅವರೆಲ್ಲ ಅವರ ವಿಶ್ವಾಸದ ದೈವಗಳನ್ನು ಆರಾಧಿಸುತ್ತಾರೆ. ಆದರೆ ಮುಸಲ್ಮಾನರು ಏಕದೈವ ವಿಶ್ವಾಸಿಗಳಾಗಿದ್ದು ಪವಿತ್ರ ಗ್ರಂಥ ಖುರಾನ್ ಹಾಗೂ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರಾಗಿದ್ದಾರೆ. ದೇಶದ ನಾನ ಭಾಗಗಳಲ್ಲಿ ತೌಹೀದಿನ ಮಸೀದಿಗಳು ನಿರ್ಮಾಣವಾಗಿದ್ದು ಅದರಂತೆ ಇಲ್ಲಿಯೂ ಕೂಡ ನೂತನ ಮಸೀದಿಯನ್ನು ನಿರ್ಮಾಣಮಾಡಲಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.

     

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಡಾ. ಸಣ್ಣುವವಂಡ ಕಾವೇರಪ್ಪ ಅವರು ಮಾತನಾಡಿ ವಿವಿಧ ಧರ್ಮಗಳ ಜನಾಂಗದವರು ವಾಸಿಸುವ ನಮ್ಮ ದೇಶದಲ್ಲಿ ಮುಸ್ಲಿಂ ಸಮುದಾಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಸ್ಲಿಂ ಸಮುದಾಯದ ಜನರು ಬಡತನದಿಂದ ಈ ಹಿಂದೆ ಶೈಕ್ಷಣಿಕವಾಗಿ ಹಿಂದೆ ಸರಿದಿದ್ದರು. ಇದರಿಂದ ಸಮುದಾಯದ ಹಿಂಜರಿಕೆಗೆ ಕಾರಣವಾಗಿತ್ತು.ಆದರೆ ಈಗ ಸಮುದಾಯ ಶೈಕ್ಷಣಿಕವಾಗಿ ಪ್ರಗತಿಯನ್ನು ಹೊಂದಿದ್ದು ದೇಶ ವಿದೇಶದ ವಿವಿಧ ಕಡೆಗಳಲ್ಲಿ ವಿವಿಧ ಶೈಕ್ಷಣಿಕ ಕೇಂದ್ರಗಳನ್ನು ಒಳಗೊಂಡು ಉನ್ನತ ಸ್ಥಾನಕ್ಕೆ ಏರುತ್ತಿರುವುದು ಶ್ಲಾಘನೀಯ. ಧಾರ್ಮಿಕ ಪಠಣ ದೊಂದಿಗೆ ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿಸಲು ಪೋಷಕರು ಶ್ರಮ ಪಡಬೇಕು ಎಂದರು.

    ಗ್ರಾಮ ಪಂಚಾಯತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

    ಕಾರ್ಯಕ್ರಮದಲ್ಲಿ ಖಲೀಲ್ ತಲಪ್ಪಾಡಿಯವರು ಮುಖ್ಯ ಪ್ರಭಾಷಣ ನಡೆಸಿದರು. ಮೌಲವಿ ಶಿಹಾಬ್ ಎಡಕ್ಕರ ಹಾಗೂ ಮುನೀರ್ ಶರಫಿ ಅವರ ನೇತೃತ್ವದಲ್ಲಿ ತೌಹಿದ್ ಹಾಗೂ ಇಸ್ಲಾಮಿನಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ದಅವಾ ಸಮ್ಮೇಳನ ನಡೆಯಿತು.

     

    ಈ ಸಂದರ್ಭ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಪಿ.ಎಂ. ಖಾಸಿಂ,ಮೊಹಮ್ಮದ್ ಕುಂಞಿಸುಳ್ಯ, ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಆಸಿಫ್ ಅಲಿ, ಸಮಿತಿ ಸದಸ್ಯರಾದ ಹಸೈನಾರ್, ಮೊಹಮ್ಮದ್ ಹಾಜಿ, ಅಬ್ದುಲ್ ಖಾದರ್, ಅಬ್ದುಲ್ಲಾ, ಹಂಝ, ಮೂಸ, ಹಾರಿಫ್, ಮನ್ಸೂರ್, ನೌಫಲ್, ಜೈಸಲ್, ರಹೀಮ್, ಖಾತಿಮ್, ಸೇರಿದಂತೆ ಮತ್ತಿತರ ಪ್ರಮುಖರುಹಾಜರಿದ್ದರು.

    ಕಾರ್ಯಕ್ರಮದಲ್ಲಿ ನಿಶಾದ್ ಸ್ವಲಾಹಿ ಸ್ವಾಗತಿಸಿ, ಸರ್ವರನ್ನು ವಂದಿಸಿದರು.

    Previous Articleಕೊಡಗು ಜಾನಪದ ಪರಿಷತ್ ಆಯೋಜಿಸಿದ ಗ್ರಾಮೀಣ ಕ್ರೀಡಾ ಕೂಟದ ಮುಖ್ಯ ಅಥಿತಿಯಾಗಿ ಎ. ಎಸ್ ಪೊನ್ನಣ್ಣ
    Next Article ಇಸ್ಲಾಮಿನ ಆದರ್ಶ ತತ್ವವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಚೆರಿಯಪರಂಬು ಮಖಾಂ ವಾರ್ಷಿಕ ಉರೂಸ್ ಸಾರ್ವಜನಿಕ ಸಮ್ಮೇಳನದಲ್ಲಿ -ಹಾಫಿಜ್ ಸಿರಾಜುದ್ದೀನ್ ಖಾಸಿಮಿ ಕರೆ

    Related Posts

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಸ್ಟೀಲ್ ರೋಪ್ ಬ್ಯಾರಿಕೇಡ್‌ಗೆ ಅಭಿಮನ್ಯುವಿನಿಂದ ಪ್ರಾಯೋಗಿಕ ಪರೀಕ್ಷೆ

    October 6, 2026

    ಮಡಿಕೇರಿಯಲ್ಲಿ ಲೋಕಾಯುಕ್ತ ದಾಳಿ: ₹25 ಸಾವಿರ ಲಂಚ ಪಡೆಯುವಾಗ ಜಿಲ್ಲಾ ವಿಮಾ ಅಧಿಕಾರಿ ಲೋಕಾಯುಕ್ತ ಬಲೆಗೆ

    October 5, 2026

    ವಿರಾಜಪೇಟೆ ವಿದ್ಯುತ್ ದುರಂತ: ಗಾಯಗೊಂಡಿದ್ದ ಯುವಕ ಸಾವು

    October 5, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.