ದಕ್ಷಿಣ ಕೊಡಗಿಗೂ ಲಗ್ಗೆ ಇಟ್ಟ ಪ್ರವಾಸಿಗರು
ಮೈಸೂರು ಗೋಣಿಕೊಪ್ಪ ಮಾರ್ಗವಾಗಿ 3 ಕಿ.ಮೀ ದೂರ ಟ್ರಾಫಿಕ್ ಜಾಮ್
ಸಾಲು ಸಾಲು ರಜಾ ನಡುವೆ ವರ್ಷದ ಕೊನೆ ದಿನಗಳನ್ನು ಪ್ರಕೃತಿಯ ನಡುವೆ ಕಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಇದೀಗ ದಕ್ಷಿಣ ಕೊಡಗಿನತ್ತ ಪ್ರವಾಸಿಗರು ಹೆಜ್ಜೆ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಇಂದು ಬೆಳಗಿನಿಂದಲೇ ಮೈಸೂರು ಗೋಣಿಕೊಪ್ಪಲು ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಚೆನ್ನಂಗೊಲ್ಲಿ ಯಿಂದ ಗೋಣಿಕೊಪ್ಪಲ್ ವರೆಗೆ 3 ಕಿಲೋಮೀಟರ್ ಸರತಿ ಸಾಲಿನಲ್ಲಿ ನಿಧಾನಕ್ಕೆ ವಾಹನ ಹೋಗುತ್ತಿರುವ ದೃಶ್ಯ ಕಂಡು ಬಂತು.
ಎಲ್ಲಾ ಅಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್ ಜನವರಿ 5ರವರೆಗೆ ಭರ್ತಿಯಾಗಿದೆ ಎಂದು ಹೇಳಲಾಗಿದೆ.
ಕೊಡಗು ನ್ಯೂಸ್


