ನಿಷೇಧಿತ MDMA ಮಾರಾಟ: PNDA ಭ್ರಷ್ಟಾಚಾರ ನಿಗ್ರಹದ ಸಂಸ್ಥೆಯ ಕಾರ್ಯಾಧ್ಯಕ್ಷ ಜೈಲುಪಾಲು

ಕುಶಾಲನಗರ: ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ PNDA ಭ್ರಷ್ಟಾಚಾರ ನಿಗ್ರಹ ದಳ ಎಂಬ ಸಂಸ್ಥೆಯ ಕಾರ್ಯಾಧ್ಯಕ್ಷ  ಕ್ಷೆವಿಯರ್ ಎಂಬಾತನನ್ನು ಪೊಲೀಸರು  ಕುಶಾಲನಗರದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

 

ಕಳೆದ ಒಂದು ವಾರದ ಹಿಂದೆ ಮಾದಕ ವಸ್ತು ಮಾರಾಟ ಮಾಡುವ ವೇಳೆ ಈತನನ್ನು ಕುಶಾಲನಗರದಲ್ಲಿ ಕುಶಾಲನಗರದಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಈತನ ಸಂಪರ್ಕದಲ್ಲಿದ್ದ 20 ಕ್ಕೂ ಹೆಚ್ಚು ಜನರನ್ನು ಕರೆಸಿ ವೈದ್ಯಕೀಯ ಪರೀಕ್ಷೆ ನಡೆಸಿ ಅವರುಗಳ ಮೇಲು ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿಯೂ ಇದ್ದು ಇನ್ನಷ್ಟು ಮಾಹಿತಿ ಪೊಲೀಸ್ ಅಧಿಕಾರಿಗಳ ಹೇಳಿಕೆಯಿಂದಷ್ಟೇ ತಿಳಿಯಬೇಕಿದೆ.

ಸಮಾಜ ಸೇವೆ ಮಾಡುವ ನೆಪದಲ್ಲಿ ಸಂಸ್ಥೆಗಳನ್ನು ಹುಟ್ಟುಹಾಕಿ ಹುದ್ದೆಗಳನ್ನು ಅಲಂಕರಿಸಿ ಸಮಾಜವನ್ನು ಹಾಳು ಮಾಡುವ ಇಂಥ ಸಂಸ್ಥೆಗಳು ಮತ್ತು ಅದರಲ್ಲಿ ಕರ್ತವ್ಯ ನಿರ್ವಹಿಸುವವರ ಮೇಲೆ ನಿಗಾ ಇಡುವ ಅವಶ್ಯಕತೆಯಿದೆಯೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ನ್ಯೂಸ್

Exit mobile version