
ರಿಯಾಲಿಟಿ ಚೆಕ್ ಮಾಡಿದ ಆರ್ಟಿಐ ಕಾರ್ಯಕರ್ತ ಮದನ್
ವಿರಾಜಪೇಟೆಯಿಂದ ಪೆರುಂಬಾಡಿ ಮಾಕುಟ್ಟ ಕೂಟುಹೊಳೆ ಮೂಲಕ ಕೇರಳ ದಾಜ್ಯವನ್ನು ಸಂಪರ್ಕಿಸುವ ಅಂತರಾಜ್ಯ ಹೆದ್ದಾರಿಯ ರಸ್ತೆ ಕಾಮಗಾರಿ ಬಗ್ಗೆ ವಾಹನ ಚಾಲಕರಲ್ಲಿ ಇದೀಗ ಗೊಂದಲ ಏರ್ಪಟ್ಟಿದ್ದು ರಸ್ತೆ ಸುಗಮ ಸಂಚಾರಕ್ಕೆ ಅನುವಾಗಿದೆಯೇ ಎಂಬ ಸಂಶಯ ಉಂಟಾಗಿದ್ದು ಶಾಸಕರ ಅಧಿಕೃತ ವಾಟ್ಸಪ್ ಬಳಗದಲ್ಲೇ ಒಮ್ಮೆ ಸುಗಮ ಸಂಚಾರಕ್ಕೆ ಅನುವು ಎಂಬ ಪೋಸ್ಟ್ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ರಿಯಾಲಿಟಿ ಚೆಕ್ ಮಾಡಲು ತೆರಳಿದ ಸಾಮಾಜಿಕ ಕಾರ್ಯಕರ್ತ ಮದನ್ ಆ ಭಾಗದಲ್ಲಿ ರಸ್ತೆ ದುರಸ್ತಿಯಾಗಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಶಾಸಕರ ಅಧಿಕೃತ ವಾಟ್ಸಪ್ ಬಳಗದಲ್ಲಿ ರಸ್ತೆ ಬಹುತೇಕ ಪೋರ್ನ್ ಎಂಬ ಪೋಸ್ಟ್ ಹಾಕಲಾಗಿದೆ.
ನಿತ್ಯ ಸಾವಿರಕ್ಕೂ ಅಧಿಕ ಸಂಚರಿಸುವ ಈ ಮಾರ್ಗದಲ್ಲಿ ರಸ್ತೆಯನ್ನು ಶೀಗ್ರ ಅಭಿವೃದ್ಧಿಪಡಿಸುವಂತೆ ಒತ್ತಡ ಹೇರಲಾಗಿತ್ತು. ಇರಿಟ್ಟಿ ಶಾಸಕ ಸನ್ನಿ ಜೊಸೆಪ್ ಅವರು ಈ ವಿಚಾರವಾಗಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರವನ್ನು ಕೂಡ ಬರೆದಿದ್ದರು.
ತ್ವರಿತಗತಿಯಲ್ಲಿ ಕಾಮಗಾರಿ ಮಾಡುವಂತೆ ನಾಗರಿಕರು ಒತ್ತಾಯಿಸುತ್ತಿದ್ದು ಸುಗಮ ಸಂಚಾರಕ್ಕೆ ಅನುವು ಎಂಬ ಪೋಸ್ಟ್ ನೋಡಿ ದ್ವಿಚಕ್ರ ವಾಹನದಲ್ಲಿ ಬಂದಿದ್ದು ದಂಪತಿ ಹೊಂಡದ ರಸ್ತೆ ನೋಡಿ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
ಈ ಬಗ್ಗೆ ಕೊಡಗು ನ್ಯೂಸ್ ಜೊತೆ ಮಾತನಾಡಿದ ಮದನ್ “ರಸ್ತೆ ಕೇವಲ ಚೆಕ್ ಪೋಸ್ಟ್ ವರೆಗೆ ಮಾತ್ರ ಕೆಲಸ ಮುಗಿದಿದ್ದು ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಪೆರುಂಬಾಡಿಯಿಂದ ಮಾಕುಟ್ಟ ಚೆಕ್ ಪೋಸ್ಟ್ ವರೆಗೂ ಅದೇ ಗುಂಡಿ ಅದೇ ದೂಳು ಇದ್ದು ಜನರನ್ನು ಹಾದಿ ತಪ್ಪಿಸುವ ಕೆಲಸವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


