*ಒಳಿತನ್ನು ಬೋಧಿಸುವವರೆಲ್ಲರೂ ಗುರುವಿನ ಸಮಾನರು*
ಕರ್ನಾಟಕ ವಾರ್ತೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ದಿನದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ ಆದರೆ ಭಾರತ ದೇಶದಲ್ಲಿ ಮಾತ್ರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಎಂದು ಮಡಿಕೇರಿ ಕ್ಷೇತ್ರ ವಿಧಾನಸಭಾ ಶಾಸಕರಾದ ಡಾ. ಮಂತರ್ ಗೌಡ ರವರು ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಕ್ಷಕರ ಕುರಿತು ಮಾತನಾಡಿ ಶಿಕ್ಷಕರ ಮಹತ್ವವನ್ನು ತಿಳಿಸಿದರು.
ಗುರುಗಳಿಲ್ಲದಿದ್ದರೆ ಸಮಾಜದ ಸ್ಥಿತಿಗತಿಗಳು ಬೆರಡೆಯೇ ಸಾಗುತ್ತಿತ್ತು ಗುರುವಿಂದಲೆ ಕೆಡಕುಗಳು ಮರೆಯಾಗಿ ಒಳಿತಾಗುತ್ತಿರುವುದು. ಗುರುವಿಂದಲೇ ಎಲ್ಲವೂ ಸಾಧ್ಯ ಹುಳಿ ಪೆಟ್ಟು ಬಿದ್ದರೆಯೇ ಕಲ್ಲು ಶಿಲೆಯಾಗುವುದು ಆದುದರಿಂದಲೇ ಪ್ರತಿಯೊಬ್ಬರ ಜೀವನದಲ್ಲಿಯೂ ಗುರು ಮಹತ್ವಪೂರ್ಣವಾಗಿದ್ದಾರೆ ಎಂದು ಗುರುವಿನ ಮಹತ್ವ ವನ್ನು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದುದರಿಂದಲೇ ಶಾಲೆಗಳಿಗೆ ಮಕ್ಕಳು ದಾಖಲಾಗಲು ಶಾಲೆಗಳಲ್ಲಿ ಅನೇಕ ಬದಲಾವಣೆಗಳು ನೂತನ ಕಾರ್ಯಕ್ರಮಗಳನ್ನು ತರುತ್ತಿರುವುದು. ಅದರಲ್ಲಿಯೂ ಕೊಡಗಿನಲ್ಲಿ ಮಳೆಯಿಂದಾಗಿ ಪ್ರವಾಹಗಳು ಬಿರುಗಾಳಿ ವಾಹನ ಕೊರತೆ ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಲು ತೊಂದರೆಯಾಗುತ್ತಿದೆ. ಇಂತಹ ಪರಿಸ್ಥಿತಿಗಳನ್ನು ಸುಧಾರಿಸಲು ಹಲವಾರು ನಿರ್ಣಯಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಹಾಗೆಯೇ ಶಾಸಕರು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅದನ್ನು ಸರಿಪಡಿಸಿ ಕೊಡುವುದರ ಭರವಸೆಯನ್ನು ನೀಡಿದರು. ಶಿಕ್ಷಕರುಗಳು ಸಹ ಒಟ್ಟಾಗಿ ಹೋರಾಟ ನಡೆಸಬೇಕು. ನಮಗೆ ದೊರಕಬೇಕಾದ ಪ್ರತಿಯೊಂದು ಸವಲತ್ತು ಪಡೆದುಕೊಳ್ಳಬೇಕು ಹಾಗೆಯೇ ಪ್ರಾಮಾಣಿಕ ಪ್ರಯತ್ನ ನಡೆಸಿ ಬೋಧಿಸಿದ ಶಿಕ್ಷಕರುಗಳಿಗೆ ವಂದಿಸಿದರು ಗೌರವಿಸಿದರು.
ನಿವೃತ್ತರಾಗಿರುವ ಶಿಕ್ಷಕರಿಗೆ ಮತ್ತೆ ಪುನಹ ಅವಕಾಶ ಕಲ್ಪಿಸುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿವೃತ್ತಿ ಹೊಂದಿದವರು ಸಹ ಮತ್ತೆ ಪುನಹ ಅತಿಥಿ ಉಪನ್ಯಾಸಕರುಗಳಾಗಿ ಬೋಧಿಸಲು ಇಚ್ಛಿಸಿದರೆ ಅವರುಗಳಿಗೆ ಅವಕಾಶ ಕಲ್ಪಿಸುವುದರ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮೈಸೂರಿನ ಉಪನ್ಯಾಸಕರಾದ ಎಸ್ ಪಿ ನಾಗರಾಜು ರವರು ಮಾತನಾಡಿ “ಗುರುವಿಂದ ಬಂಧುಗಳು ಗುರುವಿಂದ ದೈವಗಳು ಗುರುವಿಂದಲಾದುದು ಪುಣ್ಯ ಲೋಕಕೆ ಗುರುವಿಂದ ಮುಕ್ತಿ ಸರ್ವಜ್ಞ”
ಮೊದಲು ಗುರುವಿನ ಉಪಚಾರವಾದ ನಂತರ ಬಂಧುಗಳನ್ನು ಉಪಚರಿಸಬೇಕು ಮೊದಲು ಗುರುವನ್ನು ಪೂಜಿಸಿ ಗೌರವಿಸಬೇಕು ನಂತರ ದೇವರನ್ನು ಪೂಜಿಸಬೇಕು ನಮಸ್ಕರಿಸಬೇಕು ಏಕೆಂದರೆ ಗುರುವಿನಿಂದಲೇ ನಮಗೆ ಪುಣ್ಯ ಲೋಕವು ಪ್ರಾಪ್ತಿಯಾಗುವುದು ಮತ್ತು ಗುರುವಿನಿಂದಲೇ ನಮಗೆ ಮುಕ್ತಿಯು ದೊರೆಯುವುದು ಕಾಮ,ಕ್ರೋದ,ಲೋಭ,ಮತ್ಸರ,ಮೋಹ ಇವುಗಳನ್ನು ಮನಸ್ಸಿನಿಂದ ಹೊರತೆಗೆಯುವವರೆ ಗುರುಗಳು ಅಂತಹ ಪುಣ್ಯ ಕೆಲಸವನ್ನು ಯಾರು ಮಾಡಿದರು ಸರಿಯೇ ಅವರು ಗುರುಗಳಿಗೆ ಸಮಾನ ಎಂದರು.
ಶಿಕ್ಷಕ,ಚಿಂತಕ,ಬರಹಗಾರ, ಭಾಷಣಕಾರ ಈ ರೀತಿಯಾಗಿ ನನ್ನನ್ನು ತಯಾರು ಮಾಡಿದ ನನ್ನ ಶಿಕ್ಷಕರುಗಳಿಗೆ ನಾನು ವಂದಿಸಬೇಕಾದರೆ ನನ್ನ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಬೇಕು ಆಗಲೇ ನನ್ನ ಜನ್ಮಕ್ಕೊಂದು ಸಾರ್ಥಕ ಹಾಗೂ ಅರ್ಥ ಸಿಗುವುದು ಎಂದು ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಿಳಿಸಿದರು. ಅಂತಹ ನಿಸ್ವಾರ್ಥ ಮನಸ್ಸಿನ ವ್ಯಕ್ತಿ ಎಂದರೆ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಾತ್ರವೇ ಎಂದರು.
“Googel cannot replace guru”
ಕೊರೋನಾ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆಯದೆ ಶಿಕ್ಷಕರುಗಳು ಆನ್ಲೈನ್ ನಲ್ಲಿ ಹಾಗೂ ಗೂಗಲ್ ನಲ್ಲಿ ಮಾಹಿತಿ ಪಡೆದು ಬೋಧಿಸುತ್ತಿದ್ದರು. ಶಾಲೆಯ ನಾಲ್ಕು ಗೋಡೆ ಮದ್ಯ ಪಾಠ ಮಾಡುವುದಕ್ಕೂ ಮೊಬೈಲ್ ನಲ್ಲಿ ಕುಳಿತು ಪಾಠ ಮಾಡುವುದಕ್ಕೂ ಹೆಚ್ಚಿನ ವ್ಯತ್ಯಾಸವಿದೆ ಎಂದಿಗೂ ಸಹ ಕೋರೋಣದಂತ ಸಮಯ ಮರುಕಳಿಸಬಾರದೆಂದು ಕೊರೋನಾ ಸಮಯದಲ್ಲಿ ಶಿಕ್ಷಕರುಗಳಿಗೆ ಆದ ಕಷ್ಟವನ್ನು ನೆನೆದರು.
ಶಿಕ್ಷಕರ ಹೆಗಲೇರಿ ಹಾರಿದ ಉಪಗ್ರಹಗಳು ನಾವೆಲ್ಲವೆಂದು ಶಿಕ್ಷಕರ ಜೀವನವನ್ನು ವಿವರಿಸಿದರು ಪ್ರೈಮರಿ ಯಿಂದ ಸ್ನಾತಕೋತ್ತರವರೆಗೂ ಶಿಕ್ಷಕರ ಅವಶ್ಯಕತೆ ಇದೆ ಶಿಕ್ಷಕರು ಉರಿಯುವ ಮೇಣದಬತ್ತಿಯಂತೆ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವ ಮೇಣದಂತೆಯೇ ಶಿಕ್ಷಕರುಗಳು ಅಂತಹ ಮಹತ್ವಸ್ಥಾನ ಶಿಕ್ಷಕರುಗಳಿಗಿದೆ
ಗಾಂಧೀಜಿ ನಂತರ ದೊಡ್ಡ ನಾಯಕನೆಂದರೆ ನೆಹರು ಅಂತಹ ನೆಹರು ರವರು ರಾಧಾಕೃಷ್ಣನ್ ಅವರನ್ನು ಭಾಷಣಕ್ಕಾಗಿ ಕರೆದರೆಂದರೆ ಅವರಂತಹ ಭಾಷಣಕಾರರಾಗಿರಬಹುದು ಎಂದು ಸರ್ವಪಲ್ಲಿ ರಾಧಾಕೃಷ್ಣನ್ ರವರ ಮಹತ್ವವನ್ನು ಶಿಕ್ಷಕರುಗಳಿಗೆ ತಿಳಿಸಿದರು.
“ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ”ಇದನ್ನು ಬಸವಣ್ಣ ತಿಳಿಸಿದರು. ಈ ರೀತಿಯಂತೆಯೇ ಶಿಕ್ಷಕರುಗಳು ನಡೆಯಬೇಕು ವಿದ್ಯಾರ್ಥಿಗಳನ್ನು ನಡೆಸಬೇಕು.
ಅರಿವೇ ಗುರು ನನಗೊಬ್ಬ ಗುರು ನಿನಗೊಬ್ಬ ಗುರು ಪ್ರತಿಯೊಬ್ಬರಲ್ಲಿಯೂ ಗುರುವಿದ್ದಾನೆ. ಒಳ್ಳೆಯದನ್ನು ಬೋಧಿಸಿದವರೆಲ್ಲರೂ ಗುರುವಿಗೆ ಸಮಾನವೆಂದರು. ಗುರುಗಳು ಪಾಠ ಪುಸ್ತಕದಲ್ಲಿರುವ ವಿಚಾರವಲ್ಲದೆ ಸಮಾಜದ ನೈತಿಕತೆ ಆಚಾರ-ವಿಚಾರ ಹಿರಿಯರಿಗೆ ಗೌರವ ನಡವಳಿಕೆ ಎಲ್ಲವನ್ನು ಶಿಕ್ಷಕರುಗಳು ತಿಳಿಸಿಕೊಡಬೇಕು ನೈತಿಕತೆ ವಿಲ್ಲದ ಶಿಕ್ಷಣ ಊಟಕ್ಕೆ ಉಪ್ಪಿನಕಾಯಿ ಇಲ್ಲದಂತೆ ಬದುಕಿನ ತುಂಬಾ ಹೆಣಗಾಡುವುದು ಕೊನೆಗೊಮ್ಮೆ ಹೆಣವಾಗುವುದು ಬುದ್ಧ ಹೇಳಿದಂತೆ ‘ಆಸೆಯೇ ದುಃಖಕ್ಕೆ ಮೂಲ’ಆಸೆಯನ್ನು ತೊರೆದು ಲೋಕವನ್ನು ನೋಡಬೇಕು ಎಂದು ತಿಳಿಸಿದರು.
‘ದೇಶ ನನ್ನದು ನನ್ನದು ನಾಡು ಎನ್ನದ ಮಾನವನೆದೆ ಸುಡುಗಾಡು’ಇಂತಹ ದೇಶಭಕ್ತಿಯನ್ನು ಭಾರತದಲ್ಲಿ ತೋರಿಸಿಕೊಟ್ಟ ನಾಡು ಎಂದರೆ ಅದು ಕೊಡಗು ಕಲೆ,ಸಾಹಿತ್ಯ,ಕ್ರೀಡೆ ಎಲ್ಲಾ ವಿಷಯದಲ್ಲೂ ಸಾಧನೆಗೈಯ್ಯುವ ನಾಡು ಎಂದರೆ ಕೊಡಗು ಎಂದು ನೆರೆದಿರುವ ಶಿಕ್ಷಕ ವೃಂದದವರ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ರವರು ಮಾತನಾಡಿ ಅತ್ಯುತ್ತಮ ಸೇವೆ ಸಲ್ಲಿಸಿ ಸಾವಿರಾರು ಮಕ್ಕಳಿಗೆ ಬೆಳಕು ತೋರಿದ ಹಾಗೆಯೇ ಸಮಯಕ್ಕೆ ಸರಿಯಾಗಿ ಆಗಮಿಸಿ ವಿದ್ಯಾರ್ಥಿಗಳ ಬದುಕಲ್ಲಿ ಜ್ಯೋತಿ ಆಗುವ ಶಿಕ್ಷಕರಿಗಳಿಗೆ ನಮನ ಸಲ್ಲಿಸಿದರು. ಎರಡು ಬಾರಿ ಉಪರಾಷ್ಟ್ರಪತಿ ಒಂದು ಬಾರಿ ರಾಷ್ಟ್ರಪತಿ ಹಾಗೂ ಕುಲಪತಿಯಾಗಿ ಇದೆಲ್ಲವುದಕ್ಕಿಂತ ಮಿಗಿಲಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ರವರನ್ನು ಸ್ಮರಿಸುತ್ತಾ ಶಿಕ್ಷಕರ ದಿನಾಚರಣೆಯನ್ನು ನಡೆಸಿದ ಜಿಲ್ಲಾ ಆಡಳಿತಕ್ಕೆ ಹಾಗೂ ಶಾಸಕರಾದ ಮಂತರ್ ಗೌಡ ರವರಿಗೂ ವಂದಿಸಿದರು.
2025-26ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ವಿಜೇತರಾದ ಶಾಲಿನಿ ಕೆ.ಆರ್, ಮೀನಾಕ್ಷಿ ಎ.ಡಿ, ವನಜ ಎಂ,ಜಾನ್ಸಿ ಕೆ.ವಿ,ಯೋಗೇಶ್ ಎಸ್.ಎ,ಅಬ್ದುಲ್ ರಬ್ ಎಮ್.ಎಸ್, ಎ.ಕೆ ಮಾಚಮ್ಮ,ಸುಷಾ ಕೆ, ಎಚ್ ಡಿ ಲೋಕೇಶ್. ಇವರುಗಳಿಗೆ ಶಾಸಕರಾದ ಮಂತರ್ ಗೌಡ ರವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಶಿಕ್ಷಕ ವೃತ್ತಿಯಲ್ಲಿ ನಿವೃತ್ತ ಹೊಂದಿದ ಸಾವಿತ್ರಿ ಪಿ.ಎ, ಜಯಶ್ರೀ ಸಿ ಎಂ,ಜಯಂತಿ ಬಿ ಎನ್,ವನಜ ಬಿ ಸಿ,ಕಮಲಾಕ್ಷಿ ಕೆ
ಜೆ,ಶಾಂತಿ ಕುಮಾರಿ ಪಿ ಎಂ,ಗಂಗಮ್ಮ ಪಿ ಕೆ, ಭಾರತ ಬಿ.ಎಂ,ದಮಯಂತಿ ಬಿ.ಎ,ನತಲಿಸಾ ಡಿ,ಕುಶಾಲಪ್ಪ ಎಸ್.ಕೆ,ಮುತ್ತಮ್ಮ ಕೆ.ಎಚ್,ಪುಷ್ಪಾವತಿ ಬಿ.ಎಮ್, ವಿಶಾಲಾಕ್ಷಿ ಕೆ.ಎಸ್,ನಾಗವೇಣಿ ಡಬ್ಲ್ಯೂ,ಪಾರ್ವತಿ ಎ. ಎಸ್,ದಮೇಂದ್ರ ಕೆ.ಸಿ, ವಸಂತಿ ಎಚ್ ಎಂ,ದಮಯಂತಿ ಪಿ.ಎಂ, ಜಲಜ ಪಿ.ಎಂ, ಹೇಮಾವತಿ ಕೆ.ಜೆ,ಶ್ರೀನಿವಾಸ್ ಬಿ.ಎಂ,ಲತಾ ಪಿ ಎಸ್ ಇವರುಗಳಿಗೆ ನಿವೃತ್ತಿ ಜೀವನದ ಶುಭಾಶಯಗಳನ್ನು ತಿಳಿಸುತ್ತಾ ಹಾಗೆಯೇ ಇವರ ಸಾಧನೆಯನ್ನು ವಿವರಿಸುತ್ತಾ ಡಾ ಮಂತರ್ ಗೌಡರವರು ಗೌರವ ಪೂರ್ವಕವಾಗಿ ಗೌರವಿಸಿ ವಂದಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜು ಸ್ವಾಗತಿಸಿದರು. ಮೋಹನ್ ಪೆರಾಜೆ ಹಾಗೂ ಮಂಜುಳಾ ಚಿತ್ರಪುರ ನಿರೂಪಣೆ ನಿರ್ವಹಿಸಿದರು. ಉಪನ್ಯಾಸಕರಾದ ಬಿಂದು ರವರು ವಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸದಾಶಿವಯ್ಯ ಪಲ್ಲೆದ್, ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷರಾದ ಪೂರ್ಣೇಶ್, ಜಿಲ್ಲಾ ಪದವಿ ಪೂರ್ವ ಕಾಲೇಜು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವಕಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಪೆರಾಜೆ, ಮತ್ತಿತರರು ಇದ್ದರು.
