
*ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಸೂಚನೆ ಮೇರೆಗೆ ದಾಂಧಲೆ ನಿರತ ಕಾಡಾನೆಗಳ ಗುಂಪನ್ನು ಕಾಡಿಗೆಟ್ಟಲಾಯಿತು*
ಅನೇಕ ದಿನಗಳಿಂದ ಕೖಷಿ ಫಸಲು ನಷ್ಟ. ಪ್ರಾಣಭೀತಿಯುಂಟು ಮಾಡಿದ್ದ ದಾಳಿಕೋರ ಕಾಡಾನೆಗಳೂ ಕೊನೆಗೂ ಕಾಡಿಗೆ
ನಿನ್ನೆಯಷ್ಟೇ ಶಾಸಕ ಪೊನ್ನಣ್ಣ ಅರಣ್ಯಾಧಿಕಾರಿಗಳು, ಎಲಿಫೆಂಟ್ ಟಾಸ್ಕ್ ಫೋಸ್೯ ತಂಡದ ಸಭೆ ನಡೆಸಿ ಕಾಡಾನೆಗಳ ದಾಂಧಲೆ ತಡೆಗಟ್ಟಿ, ಆನೆಗಳನ್ನು ಕಾಡಿಗೆ ಓಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಬೆನ್ನಲ್ಲೇ ಇಂದು ಕಾಡಾನೆಗಳ 4 ಗುಂಪನ್ನು ಅರಣ್ಯದೊಳಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಳೆಗಾಲದಲ್ಲಿ ಹಲಸು, ಬಿದಿರು, ಸೊಪ್ಪಿನಾಸೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತೋಟಗಳಿಗೆ ಕಾಡಾನೆಗಳು ಬರುವ ಸಾಧ್ಯತೆ ಹಿನ್ನಲೆಯಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ನಿನ್ನೆಯಷ್ಟೇ ಶಾಸಕ ಪೊನ್ನಣ್ಣ ಸೂಚನೆ ನೀಡಿದ್ದರು.
**


