ಯೋಗದಿಂದ ಆಯುಷ್ಯಾರೋಗ್ಯ ಭಾಗ್ಯ: ಶಾಸಕ ಪೊನ್ನಣ್ಣ
ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಆಯೋಜನೆಗೊಂಡ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ ಅವರು ಭಾಗವಹಿಸಿದರು.
ಬಳಿಕಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಯೋಗವು ಜೀವನ ಪಾಠ ಹೇಳಿಕೊಡುವುದರೊಂದಿಗೆ ವ್ಯಕ್ತಿಯ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಯೋಗದಿಂದ ಏಕಾಗ್ರತೆ ವೃದ್ಧಿಯಾಗುವುದರೊಂದಿಗೆ ಮಕ್ಕಳ ಜ್ಞಾನ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ. ಭಾರತದ ಪುರಾತನ ಪದ್ಧತಿಗಳಲ್ಲಿ ಯೋಗಾಸನ ಅಭ್ಯಾಸವು ಒಂದಾಗಿದೆ. ಯೋಗ ಕಾರ್ಯಕ್ರಮವು ಕೇವಲ ಯೋಗ ದಿನಾಚರಣೆಗೆ ಮಾತ್ರ ಸೀಮಿತವಾಗದೆ, ದಿನನಿತ್ಯದ ಬದುಕಿನಲ್ಲಿ ಎಲ್ಲರೂ ಅಳವಡಿಸಿಕೊಳ್ಳುವಂತೆ ಆಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಪರಹಿತನಂದಾ ಸ್ವಾಮಿ, ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಕರು ಉಪಸ್ಥಿತರಿದ್ದರು.

