ಮಡಿಕೇರಿ : ಕರಿಕೆ ಗ್ರಾಮದ ಕರಿಂಬಳಪು ಹೊಳೆಯ ತೂಗು ಸೇತುವೆ ಮುರಿದು ಹೋಗಿದ್ದು, ಜನಸಾಮಾನ್ಯರು ಸಂಪರ್ಕ ಸೇತುವೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ . ಮಾಹಿತಿ ಇದ್ದರೂ ಇಲ್ಲಿಯ ತನಕ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಲಿಲ್ಲ ಎಂದು ಆರೋಪಿಸಿರುವ ಸ್ಥಳೀಯ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲೇ ಸೇತುವೆಯನ್ನು ನಿರ್ಮಿಸಿದ್ದಾರೆ. ಇನ್ನೇನೂ ಕೆಲವೇ ದಿನಗಳಲ್ಲಿ ಶಾಲೆ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ತಾತ್ಕಾಲಿಕ ತೂಗು ಸೇತುವೆಯನ್ನು ನಿರ್ಮಿಸಿದ್ದು, ಇನ್ನಾದರೂ ಇತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಸ್ವತವಾಗಿ ವಾಹನಗಳು ಓಡಾಡುವಂತಹ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸೇತುವೆ ನಿರ್ಮಿಸಿಕೊಡಬೇಕೆಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.
ಬ್ರೇಕಿಂಗ್ ನ್ಯೂಸ್
- ಕೊಫಿಯಾ ಹೋಟೆಲ್ನಲ್ಲಿ ಬುಧವಾರ ಓಣಂ ವಿಶೇಷ ಸಧ್ಯೆ
- ಮಳೆಗಾಗಿ ಇಗ್ಗುತ್ತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ
- ಮೊದಲು ಕೊಡಗಿನ ರೈತರಿಗೆ ನ್ಯಾಯ ಒದಗಿಸಿ: ರಂಜಿ ಪೂಣಚ್ಚ
- ಕಾಡಾನೆ ದಾಳಿಗೆ ಬೆಂಗಳೂರಿನ ಪ್ರವಾಸಿಗ ಬಲಿ
- ಗೌಡ ಸಮಾಜಗಳ ಪ್ರಮುಖರಿಂದ ಶಾಸಕ ಪೊನ್ನಣ್ಣರಿಗೆ ಅಭಿನಂದನೆ
- ಲಾರಿ ಡಿಕ್ಕಿ: ಟ್ಯಾಕ್ಸಿ ಚಾಲಕ ಸಾಹಿಲ್ ಸಾವು
- ಮಡಿಕೇರಿ ದಸರಾಕ್ಕೆ ₹2 ಕೋಟಿ ಅನುದಾನ ಘೋಷಣೆ
- ರಾಜ್ಯಪಾಲರನ್ನು ಭೇಟಿ ಮಾಡಿದ ಶಾಸಕ ಪೊನ್ನಣ್ಣ: KPSC ಆರೋಪಗಳ ಕುರಿತು ವಿಸ್ತೃತ ಚರ್ಚೆ


