ಮಡಿಕೇರಿ : ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಕತೂರು, ಮೇಕೇರಿ ಹಾಗೂ ಹೊಸ್ಕೇರಿಯಲ್ಲಿ ನಡೆದ ಸರಣಿ ಕಳ್ಳತನದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸುವಲ್ಲಿ ಯಶಸ್ವುಯಾಗಿದ್ದು ಬಂಧಿತರನ್ನು ಸುಂಟಿಕೊಪ್ಪ ನಿವಾಸಿ ಮಹೇಶ್, ಮದೆ ಗ್ರಾಮದ ವಿನೋದ್ ಹಾಗೂ ಗಾಳಿಬೀಡು ಗ್ರಾಮದ ರಾಮಯ್ಯ ಗುರುತಿಸಲಾಗಿದ್ದು ಬಂಧಿತರಿಂದ ಅಂದಾಜು 31 ಚೀಲ ಕಾಫಿಯನ್ನು ವಶಪಡಿಸಿಕೊಳ್ಳಲಾಗಿದೆ.


