Close Menu
Kodagu News
    ಹೊಸ ಸುದ್ದಿ

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026

    ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ

    September 11, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
    • ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
    • ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
    • ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
    • ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
    • ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ
    • ಸಾಮರಸ್ಯದ ಕೊಡಗಿಗೆ ಬೆಂಕಿ ಹಚ್ಚುತ್ತಿರುವವರು ಯಾರು?
    • ಲಂಡನ್‌ನಲ್ಲಿ ಕೊಡಗಿನ ಕೊನೆಯ ರಾಜನ ನೆನಪು: ಚಿಕ್ಕವೀರ ರಾಜೇಂದ್ರ ವಾಸಿಸಿದ್ದ ಮನೆಗೆ ಬ್ಲೂ ಪ್ಲೇಕ್‌
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಡುಗೆ ಮನೆ»ಕೊಡಗು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದ ಪೊಲೀಸ್ ಕ್ವಾಟ್ರರ್ಸ್ ಕಳ್ಳತನ ಪ್ರಕರಣವನ್ನು ಭೇದಿಸಿದ ಮಡಿಕೇರಿ ನಗರ ಪೊಲೀಸರು
    ಅಡುಗೆ ಮನೆ

    ಕೊಡಗು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದ ಪೊಲೀಸ್ ಕ್ವಾಟ್ರರ್ಸ್ ಕಳ್ಳತನ ಪ್ರಕರಣವನ್ನು ಭೇದಿಸಿದ ಮಡಿಕೇರಿ ನಗರ ಪೊಲೀಸರು

    ಇದೊಂದು ಕೇಸು ಪತ್ತೆಯಾಗಬೇಕಿತ್ತು.

    ಇದೊಂದು ಗೆಲುವು ಪೊಲೀಸರಿಗೆ ಬೇಕಾಗಿತ್ತು!

    ಪೊಲೀಸರ ವಸತಿ ಗೃಹದಲ್ಲೇ ಕಳ್ಳತನ,ರಕ್ಷಣೆ ನೀಡುವ ಆರಕ್ಷಕರಿಗೆ ರಕ್ಷಣೆ ಇಲ್ಲವೇ?…..ಎಂದು ಇತ್ಯಾದಿಯಾಗಿ ಮಡಿಕೇರಿಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾದದ್ದು ಕಳೆದ ಜೂನ್ 17ರಂದು ರಾತ್ರಿ ಜಿಲ್ಲಾ ಕೇಂದ್ರ ಮಡಿಕೇರಿಯ ಮೈತ್ರಿ ಹಾಲ್ ಬಳಿ ಇರುವ ಪೊಲೀಸ್ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು.

    ಪೊಲೀಸರ ಮನೆಗಳಿಗೆ ಕನ್ನ ಹಾಕಿದ್ದ ಖದೀಮರು ಸುಮಾರು ಎಂಟು ಮನೆಗಳ ಬೀಗ ಹೊಡೆದು ರೂ. 90,000 ನಗದು ಸೇರಿದಂತೆ ಸ್ವಲ್ಪ ಪ್ರಮಾಣದ ಚಿನ್ನ-ಬೆಳ್ಳಿ ಆಭರಣಗಳನ್ನು ಕಳ್ಳರು ಕಳ್ಳತನ ಮಾಡುವ ಮೂಲಕ ಕೊಡಗು ಪೊಲೀಸರಿಗೆ ಎಸೆದಿದ್ದ ಸವಾಲನ್ನು ನಮ್ಮೆಲ್ಲರ ನೆಚ್ಚಿನ ಎಸ್.ಪಿ. ಸಾಹೇಬರು ಸವಾಲಾಗಿಯೇ ಸ್ವೀಕರಿಸಿ ಪ್ರಕರಣವನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ವಿವಿಧ ತಂಡಗಳನ್ನು ರಚಿಸಿ ಆ ತಂಡಗಳಿಗೆ ಸಿಸಿಟಿವಿ ಪರಿಶೀಲಿಸುವ, ಮೊಬೈಲ್ ಟವರ್ ಡಂಪ್ ಪರಿಶೀಲಿಸುವ, ರಾಜ್ಯ – ಅಂತರ್ ರಾಜ್ಯ MOB ಗಳ ಮಾಹಿತಿ ಸಂಗ್ರಹಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನೀಡಿ ಪ್ರತಿದಿನ ರಾತ್ರಿ ವಿಡಿಯೋ ಕಾನ್ಫರೆನ್ಸ್ ನಲ್ಲಿ ದೈನಂದಿನ ಪ್ರಗತಿಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡುತ್ತಿದ್ದು, ಈ ಬಗ್ಗೆ ರಚಿತವಾದ ಪತ್ತೆ ತಂಡಗಳು ಕೊಡಗು, ಮಂಗಳೂರು, ಉಡುಪಿ, ಹಾಸನ,ಚಿಕ್ಕ ಮಗಳೂರು ಜಿಲ್ಲೆ ಸೇರಿದಂತೆ ಗೋವಾದವರೆಗೂ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದವು. ಈ ಎಲ್ಲಾ ಕೆಲಸ ಕಾರ್ಯಗಳಿಗೂ ಸಾಥ್ ನೀಡಿದ್ದು ಅಡಿಷನಲ್ ಎಸ್.ಪಿ. ಸಾಹೇಬರು.
    ಮಾನ್ಯ ಎ.ಎಸ್‌.ಪಿ ಸಾಹೇಬರು ರಚಿಸಿದ ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ಪ್ರಭಾಕರ್ ಮುನೀರ್ ರವರುಗಳ ತಂಡವು ಸರಿ ಸುಮಾರು 25 ದಿನಗಳ ಕಾಲ ಮಧ್ಯಪ್ರದೇಶದ ಧಾರ್, ಇಂದೋರ್, ರಾಜ್ ಘರ್,ತಾಂಡ ಪ್ರದೇಶಗಳಲ್ಲಿ ಸ್ಥಳೀಯರಂತೆ ಬೆರೆಯಲು ವೇಷ ಮರೆಸಿಕೊಂಡು ಕಾರ್ಯಾಚರಣೆ ಮಾಡಿದ್ದು, ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದು ತಿಂಡಿ-ಊಟ ಸರಿ ಹೊಂದದೆ ಎರಡು ಹೊತ್ತಿನ ಸರಳ ಊಟಕ್ಕೆ ತಮ್ಮನ್ನು ಒಗ್ಗಿಸಿಕೊಂಡು ಪ್ರಕರಣದ ಪ್ರಮುಖ ಆರೋಪಿಯಾದ ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕರ್ನಾಟಕ, ಗುಜರಾತ್ ,ತಮಿಳು ನಾಡು, ಮಧ್ಯಪ್ರದೇಶ ರಾಜ್ಯಗಳಲ್ಲಿ 2020 ನೇ ಇಸವಿಯಿಂದ ಈವರೆಗೆ ಸರಿ ಸುಮಾರು 20 ಕ್ಕೂ ಹೆಚ್ಚು ಕಳ್ಳತನಗಳನ್ನು ಮಾಡಿರುವ ಆರೋಪಿ ಸುರೇಶ್ ಸೇಂಗರ್ ಹಾಗೂ ಆತನಿಗೆ ಸಹಕರಿಸಿದ ಮನೀಶ್ ಎಂಬುವವರನ್ನು ಖಚಿತ ಮಾಹಿತಿಯೊಂದಿಗೆ ದಿನಾಂಕ 16.8.24 ರಂದು ಅಂತಿಮವಾಗಿ ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡುವ ಮೂಲಕ ಕೊಡಗು ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದ ಪೊಲೀಸ್ ಕ್ವಾಟ್ರರ್ಸ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿರುತ್ತಾರೆ.

    ಈ ಪ್ರಕರಣಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳಿಗೆ ಪ್ರೇರಣೆಯನ್ನು ನೀಡಿ ಸೂಕ್ತ ಸಲಹೆ -ಮಾರ್ಗದರ್ಶನ, ಅಗತ್ಯವಿರುವ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟು ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸಲು ಕಾರಣಿಕರ್ತರಾದ ಕೆ.ರಾಮರಾಜನ್, ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರಿಗೆ ಅನಂತ ನಮನಗಳು. ಈ ಕಾರ್ಯಕ್ಕೆ ಒತ್ತಾಸೆಯಾಗಿ ನಿಂತ ದಿನೇಶ್ ಕುಮಾರ್ ಕೆ.ಎಸ್.ಪಿ.ಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರಿಗೆ ಹಾಗೂ ಸೂರಜ್ ಕೆ.ಎಸ್.ಪಿ.ಎಸ್. ಡಿ,ವೈ,ಎಸ್,ಪಿ ಮಡಿಕೇರಿ ಉಪ ವಿಭಾಗ ರವರುಗಳಿಗೆ ಧನ್ಯವಾದಗಳು.

    ಪೊಲೀಸ್ ಕ್ವಾಟ್ರಸ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲು ಜಿಲ್ಲೆಯ ಹಲವಾರು ಪೊಲೀಸ್ ಅಧಿಕಾರಿ-ಸಿಬ್ಬಂದಿಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಆಹರ್ನಿಶಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದು, ಎಲ್ಲರಿಗೂ ವಿಶೇಷ ಧನ್ಯವಾದಗಳು.

    *ಇಂತಿ,*
    *ಮಡಿಕೇರಿ ನಗರ ಪೊಲೀಸ್*

    *ಕೊಡಗು ನ್ಯೂಸ್*

    Previous Articleಹೊದ್ದೂರು ಗ್ರಾಮದಲ್ಲಿ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ
    Next Article ವಿಕಲಚೇತನ ವ್ಯಕ್ತಿಗೆ ವೀಲ್ ಚೇರ್ ನೀಡಿದ ಧಾನಿ

    Related Posts

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026

    ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ

    September 11, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ

    September 13, 2026

    ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ

    September 11, 2026

    ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ

    September 11, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.