ನಾಪೋಕ್ಲು ವ್ಯಾಪ್ತಿಯ ಚೆರಿಯಪರಂಬು ಭಾಗದಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಉಕ್ಕಿ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಹಾಗೂ ಸುತ್ತಮುತ್ತಲಿನ ಪರಿಸರದ ವೀಕ್ಷಿಸಿದ ಮಾಡಿದ ಶಾಸಕರು, ಅಧಿಕಾರಿಗಳೊಂದಿಗೆ ಸುರಕ್ಷತೆ ಕ್ರಮದ ಬಗ್ಗೆ ಚರ್ಚಿಸಿ ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಪ್ರವಾಹ ದಿಂದ ಸಂಪರ್ಕ ಕಡಿತ ಗೊಳ್ಳುವ ಈ ಸೇತುವೆಯ ಆಸುಪಾಸಿನಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿ ವೆಂಕಟ್ ರಾಜಾ, ಜಿ. ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗದ ಅಧಿಕಾರಿ ವಿನಾಯಕ ನರ್ವಾಡೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಇತರರು ಇದ್ದರು.
ಬ್ರೇಕಿಂಗ್ ನ್ಯೂಸ್
- ನೆಲ್ಲಿಹುದಿಕೇರಿ ಅಂಗನವಾಡಿಯಲ್ಲಿ ಗರ್ಭಿಣಿ ಮಹಿಳೆಗೆ ಅವಧಿ ಮುಗಿದ ಆಹಾರ ಕಿಟ್ ವಿತರಣೆ
- ಜಿಲ್ಲೆಯಾದ್ಯಂತ 630 ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ: 14ರಂದು ಮದ್ಯ ಮಾರಾಟ ನಿಷೇಧ
- ರಾಜ್ಯ ಹೆದ್ದಾರಿ ಮೇಕೇರಿಯಲ್ಲಿ ಗುಂಡಿಗಳದ್ದೇ ದರ್ಬಾರ್: ಯುವಕರಿಂದ ತಾತ್ಕಾಲಿಕ ದುರಸ್ತಿ
- ಕರಿಕೆ ಗಡಿಯಲ್ಲಿ ಕಡವೆ ಬೇಟೆ: ನಾಡ ಬಂದೂಕು, 40 ಕೆಜಿ ಮಾಂಸ ವಶ
- ಹಬ್ಬದ ಸಂಭ್ರಮಕ್ಕೆ ಶಬ್ದದ ಕಿರಿಕಿರಿ ಬೇಡ: ‘ಪ್ರೆಶರ್ ಮೈಕ್’ ನಿಷೇಧ
- ಮಡಿಕೇರಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ
- ಕೊಡಗಿನಲ್ಲೂ ಮುಂದುವರೆದ ಹೊಸ ಟ್ರೆಂಡ್: ಅಂದಿನ ಕಾಲ ನೋಡದವರೇ ಇಂದು 80ರ ದಶಕದ ಫೋಟೋಗಳಲ್ಲಿ ಮಿಂಚಿಂಗ್
- ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಧರ್ಮಜ ಉತ್ತಪ್ಪ ಮುಂದುವರಿಕೆ

