ಜೂ.09 ರಂದು ಪಿಂಚಣಿ ಅದಾಲತ್ ಸಭೆ 
ಅದಾಲತ್‍ನ ಮುಂದಿನ ಸಭೆಯು ಜೂನ್, 09 ರಂದು ಮಧ್ಯಾಹ್ನ 12 ಗಂಟೆಗೆ ಕೊಡಗು ಅಂಚೆ ವಿಭಾಗದ ವಿಭಾಗೀಯ ಕಚೇರಿ, ಸಿದ್ದಾಪುರ ರಸ್ತೆ ಅಶೋಕ್ ಪುರದಲ್ಲಿ ನಡೆಯಲಿದೆ.
ಸಭೆಯಲ್ಲಿ ಕೊಡಗು ಅಂಚೆ ವಿಭಾಗದ ಪೋಸ್ಟಲ್ ಪಿಂಚಣಿ ಸಂಬಂಧಿಸಿದ ಎಲ್ಲಾ ತರಹದ ಅಹವಾಲುಗಳನ್ನು ಸ್ವೀಕರಿಸಿ ಚರ್ಚಿಸಲಾಗುತ್ತದೆ. ಅಹವಾಲುಗಳಿದ್ದಲ್ಲಿ ‘ಪಿಂಚಣಿ ಅದಾಲತ್’ ಎಂದು ಬರೆದು ಅಂಚೆ ಅಧೀಕ್ಷಕರು, ಕೊಡಗು ಅಂಚೆ ವಿಭಾಗ, ಮಡಿಕೇರಿ ಇವರಿಗೆ ಜೂನ್, 06 ರೊಳಗೆ ತಲುಪುವಂತೆ ಕಳುಹಿಸಲು ಕೋರಿದೆ. ನಂತರ ಜೂನ್, 09 ರಂದು ನಡೆಯುವ ಸಭೆಯಲ್ಲಿ ಭಾಗವಹಿಸಬಹುದು ಎಂದು ಕೊಡಗು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

