Close Menu
Kodagu News
    ಹೊಸ ಸುದ್ದಿ

    ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

    October 29, 2026

    ಹಿರಿಯರಿಗೆ ಗೌರವ ನೀಡಿ, ಹಕ್ಕುಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ : ಶುಭ

    October 29, 2026

    ಪೌರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

    October 28, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ
    • ಹಿರಿಯರಿಗೆ ಗೌರವ ನೀಡಿ, ಹಕ್ಕುಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ : ಶುಭ
    • ಪೌರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ
    • ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆಗೆ ಯತ್ನ: ೯ ಮಂದಿ ಬಂಧನ
    • ಮಡಿಕೇರಿಯಲ್ಲಿ ಗುಂಡೇಟಿನಿಂದ ವ್ಯಕ್ತಿ ಸಾವು
    • ಕೆರೆಗೆ ಕಾರು ಬಿದ್ದು ಒಂದೇ ಕುಟುಂಬದ ಮೂವರ ಸಾವು: ಮೃತರ ಕುಟುಂಬಕ್ಕೆ ಶಾಸಕ ಪೊನ್ನಣ್ಣ ಸಾಂತ್ವನ
    • ಮಡಿಕೇರಿಯಲ್ಲಿ ದಸರಾ ಶುಭಾಶಯದ ಫ್ಲೆಕ್ಸ್‌ಗೆ ಹಾನಿ ಆರೋಪ: ಪೊಲೀಸ್ ಠಾಣೆಗೆ ಕಾಂಗ್ರೆಸ್ ದೂರು
    • ಖರ್ಗೆ ಹೇಳಿಕೆ ಖಂಡಿಸಿ ಮಡಿಕೇರಿಯಲ್ಲಿ ಬಿಜೆಪಿ ಪ್ರತಿಭಟನೆ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಅಂತರರಾಷ್ಟ್ರೀಯ»ಹಿರಿಯರಿಗೆ ಗೌರವ ನೀಡಿ, ಹಕ್ಕುಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ : ಶುಭ
    ಅಂತರರಾಷ್ಟ್ರೀಯ

    ಹಿರಿಯರಿಗೆ ಗೌರವ ನೀಡಿ, ಹಕ್ಕುಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ : ಶುಭ

    ಮಡಿಕೇರಿ -ಹಿರಿಯರು ಸಂತಸದಿಂದ ಇರುವ ಮನೆ ಹಾಗೂ ಸಮಾಜ ಉತ್ತಮವಾಗಿರಲು ಸಾಧ್ಯ. ಆದ್ದರಿಂದ ಹಿರಿಯರನ್ನು ಗೌರವಿಸುವುದರ ಜೊತೆಗೆ, ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದರು.

    ಭಾರತೀಯ ಸಂಸ್ಕøತಿಯಲ್ಲಿ “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ” ಎಂಬ ಉದಾತ್ತ ಪರಂಪರೆಯಿದೆ. ಹಿರಿಯರಿಗೆ ದೊರೆಯಬೇಕಾದ ಆಸ್ತಿ ಹಕ್ಕುಗಳು ಮತ್ತು ನಿರ್ವಹಣಾ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

    ಇಂದಿನ ಜೆನ್ ಝಿ ಯುವ ಪೀಳಿಗೆಗೆ ಕೇವಲ ಉಪದೇಶ ಅಥವಾ ಭಾಷಣಗಳ ಮೂಲಕ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಅವರ ಮನೋಭಾವವನ್ನು ಅರ್ಥಮಾಡಿಕೊಂಡು, ಸೂಕ್ತ ವಿಧಾನಗಳ ಮೂಲಕ ಸಂವಹನ ನಡೆಸಬೇಕು. ಹಿರಿಯರ ಅನುಭವ ಮತ್ತು ಅವರು ತೋರಿಸಿಕೊಟ್ಟ ಮಾರ್ಗದ ಮಹತ್ವವನ್ನು ಯುವಜನರು ಅರಿತುಕೊಳ್ಳಬೇಕು ಎಂದು ಹೇಳಿದರು.

    ಮಡಿಕೇರಿ ಮಹಿಳಾ ಠಾಣೆಯ ಸಿಪಿಐ ಉಮೇಶ್ ಕುಮಾರ್ ಅವರು ಮಾತನಾಡಿ, ಹಿರಿಯ ನಾಗರಿಕರ ಸುರಕ್ಷತೆ ಮತ್ತು ರಕ್ಷಣೆಗೆ ಪೆÇಲೀಸ್ ಇಲಾಖೆ ವತಿಯಿಂದ ಬೀಟ್ ವ್ಯವಸ್ಥೆಯ ಮೂಲಕ ನಿಗಾ ವಹಿಸಲಾಗುತ್ತಿದ್ದು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಪೆÇಲೀಸ್ ನೆರವು ಪಡೆಯಬಹುದು ಎಂದು ತಿಳಿಸಿದರು.

    ವಕೀಲರಾದ ಮೀನಾ ಕುಮಾರಿ ಅವರು ಮಾತನಾಡಿ ಕಾನೂನು ಅನುಷ್ಠಾನದಲ್ಲಿ ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಮಾತನಾಡಿ, ಹಿರಿಯ ನಾಗರಿಕರ ಪಾಲನೆ, ಪೆÇೀಷಣೆ ಮತ್ತು ನಿರ್ವಹಣೆ ಮಾಡುವುದು ಮಕ್ಕಳ ಕಾನೂನುಬದ್ಧ ಜವಾಬ್ದಾರಿಯಾಗಿದೆ. ನಿರ್ವಹಣೆ ಎಂದರೆ ಕೇವಲ ಊಟ ನೀಡುವುದು ಮಾತ್ರವಲ್ಲ, ಹಿರಿಯ ನಾಗರಿಕರಿಗೆ ಅಗತ್ಯವಾದ ಬಟ್ಟೆ, ಸುರಕ್ಷಿತ ವಸತಿ, ವೈದ್ಯಕೀಯ ಆರೈಕೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಒದಗಿಸುವುದೂ ಇದರ ಭಾಗವಾಗಿದೆ ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸುಮಂಗಲಾ ಜಿ.ಹಿರೇಮನಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. ಹಿರಿಯ ನಾಗರಿಕರಾದ ಸುನಂದ ಪ್ರಾರ್ಥಿಸಿದರು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲ ಸ್ವಾಗತಿಸಿದರು, ಮಾಹಿತಿ ಸಲಹೆಗಾರರಾದ ನವೀನ್ ನಿರೂಪಿಸಿ, ವಂದಿಸಿದರು.

    Previous Articleಪೌರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ
    Next Article ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

    Related Posts

    ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

    October 29, 2026

    ಪೌರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

    October 28, 2026

    ತಲಕಾವೇರಿ ವನ್ಯಧಾಮದಲ್ಲಿ ಕಳ್ಳಬೇಟೆಗೆ ಯತ್ನ: ೯ ಮಂದಿ ಬಂಧನ

    October 28, 2026
    Demo
    Demo
    ಪ್ರಮುಖ ಸುದ್ದಿ

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಜಯಲಕ್ಷ್ಮಿ ರಾಯಕೋಡ ಅಧಿಕಾರ ಸ್ವೀಕಾರ

    October 29, 2026

    ಹಿರಿಯರಿಗೆ ಗೌರವ ನೀಡಿ, ಹಕ್ಕುಗಳು ಸಕಾಲದಲ್ಲಿ ದೊರೆಯುವಂತೆ ಕ್ರಮವಹಿಸಿ : ಶುಭ

    October 29, 2026

    ಪೌರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

    October 28, 2026
    Big News

    ಆಸ್ಪತ್ರೆ ಖರ್ಚಿಗಾಗಿ ಜನರ ಹಣ ಬಳಸದ ಕೊಡಗಿನ ಶಾಸಕರು

    October 8, 2026

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.