Screenshot

Screenshot
Screenshot
Screenshot
Screenshot
Screenshot
Screenshot
Screenshot

ಮಡಿಕೇರಿ: ಕೊಡಗಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಇದೀಗ ಮಳೆ ಆರಂಭವಾಗುತ್ತಲೇ ಧ್ವನಿ ಎತ್ತಿದ್ದಾರೆ.

ಕಳೆದ ಒಂದು ವಾರದಿಂದ ಜಿಲ್ಲೆಯ ಪ್ರಮುಖ ಜಿಲ್ಲಾ ರಸ್ತೆಗಳ ಮೂಲಕ ಪ್ರಯಾಣ ಬೆಳೆಸಿ ರಸ್ತೆಗಳ ಫ್ಯಾಕ್ಟ್ ಚೆಕ್ ಮಾಡುತ್ತಿರುವ ರವಿ ಕುಶಾಲಪ್ಪ ನೇರವಾಗಿ ಕೊಡಗಿನ ಶಾಸಕರನ್ನು, ಅವರ ಫೇಸ್ ಬುಕ್ ಖಾತೆಯಲ್ಲಿ ಹದಗೆಟ್ಟ ರಸ್ತೆಗಳ ಫೋಟೋ ಪೋಸ್ಟ್ ಮಾಡುವ ಮೂಲಕವೇ ಅವರನ್ನು ಪ್ರಶ್ನಿಸಲು ಆರಂಭಿಸಿದ್ದಾರೆ.

ಯಾವ್ಯಾವ ಊರಿನ ರಸ್ತೆಗಳ ಪೋಸ್ಟ್ ಹಾಕಲಾಗಿದೆ!

ರವಿ ಕುಶಾಲಪ್ಪ ಅವರ ಫೇಸ್ಬುಕ್ ಖಾತೆಯಲ್ಲಿ ನಾಲ್ಕು ದಿನಗಳ ಹಿಂದೆ “ಸಿದ್ದಾಪುರ – ಅಮ್ಮತಿ ರಸ್ತೆಯನ್ನು ನೋಡಿ ಕಣ್ತುಂಬಿಕೊಳ್ಳಿ. ಮೂರನೇ ಮಳೆಗಾಲ ಪ್ರಾರಂಭವಾಗಿದೆ. ರಸ್ತೆ ದುರಸ್ಥಿ ಮಾಡಲಿಕ್ಕೆ ನಮ್ಮ ಶಾಸಕರಿಗೆ ಇನ್ನೆಷು ಮಳೆಗಾಲಗಳು ಕಳಿಯಬೇಕ!” ಎಂಬ ಪದಗಳೊಂದಿಗೆ ಒಂದು ಪೋಸ್ಟ್ ಹಾಕಲಾಗಿತ್ತು.. ಆದರೆ ಈ ಫೋಟೋ ಪೋಸ್ಟ್ ಅಲ್ಲಿ ಮುಗಿಯಲಿಲ್ಲ.. ಗಂಟೆ ಕಳೆಯುವಾಗಲೇ ಮತ್ತೊಂದು ಪೋಸ್ಟ್ ಹೀಗೆ ಹಾಕಲಾಯಿತು..

“ಭಾಗಮಂಡಲ ಕರಿಕೆ ಅಂತರ್ ರಾಜ್ಯ ಹೆದ್ದಾರಿ

ಕೊಡಗಿನ ರಸ್ತೆಗಳ ಪರಿಸ್ಥಿಯಯನ್ನು ನೋಡಿ ಕಣ್ತುಂಬಿಕೊಳ್ಳಿ ಕೇವಲ ಪ್ರಚಾರದಲ್ಲಿಯೇ ಅಭಿವೃದ್ದಿ ಮಾಡುವ ನಮ್ಮ ಶಾಸಕರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ ಇದು!”

ಇಲ್ಲಿಗೂ ನಿಲ್ಲಿಸದ ಅವರು ಕರಿಕೆ ಬೇತುಕಾಯ ರಸ್ತೆ ಬಗ್ಗೆಯೂ ಫೋಟೋ ಪೋಸ್ಟ್ ಮಾಡಿ ಶಾಸಕರಿಗೆ ಟ್ಯಾಗ್ ಮಾಡಿ ಅವರ ಗಮನಕ್ಕೆ ತರಲು ಕಟುವಾಗಿಯೇ ಪ್ರಯತ್ನಿಸಿದ್ದಾರೆ.

ಈಗ ಮತ್ತದೇ ಬೇರೆ ಬೇರೆ ರಸ್ತೆಗಳ ಫೋಟೋಗಳನ್ನು ಹಾಕಿಕೊಂಡಿರುವ ಶಾಂತೆಯಂಡ ರವಿ ಕುಶಾಲಪ್ಪ

“ನಾಪೋಕ್ಲು, ಬಲ್ಲಮಾವಟಿ, ಅಯ್ಯಂಗೇರಿ, ಸಣ್ಣಪುಲಿಕೊಟು, ಭಾಗಮಂಡಲ ರಸ್ತೆಯ ಇಂದಿನ ಸೊಬಗು!”
ಒಂದಕ್ಕಿಂತ ಒಂದು ಅಯೋಮಯವಾಗಿದೆಯಲ್ಲ” ಎಂದು ಜನಪ್ರತಿನಿಧಿಯಗಳನ್ನು ಪ್ರಶ್ನೆ ಮಾಡಿದ್ದಾರೆ.

ಪಾರಣೆ ಬಾವಲಿ ರಸ್ತೆಯ ಬಗ್ಗೆಯೂ ಪೋಸ್ಟ್ ಹಾಕಿಕೊಂಡಿರುವ ಅವರು ರಸ್ತೆಯ ಒಂದು ವಿಡಿಯೋ ತುಣುಕು ಕೂಡ ತಮ್ಮ ರವಿ ಕುಶಾಲಪ್ಪ ಬಿಜೆಪಿ ಎಂಬ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

ಅಲ್ಲದೆ “ಪೊನ್ನಪ್ಪಸಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೇಸಗೂರು ರಸ್ತೆಯ ಇಂದಿನ ಚಿತ್ರಣ” ಎಂದು ಉಲ್ಲೇಕಿಸಿ ಒಂದು ವಿಡಿಯೋ ಕೂಡ ಹಾಕಲಾಗಿದ್ದು ಕಾಂಗ್ರೆಸ್ ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಈ ರಸ್ತೆ ತಿತಿಮತಿಯಿಂದ ಬಲ್ಲ್ಯಮುಂಡೂರು ಕಾನೂರು ಕುಟ್ಟಕ್ಕೆ ಹೋಗುವ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ಬೆಂಗಳೂರು, ಮೈಸೂರು ಭಾಗಗಳಿಂದ ಬರುವ ಪ್ರವಾಸಿಗರು ಮತ್ತು ಕೇರಳಕ್ಕೆ ಹೋಗುವವರು ಸೇರಿ ಬಹಳ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿರುತ್ತದೆ
ಈ ರಸ್ತೆಯು ಬಹಳ ಹದಗೆಟ್ಟಿದ್ದು ಮಾಡಿದ ತೇಪೆ ಕಾಮಗಾರಿ ಕಿತ್ತು ಹೋಗಿದ್ದು ಅಲ್ಲಲ್ಲಿ ಗುಂಡಿ ಬಿದ್ದು ನೀರು ತುಂಬಿಕೊಂಡಿದೆ
ಇದು ಯಾವಾಗ ಸರಿ ಹೊಂದುವುದು ಎಂದು ಜನರ ಬೇಸರ… ಎಂದು ಅವರು ತಮ್ಮ ಫೇಸ್ ಬುಕ್ ನಲ್ಲಿ ಫೋಟೋ ಸಮೇತ ಆಕ್ರೋಶ ಹಂಚಿಕೊಂಡಿದ್ದು ಕೊಡಗಿನಲ್ಲಿ ರಸ್ತೆ ಕ್ಯಾತೆ ಮತ್ತೆ ಶುರುವಾದಂತಿದೆ..

Exit mobile version