ಶಾಲೆಯನ್ನು ಮುಂದಿಟ್ಟು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ….!!!
30 ಗಿಡ… 1,00,000 ಹತ್ತಿರದ ಬಿಲ್ಲು…!?


ಎಮ್ಮೆಮಾಡು:ಅರಣ್ಯ ಅಧಿಕಾರಿಗಳು ಪಡಿಯಾಣಿ ಶಾಲೆಯಲ್ಲಿ ಸುಮಾರು 30 ಗಿಡವನ್ನು ನೆಟ್ಟು ಸುಮಾರು ರೂ 74,290 ಬಿಲ್ಲನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಹೆಸರಲ್ಲಿ ಮಾಡಿದ್ದು, ಇದು ನಿಜಕ್ಕೂ ಗ್ರಾಮಸ್ತರನ್ನು ಮೂರ್ಖರಾನ್ನಾಗಿಸಿ, ಸಾರ್ವಜನಿಕರ ಹಣವನ್ನು ಗುಳುಂ ಮಾಡಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು, ಇದಕ್ಕೆ ಸಂಭಂದ ಪಟ್ಟವರು ಉತ್ತರಿಸಬೇಕಾಗಿದೆ.
ಅರಣ್ಯ ಅಧಿಕಾರಿಗಳು ಒಂದಿಷ್ಟು ಮರ ಗಿಡಗಳನ್ನು ತಂದು,
ಶಾಲೆಯ ಪಕ್ಕದ ಮನೆಯಿಂದ ಗುದ್ದಲಿ ಪಡೆದು ಸ್ವಲ್ಪಗಿಡ ಗಳನ್ನು ನೆಟ್ಟು ಈ ಬಿಲ್ಲನ್ನು ಪಾಸ್ ಮಾಡಿದ್ದಾರೆ!!!
ಈ ಪ್ರಕರಣ ಸರಿಯೇ ಆಗಿದ್ದಲ್ಲಿ ಗ್ರಾಮಸ್ಥರು ದಯವಿಟ್ಟು ತಮ್ಮ ಮೌನವನ್ನು ಮುರಿದು ,ಇಂತಹಾ ಮಹಾ ಭ್ರಷ್ಟಾಚಾರ ದ ಅಧಿಕಾರಿಗಳ ವಿರುದ್ಧ ನಿಲ್ಲಬೇಕಿದೆ.
ಕಾನೂನಾತ್ಮಕ ವಾಗಿ ಇದರ ಪರಿಶೀಲನೆಯನ್ನು ನಡೆಸಿ, ಕ್ರಮ ಕೈಗೊಳ್ಳಬೇಕಿದೆ.
ಅಂದಾಜು ಮೊತ್ತ. 74,290
ಸಾಮಗ್ರಿ ಮೊತ್ತ 24,907
ಕೂಲಿ ಮೊತ್ತ 49,383
ಒಂದು ದಿನದ ಕೂಲಿ 370
ಒಟ್ಟು ಮಾನವ ದಿನ 133
ಹೀಗೆ ಸಾರ್ವಜನಿಕವಾಗಿ ಫಲಕದಲ್ಲಿ ಉಲ್ಲೆಖಿಸಿದ್ದು, ಕೆಲಸ ಮಾತ್ರ ಶೋಚನಿಯ ವಾಗಿದೆ.
ಪಂಚಾಯಿತಿ ಆಡಳಿತವು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ತಿಳಿಸಲಾಗಿದೆ.

