Close Menu
Kodagu News
    ಹೊಸ ಸುದ್ದಿ

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ಪ್ರಾದೇಶಿಕ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ

    August 9, 2026

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ವಲಯ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ*

    August 9, 2026

    ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ

    August 9, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ಪ್ರಾದೇಶಿಕ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ
    • ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ವಲಯ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ*
    • ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ
    • ಕಾಫಿ ತೋಟದಲ್ಲಿ ಕಾಡಾನೆ ದಾಳಿ: ಕಾರ್ಮಿಕನಿಗೆ ಗಂಭೀರ ಗಾಯ
    • ಮಳೆ–ಗಾಳಿಯಲ್ಲೂ ಬಸ್‌ ನಿಲ್ದಾಣವೇ ಆಸರೆ: ವೃದ್ಧನಿಗೆ ನೆರವಿನ ಹಸ್ತ ಬೇಕಿದೆ
    • ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಮಹಾಸಭೆ ಸಾಧಕ ಪತ್ರಕತ೯ರಿಗೆ ಸನ್ಮಾನ
    • ಆಟವಾಡುತ್ತಾ ಶಾಶ್ವತ ನಿದ್ರೆಗೆ ಜಾರಿದ ಅಪೂರ್ವ… ಕಣ್ಣೀರಿಟ್ಟ ಕುಟುಂಬಕ್ಕೆ ಮಂತರ್ ಗೌಡ ಸಾಂತ್ವನ
    • ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆಟೋ ಚಾಲಕನಿಗೆ ₹12 ಸಾವಿರ ದಂಡ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»ಜಿಲ್ಲೆ»ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಹಾಡುವುದು ಕಡ್ಡಾಯ : ಕೇಂದ್ರದಿಂದ ಮಾರ್ಗಸೂಚಿ
    ಜಿಲ್ಲೆ

    ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಹಾಡುವುದು ಕಡ್ಡಾಯ : ಕೇಂದ್ರದಿಂದ ಮಾರ್ಗಸೂಚಿ

    ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ ಹಾಡುವುದು ಕಡ್ಡಾಯ : ಕೇಂದ್ರದಿಂದ ಮಾರ್ಗಸೂಚಿ

    ನವದೆಹಲಿ: ದೇಶದ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ‘ವಂದೇ ಮಾತರಂ’ ಕಡ್ಡಾಯವಾಗಿ ಹಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ‘ವಂದೇ ಮಾತರಂ’ ಅನ್ನು ಇನ್ಮುಂದೆ ಅದರ ಮೂಲ 6 ಚರಣಗಳೊಂದಿಗೆ ಹಾಡಬೇಕು ಎಂದು ಗೃಹ ಸಚಿವಾಲಯವು ತಿಳಿಸಿದೆ. ರಾಷ್ಟ್ರೀಯ ಗೌರವ ಮತ್ತು ಏಕರೂಪದ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಮಾರ್ಗಸೂಚಿಗಳ ಅನ್ವಯ “ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತ್ತು ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಹಾಡಬೇಕು ಅಥವಾ ನುಡಿಸಬೇಕು ಮತ್ತು ಆಗ ಎಲ್ಲರೂ ಎದ್ದು ನಿಲ್ಲಬೇಕು” ಎಂದು ಸ್ಪಷ್ಟಪಡಿಸಲಾಗಿದೆ. 1937ರಲ್ಲಿ ಕಾಂಗ್ರೆಸ್ ತೆಗೆದುಹಾಕಿದ ನಾಲ್ಕು ಚರಣಗಳನ್ನು ಒಳಗೊಂಡಂತೆ, ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದು ಅಥವಾ ನುಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

     

    ಸರ್ಕಾರಿ ಸಮಾರಂಭಗಳಲ್ಲಿ 6 ಪ್ಯಾರಾಗಳನ್ನೊಳಗೊಂಡ ‘ವಂದೇ ಮಾತರಂ’ ಆವೃತ್ತಿಯನ್ನು ಹಾಡಲಾಗುತ್ತದೆ. ಇದರ ಒಟ್ಟು ಅವಧಿ 3 ನಿಮಿಷ 10 ಸೆಕೆಂಡುಗಳು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಜನ ಗಣ ಮನ ಮತ್ತು ರಾಷ್ಟ್ರೀಯ ಗೀತೆ ವಂದೇ ಮಾತರಂ ಎರಡನ್ನೂ ಪ್ರಸ್ತುತಪಡಿಸುವ ಸಂದರ್ಭದಲ್ಲಿ, ‘ವಂದೇ ಮಾತರಂ’ ಅನ್ನು ಮೊದಲು ಹಾಡಲಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೆ ಮಾತರಂ ಹಾಡುವಾಗ ಸಭಿಕರು ಎದ್ದು ನಿಂತು ಗೌರವ ಸಲ್ಲಿಸುವುದು ಕಡ್ಡಾಯ. ಆದರೆ, ಈ ನಿಯಮವು ಸಿನಿಮಾ ಮಂದಿರಗಳಂತಹ ಸಾರ್ವಜನಿಕ ಸ್ಥಳಗಳಿಗೆ ಅನ್ವಯಿಸುವುದಿಲ್ಲ.

    ಪದ್ಮ ಪ್ರಶಸ್ತಿ ಪ್ರದಾನದಂತಹ ನಾಗರಿಕ ಗೌರವ ಸಮಾರಂಭಗಳು ಮತ್ತು ರಾಷ್ಟ್ರಪತಿಗಳು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮದ ಆರಂಭ ಹಾಗೂ ಮುಕ್ತಾಯದ ವೇಳೆ ವಂದೇ ಮಾತರಂ ಅನ್ನು ಕಡ್ಡಾಯವಾಗಿ ಪ್ರಸ್ತುತಪಡಿಸಲಾಗುತ್ತದೆ.

     

    ಕೇಂದ್ರ ಸರ್ಕಾರವು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯಡಿಯಲ್ಲಿ, ರಾಷ್ಟ್ರಗೀತೆಗೆ ಇರುವ ಶಿಷ್ಟಾಚಾರಗಳನ್ನು ವಂದೇ ಮಾತರಂ ಗೀತೆಗೂ ವಿಸ್ತರಿಸಲು ಯೋಜಿಸಿದೆ. ಕಾನೂನಿನ ಪ್ರಕಾರ ರಾಷ್ಟ್ರಗೀತೆಗೆ ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನು ತಡೆಯುವ ವ್ಯಕ್ತಿಗೆ, ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದೀಗ ಈ ಶಿಷ್ಟಾಚಾರಗಳು ವಂದೇ ಮಾತರಂ ಗೀತೆಗೂ ಅನ್ವಯವಾಗುತ್ತವೆ.

    ಐತಿಹಾಸಿಕ ಹಿನ್ನೆಲೆ ಮತ್ತು 150ನೇ ವರ್ಷದ ಸಂಭ್ರಮ:

    ಬಂಕಿಮಚಂದ್ರ ಚಟರ್ಜಿಯವರು 1875ರ ನವೆಂಬರ್ 7ರಂದು (ಅಕ್ಷಯ ನವಮಿ) ‘ವಂದೇ ಮಾತರಂ’ ಗೀತೆಯನ್ನು ರಚಿಸಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ ಈ ಗೀತೆಗೆ ಈಗ 150 ವರ್ಷಗಳು ತುಂಬಿವೆ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ವರ್ಷಪೂರ್ತಿ ನಡೆಯುವ ಆಚರಣೆಗೆ ಚಾಲನೆ ನೀಡಿದ್ದಾರೆ. ಈ ಸಂಭ್ರಮಾಚರಣೆಯು ನವೆಂಬರ್ 7, 2025 ರಿಂದ ನವೆಂಬರ್ 7, 2026 ರವರೆಗೆ ದೇಶಾದ್ಯಂತ ನಡೆಯಲಿದೆ.

    Previous Articleಬೇಸಗೂರಿನಲ್ಲಿ ಸೆರೆ ಸಿಕ್ಕ ಹುಲಿಯನ್ನು ಶಾಸಕ ಎ. ಎ. ಎಸ್ ಪೊನ್ನಣ್ಣ ವೀಕ್ಷಿಸಿ ಸ್ಥಳಾಂತರಿಸಲು ಸೂಚಿಸಿದರು
    Next Article ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಫೆಬ್ರವರಿ 12ರ ಮುಷ್ಕರ ನಿಮಿತ್ತ ಕರಪತ್ರ ಬಿಡುಗಡೆ

    Related Posts

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ಪ್ರಾದೇಶಿಕ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ

    August 9, 2026

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ವಲಯ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ*

    August 9, 2026

    ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ

    August 9, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ಪ್ರಾದೇಶಿಕ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ

    August 9, 2026

    ICSE ಅಂತರ ಶಾಲಾ ಕಾಲ್ಚೆಂಡು ಪಂದ್ಯಾವಳಿ: ವಲಯ ಮಟ್ಟಕ್ಕೆ ಕಾಪ್ಸ್ ಶಾಲೆ ಆಯ್ಕೆ*

    August 9, 2026

    ಗ್ರಾಮೀಣ ಕ್ರೀಡೆಗಳು ನಮ್ಮ ಸಂಸ್ಕೃತಿಯ ಪ್ರತೀಕ: ಶಾಸಕ ಪೊನ್ನಣ್ಣ

    August 9, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.