ನಾಪೋಕ್ಲು ಕೊಡವ ಸಮಾಜದ ವತಿಯಿಂದ ಎ ಎಸ್ ಪೊನ್ನಣ್ಣನವರನ್ನು ಸನ್ಮಾನಿಸಲಾಯಿತು.
ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಯುಕ್ತ ಇಂದು ನಾಪೋಕ್ಲು ಭಾಗಕ್ಕೆ, ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಆಗಮಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಕೊಡವ ಸಮಾಜದ ವತಿಯಿಂದ ಮಾನ್ಯ ಶಾಸಕರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು ಹಾಗೂ ವಿಶೇಷ ಸನ್ಮಾನ ಏರ್ಪಡಿಸಲಾಯಿತು.
ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಚಳಿಗಾಲ ಅಧಿವೇಶನ-2025 ರಲ್ಲಿ, ಮಾನ್ಯ ಶಾಸಕರಾದ ಪೊನ್ನಣ್ಣ ರವರ ವಿಶೇಷ ಪ್ರಯತ್ನದಿಂದಾಗಿ, ಕರ್ನಾಟಕ ಭೂಕಂದಾಯ ವಿಧೇಯಕ ಅಂಗೀಕಾರ ಆಗಿರುವುದನ್ನು ಸಂಭ್ರಮಿಸಲು ಈ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾಯ್ದೆ ಅಂಗೀಕಾರ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕೊಡಗಿನ ಬಹುತೇಕ ಜನರನ್ನು ಕಾಡುತ್ತಿದ್ದ, ದಶಕಗಳ ಸಮಸ್ಯೆ ಯಾಗಿದ್ದ ಜಮ್ಮ ಹಾಗೂ ಪಟ್ಟೆದಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತಾಗಿದೆ. ಇದರಿಂದಾಗಿ ಬಹುತೇಕ ಕೊಡಗಿನ ಜನತೆಯು ಮುಂದಿನ ದಿನಗಳಲ್ಲಿ ನಿರಾಳವಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸುತ್ತಾ ಜೀವನ ಸಾಗಿಸಬಹುದು ಎಂದು ಸನ್ಮಾನ ಏರ್ಪಡಿಸಿದವರು ವಿವರಿಸಿದರು. ಮಾನ್ಯ ಶಾಸಕರಾದ ಪೊನ್ನಣ್ಣ ರವರ ಬದ್ಧತೆ, ದೂರ ದೃಷ್ಟಿ ಹಾಗೂ ಜನಪರ ಕಾಳಜಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕೊಡವ ಸಮಾಜದ ಪ್ರಮುಖರು, ಸಮಾಜಕ್ಕೆ ನಿಜವಾದ ರಾಜಕೀಯ ಬದ್ಧತೆ ಹಾಗೂ ಸಮಾಜ ಸೇವೆಯನ್ನು ಮಾನ್ಯ ಶಾಸಕರಾದ ಪೊನ್ನಣ್ಣ ರವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಡವ ಸಮಾಜದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಕೊಡಗು ನ್ಯೂಸ್

