
ಮಡಿಕೇರಿಯಲ್ಲಿ ಮಂಡ್ಯದ ಯುವಕನಿಗೆ ಹನಿಟ್ರ್ಯಾಪ್ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮತ್ತೊಪ್ಪ ಆರೋಪಿಯನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ
ಮೂಲತ ಮಂಡ್ಯದ ಮಹದೇವ ಎಂಬಾತನನ್ನು ಮಡಿಕೇರಿಗೆ ಕರೆಸಿಕೊಂಡು ಕೋಣೆಯೊಳಗೆ ಕೂಡಿಹಾಕಿ ಹಲ್ಲೆ ನಡೆಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಆಟೋ ಚಾಲಕ ರವಿ ನಿನ್ನೆ ತಲೆಮರೆಸಿಕೊಂಡಿದ್ದ.
ಮಡಿಕೇರಿಯಲ್ಲಿ ಪೇಪರ್ ಹಾಕುವ ವೃತ್ತಿ ಮಾಡಿಕೊಂಡಿರುವ ರವಿ ಶನಿವಾರ ಬೆಳಿಗ್ಗೆ ಮಹದೇವ ಕೂಡಿಹಕ್ಕಿದ್ದ ಮನೆಯಿಂದ ತಪ್ಪಿಸಿಕೊಳ್ಳುವ ಸಂದರ್ಭ ತನ್ನ ಆಟೋದಲ್ಲಿ ಆತನನ್ನು ಬಲವಂತವಾಗಿ ಅಪಹರಿಸುವ ಪ್ರಯತ್ನ ನಡೆದಿತ್ತು. ರವಿಯೊಂದಿಗೆ ದರ್ಶನ್ ರೈ ಎಂಬಾತನು ಪೊಲೀಸರ ಬಂದಿಯಾಗಿದ್ದು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
*ಕೊಡಗು ನ್ಯೂಸ್*

