ವಿರಾಜಪೇಟೆಯಲ್ಲಿ ಆಯೋಜನೆಗೊಂಡ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಸಭೆಯಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ  ಅವರು ಭಾಗವಹಿಸಿದರು. ವಿರಾಜಪೇಟೆಯ ವರ್ತಕರು ಪ್ರಮುಖವಾಗಿ ಇರುವ ಈ ಸಹಕಾರ ಸಂಘದ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಹಾಗೂ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಅಧ್ಯಕ್ಷರು ಕಾಶಿ ಕಾವೇರಪ್ಪ, ಶಾಹುಲ್ ಹಮೀದ್, ಜಂಟಿ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಸುರೇಶ್, ನಿರ್ದೇಶಕರುಗಳಾದ ರಘು ನಾಣಯ್ಯ, ಬೋಪಣ್ಣ, ನಂದಿ, ಸಲಾಂ, ಶಿವದಾಸ್, ಅಬ್ದುಲ್ ರೌಫ್, ಭಗತ್ ಸಿಂಗ್, ಸಲಹೆಗಾರರಾದ ಸೋಮಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Exit mobile version