ಚುನಾವಣಾ ಪ್ರಣಾಳಿಕೆಯಂತೆ ವಿರಾಜಪೇಟೆಗೆ ಜಿಲ್ಲಾಸ್ಪತ್ರೆ ತಂದ ಶಾಸಕ ಪೊನ್ನಣ್ಣ

ಮಡಿಕೇರಿ: ವಿರಾಜಪೇಟೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಇನ್ನು ಮುಂದೆ ಆಧುನಿಕ ಸಲಕರಣೆಗಳನ್ನೊಳಗೊಂಡ ಜಿಲ್ಲಾಸ್ಪತ್ರೆಯ ಸೌಲಭ್ಯ ದೊರೆಯಲಿದೆ.

ವಿರಾಜಪೇಟೆ ಶಾಸಕ ಪೊನ್ನಣ್ಣ ಅವರ ಮುತುವರ್ಜಿಯಿಂದ 60 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು 400 ಹಾಸಿಗೆಯೊಂದಿಗೆ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು ಮೊದಲ ಹಂತದಲ್ಲಿ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಇದೆ ನವಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಪೊನ್ನಣ್ಣ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟು 95 ಕೋಟಿ ವೆಚ್ಚದಲ್ಲಿ ಹಂತ ಹಂತವಾಗಿ ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಲಿರುವ ವಿರಾಜಪೇಟೆ ತಾಲೂಕು ಆಸ್ಪತ್ರೆಗೆ ಇದೆ ನವಂಬರ್ ತಿಂಗಳಿನಲ್ಲಿ ಭೂಮಿ ಪೂಜೆ ನಡೆಯುವ ಸಾಧ್ಯತೆಯಿದೆ. ಇದೆ ಮೊದಲ ಬಾರಿಗೆ ಮತ್ತು ರಾಜ್ಯದಲ್ಲಿ ತಾಲೂಕು ಕೇಂದ್ರಲ್ಲಿ ಜಿಲ್ಲಾಸ್ಪತ್ರೆಯನ್ನು ತಂದುಕೊಟ್ಟ ಹೆಗ್ಗಳಿಕೆಗೂ ಶಾಸಕ ಪೊನ್ನಣ್ಣ ಪಾತ್ರರಾಗಿದ್ದಾರೆ.

2023 ರ ಚುನಾವಣೆ ಸಂದರ್ಭ ತಮ್ಮ ಕ್ಷೇತ್ರದ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಹಾಗೂ ಚುನಾವಣಾ ಪ್ರಚಾರಗಳ ಭಾಷಣದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೇರಿಸುವ ಭರವಸೆಯನ್ನು ಶಾಸಕ ಪೊನ್ನಣ್ಣ ನೀಡಿದ್ದರು.

Exit mobile version